ಹಿಂದೂ ಸಂಪ್ರದಾಯವು ಶುಕ್ರವಾರಕ್ಕೆ ಸಂಬಂಧಿಸಿದ ಪೂಜೆ ಮತ್ತು ಆಚರಣೆಗಳಿಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳನ್ನು ಹೊಂದಿದೆ. ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ದೇವಿಯು ಭಕ್ತರನ್ನು ಸದಾ ಮೆಚ್ಚಿಸುತ್ತಾಳೆ ಮತ್ತು ಮನೆಯಲ್ಲಿ ಯಾವುದೇ ಕೊರತೆ ಕಾಣಬರುವುದಿಲ್ಲ ಎಂಬ ನಂಬಿಕೆಯಿದೆ.
Murder Case: ಜಾಸ್ತಿ ಕುಡಿಬೇಡ ಮಗನೇ ಎಂದು ಬುದ್ಧಿವಾದ ಹೇಳಿದ ಅಪ್ಪನನ್ನೇ ಕೊಲೆಗೈದ ಪುತ್ರ!
ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ವಾದ ಮಹತ್ವವಿದೆ. ಸಂಪತ್ತಿನ ದೇವತೆ ಎಂದರೆ ಲಕ್ಷ್ಮಿ ಎನ್ನಲಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆ ಇದ್ದರೆ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ, ದೇವಿಯ ಕೃಪೆಯಿಂದ ಆರ್ಥಿಕವಾಗಿ ಲಾಭ ಸಹ ಆಗುತ್ತದೆ.
ಇನ್ನು ನಾವು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುವುದಲ್ಲದೆ ಸಂಪತ್ತು ಕೂಡ ಬರುತ್ತದೆ. ಶುಕ್ರವಾರವನ್ನ ಲಕ್ಷ್ಮಿ ದೇವಿಯ ವಾರ ಎನ್ನಲಾಗುತ್ತದೆ. ಆ ದಿನ ದೇವಿಯ ಆರಾಧನೆ ಮಾಡಿದರೆ ನಮ್ಮ ಕನಸು ನನಸಾಗುತ್ತದೆ. ಆದರೆ ದೇವಿಯ ಆರಾಧನೆ ಮಾಡಲು ಸಹ ಒಂದು ವಿಧಾನವಿದೆ.
ಹಣಕಾಸಿನ ಸಮಸ್ಯೆಗಳಿಂದ ಸುತ್ತುವರಿದಿರುವವರು, ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕೆಂದು ಬಯಸುವವರು ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡಬೇಕು. ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ ಈ 3 ಕೆಲಸಗಳನ್ನು ಮಾಡುವುದರಿಂದ ನಾವು ಹಣಕಾಸಿನ ಲಾಭವನ್ನು ಪಡೆದುಕೊಳ್ಳಬಹುದು. ಆ 3 ಕೆಲಸಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ..
