ನಿಮ್ಮ ಪಾದದ ಬೆರಳುಗಳನ್ನು ನೀವು ಎಂದಾದರೂ ಸರಿಯಾಗಿ ಗಮನಿಸಿದ್ದೀರಾ? ಸಾಮಾನ್ಯವಾಗಿ ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ ಕಾಲ್ಬೆರಳುಗಳು ಕೆಲವರಲ್ಲಿ ಒಂದೇ ಸಮವಾಗಿರುತ್ತದೆ, ಇನ್ನು ಕೆಲವರಲ್ಲಿ ಮೊದಲ ಎರಡು ಅಥವಾ ಮೂರು ಬೆರಳು ಸಮಾನವಾಗಿರುತ್ತದೆ ಕೊನೆಯ ಬೆರಳು ಚಿಕ್ಕದಾಗಿರುತ್ತವೆ. ಆದರೆ ಕೆಲವರಲ್ಲಿ ತೋರುಬೆರಳು ಹೆಬ್ಬೆರಳಿಗಿಂತ ದೊಡ್ಡದಾಗಿರುತ್ತದೆ ಅಂತವರು ಎಲ್ಲದರಲ್ಲೂ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ನಿಜವೇ? ಸಾಮುದ್ರಿಕಾ ಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.
ನಿಮ್ಮ ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ರೆ ಮಾತ್ರವಲ್ಲ ವ್ಯಕ್ತಿ ಕಾಲಿನ ಬೆರಳುಗಳೇ ಆತನ ವ್ಯಕ್ತಿತ್ವ ಎಂತಹದ್ದು ಎಂದು ತಿಳಿಸುತ್ತದೆ. ಹಾಗಿದ್ರೆ ಜ್ಯೋತಿಷ್ಯದ ಪ್ರಕಾರ ವ್ಯಕ್ತಿತ ಕಾಲಿನ ಬೆರಳಿನ ಆಧಾರದಲ್ಲಿ ವ್ಯಕ್ತಿತ್ವ ಹೇಗಿರಲಿದೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.
ಜ್ಯೋತಿಷ್ಯದಲ್ಲಿ ಅನೇಕ ಅಂಗಗಳಿವೆ. ಅವುಗಳಲ್ಲಿ ಒಂದು ಸಾಮುದ್ರಿಕಾಶಾಸ್ತ್ರ. ಈ ಸಾಮುದ್ರಿಕಾ ಶಾಸ್ತ್ರದಲ್ಲಿ ಮುಖ, ಹಸ್ತ ಸಾಮುದ್ರಿಕಾ, ಅಂಗ ಸಾಮುದ್ರಿಕಾ ಹಾಗೂ ಪಾದ ಸಾಮುದ್ರಿಕಾ ಎಂಬೆಲ್ಲಾ ಅಂಗಳಿದ್ದು, ಅವುಗಳ ಮೂಲಕ ನಾವು ನಮ್ಮ ಭವಿಷ್ಯವನ್ನ ಊಹಿಸಬಹುದು. ಈ ಸಾಮುದ್ರಿಕಾ ಶಾಸ್ತ್ರದಲ್ಲಿ ಅಂಗೈ, ಪಾದ, ಬೆರಳುಗಳ ಆಕಾರವನ್ನ ವಿಮರ್ಷಿಸಲಾಗುತ್ತದೆ. ಈ ಮೂಲಕ ನಮ್ಮ ಜೀವನ ಹೇಗಿರುತ್ತದೆ ಎಂಬುದನ್ನ ನಾವು ತಿಳಿದುಕೊಳ್ಳಬಹುದು. ಹಾಗಿದ್ರೆ ಕಾಲಿನ ಬೆರಳುಗಳ ಆಧಾರದಲ್ಲಿ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತೆ ಎಂದು ತಿಳಿಯೋಣ.
ನಿಮ್ಮ ಪಾದದ ಬೆರಳುಗಳನ್ನು ನೀವು ಎಂದಾದರೂ ಸರಿಯಾಗಿ ಗಮನಿಸಿದ್ದೀರಾ? ಸಾಮಾನ್ಯವಾಗಿ ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ ಕಾಲ್ಬೆರಳುಗಳು ಕೆಲವರಲ್ಲಿ ಒಂದೇ ಸಮವಾಗಿರುತ್ತದೆ, ಇನ್ನು ಕೆಲವರಲ್ಲಿ ಮೊದಲ ಎರಡು ಅಥವಾ ಮೂರು ಬೆರಳು ಸಮಾನವಾಗಿರುತ್ತದೆ ಕೊನೆಯ ಬೆರಳು ಚಿಕ್ಕದಾಗಿರುತ್ತವೆ.
