ಭದ್ರಾವತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇಲ್ಲಿನ ಕ್ರೈಂ ಗಳು ಒಂದೇ ಎರಡೇ..ರಾಜಕೀಯ ಕರಿ ನೆರಳಿನಲ್ಲಿ ನಲುಗಿ ಹೋಗಿರುವ ಅಧಿಕಾರಿಗಳು ಅಕ್ರಮಗಳು ಹಾಡಹಗಲೇ ನಡೆಯುತ್ತಿದ್ದರೂ, ಕಣ್ಣು ಮುಚ್ಚಿ ಕುಳಿತುಕೊಳ್ಳಬಾಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಅಕ್ರಮ ಕಲ್ಲು, ಮಣ್ಣು, ಮರಳು ದಂಧೆಗಳು ರಾಜಾಶ್ರಯದಲ್ಲಿ ನಡೆಯುತ್ತಿದೆ.
ಭದ್ರಾವತಿಯ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನರಸೀಪುರ ಗ್ರಾಮದಲ್ಲಿ ಅಕ್ರಕಮವಾಗಿ ಕಬ್ಬಿಣದ ಅದಿರನ್ನು ವರ್ಷದಿಂದ ಬಗೆಯಲಾಗುತ್ತಿದೆ. ಇದಕ್ಕೆ ರಾಜಕೀಯ ಆಶ್ರಯವಿದೆ ಎನ್ನಲಾಗಿದೆ. ನೆನ್ನೆ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಜೆಸಿಬಿ ಹಾಗು ಲಾರಿ ಟ್ರಾಕ್ಟರ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳಿಗೆ ಗ್ರಾಮಸ್ಥರು ಸರಣಿಯಾಗಿ ಫೋನ್ ಕರೆ ಮಾಡಿದರೂ, ಫೋನ್ ಎತ್ತಲಿಲ್ಲ.
ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!
ಎತ್ತಿದರೂ, ನಾನೊಬ್ಬನೇ ಅಧಿಕಾರಿ ಏನು ಮಾಡಲು ಸಾಧ್ಯ ಎಂದು ಹೇಳಿ ಕೈತೊಳೆದುಕೊಂಡರು ಎನ್ನುತ್ತಾರೆ ಗ್ರಾಮಸ್ಥರು. ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾಗಿರುವ ಹಿರಿಯ ಗಣಿ ವಿಜ್ಞಾನಿ ಪಿ.ಕೆ ನಾಯಕ್ ರವರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಥಳೀಯರು ಎದುರು ನೋಡುತ್ತಿದ್ದಾರೆ. ನೆನ್ನೆ ಪ್ರಕರಣವು ಎಫ್.ಐ..ಆರ್ ಆಗದೆ ಹೋದಲ್ಲಿ ಲೋಕಾಯುಕ್ತ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಘಟನೆಯ ಆಳಕ್ಕೆ ಇಳಿದು, ತನಿಖೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕಿದೆ..