ತುಳಸಿ ಗಿಡವು ಮುಖ್ಯವಾಗಿ ಹಿಂದೂ ಧರ್ಮದ ಪ್ರತಿಯೊಂದು ಮನೆಗಳಲ್ಲೂ ನೋಡಬಹುದಾಗಿದೆ. ತುಳಸಿಯನ್ನು ಮುಂಜಾನೆ ಮತ್ತು ಸಂಜೆ ಎರಡೂ ಸಮಯದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿನ ನಂಬಿಕೆಯ ಪ್ರಕಾರ, ಯಾವ ವ್ಯಕ್ತಿಯ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಆ ಮನೆಯಲ್ಲಿ ಸದಾಕಾಲ ಸಂಪತ್ತಿನ ಒಡತಿಯಾದ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ.
ವಿವಾದದ ನಡುವೆಯೂ ತಿಮ್ಮಪ್ಪನ ಲಡ್ಡುಗೆ ಭಾರೀ ಬೇಡಿಕೆ: ಒಂದೇ ದಿನಕ್ಕೆ ಮಾರಾಟವಾದದೆಷ್ಟು!?
ಅದರಂತೆ ತುಳಸಿಯ ಬಳಿ ಈ ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಇದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ತುಳಸಿ ಗಿಡದ ಬಳಿ ಇಡಬಾರದ ವಸ್ತುಗಳು ಯಾವುವು ಎಂದು ತಿಳಿಯೋಣ.
ಪೊರಕೆ ಮತ್ತು ಕಸದ ಬುಟ್ಟಿ: ತುಳಸಿ ಗಿಡದ ಬಳಿ ಯಾವತ್ತೂ ಕಸದ ಬುಟ್ಟಿ ಅಥವಾ ಪೊರಕೆ ಇತ್ಯಾದಿಗಳನ್ನು ಇಡಬೇಡಿ. ತುಳಸಿ ಗಿಡವನ್ನು ಇಡುವ ಸ್ಥಳದಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು ಎಂಬುದನ್ನು ನೆನಪಿನಲ್ಲಿಡಿ.
ಪುರಾಣಗಳ ಪ್ರಕಾರ ಗಣೇಶ ಮತ್ತು ತುಳಸಿಗೆ ಆಗಿಬರುವುದಿಲ್ಲ. ಇವರಿಬ್ಬರ ವೈಮನಸ್ಸಿನ ಕಾರಣ, ತುಳಸಿಯ ಬಳಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು ಎಂದು ಹೇಳಲಾಗುತ್ತದೆ.
ಶಿವಲಿಂಗ ಅಥವಾ ಶಿವನ ಮೂರ್ತಿ ಇತ್ಯಾದಿಗಳನ್ನು ತುಳಸಿ ಗಿಡದ ಬಳಿ ಅಥವಾ ತುಳಸಿ ಪಾತ್ರೆಯಲ್ಲಿ ಇಡಬಾರದು. ಇದರ ಹಿಂದಿನ ನಂಬಿಕೆಯೆಂದರೆ ತುಳಸಿಯು ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು. ಆ ಜಲಂಧರನ ಕ್ರೌರ್ಯವು ಹೆಚ್ಚಾದಾಗ, ಶಿವನು ಅವನನ್ನು ಸಂಹಾರ ಮಾಡಿದ್ದನು. ಇದೇ ಕಾರಣದಿಂದ ಶಿವನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಬಳಸದೇ ಇರಲು ಕಾರಣ.
ಪಾದರಕ್ಷೆ ಮತ್ತು ಚಪ್ಪಲಿ: ತುಳಸಿ ಗಿಡ ಇರುವ ಜಾಗದಲ್ಲಿ ಪಾದರಕ್ಷೆ ಮತ್ತು ಚಪ್ಪಲಿಯನ್ನು ಇಡಬಾರದು. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು.
ತುಳಸಿ ಬಳಿ ಯಾವುದೇ ಮುಳ್ಳಿನ ಗಿಡಗಳು ಇರಬಾರದು. ತುಳಸಿ ಬಳಿ ಮುಳ್ಳಿನ ಗಿಡಗಳಿದ್ದರೆ ಮನೆಯಲ್ಲಿ ಬಹುಬೇಗ ನೆಗೆಟಿವಿಟಿ ಹರಡುತ್ತದೆ