ಬ್ಯಾಂಕ್ ನಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಇಲ್ಲಿದೆ ಭರ್ಜರಿ ಉದ್ಯೋಗ!
ಆದರೆ ಕೆಲವರಲ್ಲಿ ತೋರುಬೆರಳು ಹೆಬ್ಬೆರಳಿಗಿಂತ ದೊಡ್ಡದಾಗಿರುತ್ತದೆ ಅಂತವರು ಎಲ್ಲದರಲ್ಲೂ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ನಿಜವೇ? ಸಾಮುದ್ರಿಕಾ ಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.
ನಿಮ್ಮ ಕಾಲಿನ ಎಲ್ಲಾ ಬೆರಳುಗಳು ಒಂದೇ ಸಮನಾಗಿದ್ದರೆ. ಇದರರ್ಥ ನೀವು ತುಂಬಾ ವಿಶ್ವಾಸಾರ್ಹ ವ್ಯಕ್ತಿ. ನಿಮ್ಮಲ್ಲಿರುವ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತೀರಿ. ಇದರರ್ಥ ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ. ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತೀರಿ ಎಂದು ಹೇಳಲಾಗಿದೆ.
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಯಾರ ಕಾಲಿನ 2ನೇ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿರುತ್ತದೆಯೋ ಅವರು ತುಂಬಾ ಹಠಮಾರಿಗಳು ಎನ್ನಲಾಗುತ್ತದೆ. ಯಾವುದರೆ ಬಗ್ಗೆಯಾದರೂ ಒಮ್ಮೆ ನಿರ್ಧಾರ ಮಾಡಿದರೆ ಅದನ್ನು ಮಾಡಿಯೇ ತಿರುತ್ತಾರೆ. ಅವರು ಎಂದಿಗೂ ತಮ್ಮ ನಿರ್ಧಾರವನ್ನು ಮತ್ತೆ ಬದಲಾಯಿಸುವುದಿಲ್ಲ, ಅವರು ಯಾವುದೇ ವಿಚಾರದಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
ಈ ರೀತಿ ಬೆರಳು ಇರುವವರು ಎಂದಿಗೂ ಇತರರ ಮುಂದೆ ತಲೆ ಬಾಗುವುದಿಲ್ಲ. ಇವರು ಯಾವಾಗಲೂ ಸ್ವಾಭಿಮಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಇದೇ ಸ್ವಭಾವದಿಂದ ಕೆಲವೊಮ್ಮೆ ಸಮಸ್ಯೆಗಳನ್ನ ಸಹ ಅನುಭವಿಸಬೇಕಾಗುತ್ತದೆ. ಹಾಗೆಯೇ, ಈ ರೀತಿಯ ಜನರು ಎಂದಿಗೂ ತಮ್ಮ ಪ್ರೀತಿ-ಪಾತ್ರರನ್ನ ಬಿಟ್ಟುಕೊಡುವುದಿಲ್ಲ. ಅವರು ಅದೆಷ್ಟೇ ಕಷ್ಟ ಬಂದರೂ ಜಗತ್ತನ್ನ ಅವರಿಗಾಗಿ ಎದುರು ಹಾಕಿಕೊಳ್ಳುತ್ತಾರೆ.
ಇನ್ನು ಹೆಣ್ಣು ಮಕ್ಕಳ ಬೆರಳು ಹೀಗಿದ್ದರೆ ಅವರು ಗಂಡನನ್ನ ತುಂಬಾ ಕಂಟ್ರೋಲ್ ಮಾಡ್ತಾರೆ ಎಂದು ಸಹ ಹೇಳಲಾಗುತ್ತದೆ. ಈ ಜನರಿಗೆ ಜಾಸ್ತಿ ಕಲ್ಪನೆ ಮತ್ತು ಸೃಜನಶೀಲತೆ ಇರುತ್ತದೆ. ಇದರಿಂದ ಅವರು ಅನೇಕ ಪ್ರಯೋಜನಗಳನ್ನ ಪಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೇ, ಇವರಿಗೆ ಉತತಮ ಜನರ ಸಂಪರ್ಕ ಸಹ ಇರುತ್ತದೆ.