1. ಮನೆಯ ಮುಖ್ಯ ದ್ವಾರದಲ್ಲಿ ದೀಪ ಹಚ್ಚಿಡಿ:
ಶುಕ್ರವಾರದ ದಿನದಂದು ನೀವು ನಿಮ್ಮ ಮನೆಯ ಮುಖ್ಯ ದ್ವಾರದ ಎರಡೂ ಬದಿಗಳಲ್ಲಿ ದೀಪವನ್ನು ಹಚ್ಚಿಡಬೇಕು. ಈ ಕೆಲಸ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ ಎನ್ನುವ ನಂಬಿಕೆಯಿದೆ. ಇದಲ್ಲದೇ ನೀವು ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಗೆ ಹಣ್ಣುಗಳನ್ನು ಮತ್ತು ಸಿಹಿತಿಂಡಿಗಳನ್ನು ಕೂಡ ಅರ್ಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
2. ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ:
ಬಿಳಿ ಬಣ್ಣವನ್ನು ಶುಕ್ರವಾರದ ಬಣ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಶುಕ್ರವಾರದ ದಿನದಂದು ಬಿಳಿ ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಕು ಮತ್ತು ಬಿಳಿ ಬಣ್ಣದ ಆಹಾರ ಪದಾರ್ಥಗಳನ್ನು ದಾನವಾಗಿ ನೀಡಬೇಕು. ಹಾಗೂ ಈ ದಿನದಂದು ಹಸುಗಳ ಸೇವೆಯನ್ನು ಮಾಡುವುದು ನಿಮಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ಹಸುಗಳಿಗೆ ಸಿಹಿ ಪದಾರ್ಥಗಳನ್ನು ತಿನ್ನಲು ನೀಡಬೇಕು. ಈ ಪುಟ್ಟ ಕೆಲಸವನ್ನು ನೀವು ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವೂ ಸದಾಕಾಲ ನಿಮ್ಮ ಮೇಲೆ ಇರುತ್ತದೆ
3. ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ:
ಶುಕ್ರವಾರದ ದಿನದಂದು ದೈಹಿಕ ಸ್ವಚ್ಛತೆಯ ಕಡೆಗೆ ವಿಶೇಷವಾದ ಕಾಳಜಿ ವಹಿಸಬೇಕು. ತಮ್ಮನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಈ ದಿನ ಮನೆಯನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದು ನೀವಿರುವ ಸ್ಥಳದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಶುಕ್ರವಾರದ ದಿನದಂದು ಮನೆಯನ್ನು ಶುದ್ಧವಾಗಿಟ್ಟುಕೊಳ್ಳುವುದರ ಬಗ್ಗೆ ವಿಶೇಷವಾದ ಕಾಳಜಿ ತೆಗೆದುಕೊಳ್ಳಬೇಕು. ಯಾಕೆಂದರೆ ಲಕ್ಷ್ಮಿ ದೇವಿ ಎಂದಿಗೂ ಅಶುದ್ಧವಾದ ಸ್ಥಳದಲ್ಲಿ ನೆಲೆಸುವುದಿಲ್ಲ ಎನ್ನುವ ನಂಬಿಕೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಶುಕ್ರವಾರದಂದು ಯಾವುದೇ ರೀತಿಯಾದ ಕೊಳಕನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಸ್ನಾನ ಮಾಡಿ ಲಕ್ಷ್ಮಿ ದೇವಿಯನ್ನು ಪೂಜಿಸಿ
4. ಶುಕ್ರವಾರದ ಮಂತ್ರ:
ಲಕ್ಷ್ಮಿ ದೇವಿಯನ್ನು ಸಂಜೆ ಅಂದರೆ ಮುಸ್ಸಂಜೆ ಸಮಯದಲ್ಲಿ ಪೂಜಿಸುವುದು ತುಂಬಾನೇ ಪ್ರಯೋಜನಕಾರಿಯಾಗಿದೆ. ಶುಕ್ರವಾರದ ದಿನದಂದು ಸ್ನಾನ ಮಾಡಿ ಶುದ್ಧರಾದ ಬಳಿಕ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಲಾಭದಾಯಕವಾಗಿರುತ್ತದೆ. ಈ ದಿನ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ. ಇದಲ್ಲದೆ ಈ ದಿನ ಮೊಸರು ತಿನ್ನುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ, ನೀವು ಮನೆಯಿಂದ ಹೊರಡುವ ಮೊದಲು ಮೊಸರನ್ನು ತಿಂದು ಹೊರಡಬೇಕು. ಈ ದಿನ ಉಪ್ಪನ್ನು ದಾನ ಮಾಡುವುದು ಮಂಗಳಕರ. ಶುಕ್ರವಾರದಂದು ‘ಓಂ ಶುಂ ಶುಕ್ರಾಯ ನಮಃ’ ಎನ್ನುವ ಮಂತ್ರವನ್ನು ಪಠಿಸುವುದ ಮಂಗಳಕರವಾಗಿರುತ್ತದೆ.