ಮುಖ್ಯವಾದ ವಿಚಾರವೆಂದರೆ ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. ಇದರಿಂದ ಮನೆಯಲ್ಲಿ ಹಲ್ಲಿಗಳು ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಆದ್ದರಿಂದ ಉಳಿದಿರುವ ಆಹಾರವನ್ನು ಎಂದಿಗೂ ಮನೆಯಲ್ಲಿ ತೆರೆದಿಡಬೇಡಿ. ಇದು ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಹಲ್ಲಿಗಳನ್ನು ಪರೋಕ್ಷವಾಗಿ ಆಕರ್ಷಿಸುತ್ತದೆ. ಇನ್ನು ಹಲ್ಲಿಗಳು ಕೀಟಗಳನ್ನು ತಿನ್ನುತ್ತವೆ.
ಮುಖ್ಯವಾದ ವಿಚಾರವೆಂದರೆ ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. ಇದರಿಂದ ಮನೆಯಲ್ಲಿ ಹಲ್ಲಿಗಳು ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಆದ್ದರಿಂದ ಉಳಿದಿರುವ ಆಹಾರವನ್ನು ಎಂದಿಗೂ ಮನೆಯಲ್ಲಿ ತೆರೆದಿಡಬೇಡಿ. ಇದು ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಹಲ್ಲಿಗಳನ್ನು ಪರೋಕ್ಷವಾಗಿ ಆಕರ್ಷಿಸುತ್ತದೆ. ಇನ್ನು ಹಲ್ಲಿಗಳು ಕೀಟಗಳನ್ನು ತಿನ್ನುತ್ತವೆ.
ಹಲ್ಲಿಗಳು ನಮ್ಮ ಮನೆಯ ಹತ್ತಿರ ಸುಳಿಯದಂತೆ ಮಾಡಲು, ನಮ್ಮಿಂದ ದೂರ ಹೋಗುವಂತೆ ಮಾಡಲು ಕೆಲವು ಉಪಾಯಗಳಿವೆ. ಈ ಸಣ್ಣ ಸರೀಸೃಪಗಳನ್ನು ಕೊಲ್ಲದೆ, ಮನೆಯಿಂದ ಹೊರಗೆ ಓಡಿಸುವುದಕ್ಕೆ ಕೆಲವು ಸರಳ ಮನೆಮದ್ದುಗಳನ್ನು ಕೊಡುತ್ತಿದ್ದೇವೆ ನೋಡಿ.
ಪೆಪ್ಪರ್ ಸ್ಪ್ರೇ ಬಳಸಿ
ಕಾಳುಮೆಣಸು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಈ ಕಾಳು ಮೆಣಸು ಹಲ್ಲಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಹಾಗೆಯೇ ಅವುಗಳಿಗೆ ಅಲರ್ಜಿ ಉಂಟುಮಾಡುತ್ತದೆ. ಪೆಪ್ಪರ್ ಸ್ಪ್ರೇ ಹಲ್ಲಿಯ ದೇಹದ ಮೇಲೆ ಸುಡುವ ಅನುಭವವನ್ನು ಉಂಟುಮಾಡುತ್ತದೆ. ಇದರಿಂದ ಹಲ್ಲಿಗಳು ದೂರವಿರುತ್ತವೆ. ಮನೆಯಲ್ಲಿಯೇ ಪೆಪ್ಪರ್ ಸ್ಪ್ರೇ ತಯಾರಿಸಬಹುದು. ಸ್ವಲ್ಪ ಕಾಳುಮೆಣಸು ಪುಡಿಯನ್ನು ನೀರಿನಲ್ಲಿ ಬೆರೆಸಿ ಹಲ್ಲಿ ಕಾಣಿಸಿಕೊಳ್ಳುವ ಮೂಲೆಗಳಲ್ಲಿ ಸಿಂಪಡಿಸಿ. ಕಾಳುಮೆಣಸು ಪುಡಿಯ ಬದಲು ಚಿಲ್ಲಿ ಫ್ಲೇಕ್ಸ್ ಅಥವಾ ಕೆಂಪು ಕಾರದ ಪುಡಿಯನ್ನು ಸಹ ಬಳಸಬಹುದು.
ಖಾಲಿ ಮೊಟ್ಟೆ ಚಿಪ್ಪು ಇರಿಸಿ
ಮನೆಯಲ್ಲಿ ಹಲ್ಲಿಗಳ ಕಾಟವಿದ್ದರೆ ಮೊಟ್ಟೆಯ ಚಿಪ್ಪುಗಳನ್ನು ಎಸೆಯಬೇಡಿ. ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಅವುಗಳನ್ನು ಬಳಸಿಕೊಳ್ಳಿ. ಬಟ್ಟೆ ಅಥವಾ ಟಿಶ್ಯೂ ಪೇಪರ್ ಸಹಾಯದಿಂದ ಮೊಟ್ಟೆ ಚಿಪ್ಪನ್ನು ಚೆನ್ನಾಗಿ ಒರೆಸಿ ಒಣಗಿಸಿ. ನಂತರ ಹಲ್ಲಿಗಳು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ಇರಿಸಿ. ಮೊಟ್ಟೆಯ ಚಿಪ್ಪುಗಳಿಂದ ಬರುವ ವಾಸನೆಯನ್ನು ಹಲ್ಲಿಗಳು ಹೆಚ್ಚು ಇಷ್ಟಪಡುವುದಿಲ್ಲ. ಈ ರೀತಿಯಾಗಿ ಮೊಟ್ಟೆಯ ಚಿಪ್ಪುಗಳನ್ನು ಇಡುವ ಮೂಲಕ ಹಲ್ಲಿಗಳನ್ನು ಸುಲಭವಾಗಿ ಓಡಿಸಬಹುದು.
