ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಕೇಸ್ನಲ್ಲಿ ಲಾಕ್ ಆಗಿರುವ ರನ್ಯಾ ಪ್ರಕರಣದ ತನಿಖೆಗೆ ಇಳಿದಿರುವ DRI ತನಿಖಾಧಿಕಾರಿಗಳಿಂದ ಸ್ಫೋಟಕ ಅಂಶಗಳು ಬಯಲಾಗ್ತಿವೆ. ಹೌದು ನಟಿ ರನ್ಯಾ ರಾವ್ ಮತ್ತು ತರುಣ್ ಚಿನ್ನ ಆಮದು ಮತ್ತು ರಫ್ತಿಗಾಗಿ 2023ರಲ್ಲಿ ವೈರಾ ಡೈಮಂಡ್ಸ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಕಂಪನಿ ತೆರೆದಿದ್ದರು.
ಈ ಕಂಪನಿ ಮೂಲಕ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಿಕೊಳ್ಳುತ್ತಿದ್ದರು. ಚಿನ್ನ ಖರೀದಿ ಮಾಡಿ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿಸಲಾಗುತ್ತಿತ್ತು. ಈ ಮಾಹಿತಿ ಪಡೆದು ಇಡಿ, ವೈರಾ ಡೈಮಂಡ್ಸ್ ಟ್ರೇಡಿಂಗ್ ಕಂಪನಿ ವಹಿವಾಟು ಪರಿಶೀಲನೆ ನಡೆಸುತ್ತಿದೆ. ತರುಣ್ ರಾಜು ವ್ಯವಹಾರದ ಮೇಲೂ ಇಡಿ ಅಧಿಕಾರಿಗಳ ಕಣ್ಣು ಇಟ್ಟಿದ್ದಾರೆ. ತರುಣ್ ರಾಜು ಬ್ಯಾಂಕ್ ಮಾಹಿತಿಯನ್ನು ಇಡಿ ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಹೈಡ್ರೋಪೋನಿಕ್ ತೋಟಗಾರಿಕೆ ಎಂದರೇನು? ಮಣ್ಣು ಇಲ್ಲದೆ ಸಸ್ಯಗಳನ್ನು ಹೇಗೆ ಬೆಳೆಸಬಹುದು? ಇಲ್ಲಿದೆ ಮಾಹಿತಿ
ಡಿಆರ್ಐ ತನಿಖೆ ವೇಳೆ ಹವಾಲದ ಮೂಲಕ ವ್ಯವಹಾರ ಎಂದು ತಿಳಿದಿತ್ತು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಡಿ ಕೂಡ ನಟಿ ರನ್ಯಾ ರಾವ್ ಮತ್ತು ತರುಣ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.