ಈರುಳ್ಳಿ ಅಥವಾ ಬೆಳ್ಳುಳ್ಳಿ ಎಸಳು ಇರಿಸಿ
ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡೂ ಸಾಕಷ್ಟು ವಾಸನೆಯನ್ನು ಹೊಂದಿರುತ್ತವೆ. ಈ ವಾಸನೆ ಹಲ್ಲಿಗಳಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಎಸಳು ಬಳಸಿ. ಹಲ್ಲಿಗಳು ಮತ್ತೆಂದೂ ಮನೆ ಕಡೆ ಸುಳಿಯಬಾರದೆಂದರೆ, ಬೆಳ್ಳುಳ್ಳಿ ಮತ್ತು ಈರುಳ್ಳಿ ಚೂರುಗಳು ಅಥವಾ ಕೆಲವು ಎಸಳುಗಳನ್ನು ಹಲ್ಲಿಗಳು ಓಡಾಡುವ ಜಾಗದಲ್ಲಿ ಇರಿಸಿ. ಕೋಣೆ ಉದ್ದಕ್ಕೂ ಬೆಳ್ಳುಳ್ಳಿ ಮತ್ತು ಈರುಳ್ಳಿ ಘಾಟು ಹರಡಬೇಕೆಂದರೆ ಅದನ್ನು ಸಣ್ಣ ಟೇಬಲ್ ಫ್ಯಾನ್ ಬಳಿ ಸಹ ಇಡಬಹುದು.
ನ್ಯಾಪ್ತಲೀನ್ ಬಾಲ್ ಬಳಸಿ
ಇಲಿಗಳು ಮತ್ತು ತಿಗಣೆಯಂತಹ ಕೀಟಗಳಿಂದ ಬಟ್ಟೆಗಳನ್ನು ರಕ್ಷಿಸಲು ನ್ಯಾಪ್ತಲೀನ್ ಬಾಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಬಾಲ್ಗಳಿಂದ ಬರುವ ತೀವ್ರವಾದ ವಾಸನೆಯನ್ನು ಸಹಿಸಲಾಗದ ಕಾರಣ ಹಲ್ಲಿಗಳು ಮನೆಯಿಂದ ಓಡಿಹೋಗಲು ಇವು ಪರಿಣಾಮಕಾರಿ ಮಾರ್ಗ. ಮನೆ ಹಲ್ಲಿಯಿಂದ ಮುಕ್ತವಾಗಿರಲು ನ್ಯಾಪ್ತಲೀನ್ ಬಾಲ್ ಅನ್ನು ಡ್ರಾಯರ್ಗಳಲ್ಲಿ, ಕಿಚನ್ ಕ್ಯಾಬಿನೆಟ್ಗಳ ಬಳಿ ಹಾಗೂ ಮನೆಯ ಮೂಲೆ ಮೂಲೆಗಳಲ್ಲಿ ಇರಿಸಬಹುದು. ನೆನಪಿಡಿ, ಮಕ್ಕಳು ಓಡಾಡುವ ಸ್ಥಳಗಳಲ್ಲಿ ಅವುಗಳನ್ನು ಇಡದಂತೆ ಎಚ್ಚರವಹಿಸಿ. ಏಕೆಂದರೆ ಮಕ್ಕಳು ಆಕಸ್ಮಿಕವಾಗಿ ಅವುಗಳನ್ನು ನುಂಗುವ ಸಾಧ್ಯತೆ ಇರುತ್ತದೆ.
ಬೆಳ್ಳುಳ್ಳಿ:
ಬೆಳ್ಳುಳ್ಳಿ ಮತ್ತು ಲವಂಗದ ವಾಸನೆಯನ್ನು ಹಲ್ಲಿಗಳು ಇಷ್ಟಪಡುವುದಿಲ್ಲ. ಆದ್ದರಿಂದ ಬೆಳ್ಳುಳ್ಳಿ ಮತ್ತು ಲವಂಗವನ್ನು ಮನೆಯ ಸುತ್ತಲೂ ಇಡುವುದರಿಂದ ಹಲ್ಲಿಗಳು ದೂರ ಇರುತ್ತವೆ ಎಂದು ಹೇಳಲಾಗುತ್ತದೆ. ಹಲ್ಲಿಗಳು ವಾಸಿಸುವ ಸ್ಥಳಗಳ ಸುತ್ತಲೂ ಬೆಳ್ಳುಳ್ಳಿ ರಸವನ್ನು ಸಿಂಪಡಿಸಬಹುದು ಎಂದು ಹೇಳಲಾಗುತ್ತದೆ.