ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅನೇಕಾನೇಕ ಸಂಗತಿಯನ್ನು ಹೇಳಲಾಗಿದೆ. ಸ್ನಾನದ ಬಗ್ಗೆಯೂ ಗ್ರಂಥದಲ್ಲಿ ವಿವರಿಸಲಾಗಿದೆ. ಮನುಷ್ಯ ಯಾವ ಸಮಯದಲ್ಲಿ ಸ್ನಾನ ಮಾಡಬೇಕು, ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು ಎಂಬುದು ಸೇರಿದಂತೆ ಹೇಗೆ ಸ್ನಾನ ಮಾಡಬೇಕು ಎನ್ನುವುದನ್ನು ಕೂಡ ಹೇಳಲಾಗಿದೆ.
ಆಗಾಗ್ಗೆ ಮನೆಯ ಹಿರಿಯರು ನಮಗೆ ಅನೇಕ ವಿಷಯಗಳಲ್ಲಿ ನಿರ್ಬಂಧ ಹೇರುವುದನ್ನು ಅಂದರೆ, ಅದನ್ನು ಮಾಡಬೇಡಿ.. ಇದನ್ನು ಮಾಡಬೇಡಿ ಎನ್ನುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಅಂತಹುದ್ದೇ ನಿಯಮಗಳಿದ್ದು, ಅವುಗಳನ್ನು ಅನುಸರಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ನಮ್ಮ ಧಾರ್ಮಿಕ ಗ್ರಂಥಗಳಲ್ಲಿಯೂ ಒಬ್ಬ ವ್ಯಕ್ತಿ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಹಾಗೂ ತಿನ್ನುವುದರಿಂದ ಹಿಡಿದು ಸ್ನಾನ ಮಾಡುವವರೆಗೂ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ.
ಎಸ್, ಬೆಳಗ್ಗೆ ಎದ್ದಕೂಡಲೇ ಸ್ನಾನ ಮಾಡಬೇಕು ಎಂದು ಎಲ್ಲರ ಮನೆಯಲ್ಲಿಯೂ ಹೇಳುತ್ತಾರೆ. ಕೆಲವರ ಸಂಪ್ರದಾಯದಲ್ಲಿ ಸ್ನಾನ ಮಾಡದೇ ಅಡುಗೆಮನೆ ಸಹ ಪ್ರವೇಶ ಮಾಡಲ್ಲ. ದೇವರಕೋಣೆಗೆ ಪ್ರವೇಶಿಸಬೇಕಾದ್ರೂ ಅತ್ಯಂತ ಮಡಿಯಿಂದ ಹೋಗಬೇಕು ಎಂದು ನಮ್ಮ ಶಾಸ್ತ್ರ ಹೇಳುತ್ತದೆ. ಸ್ನಾನ ಅಂದ್ರೆ ಶುದ್ಧವಾಗುವುದು ಎಂದರ್ಥ. ಸ್ನಾನ ಮಾಡೋದರಿಂದ ದೇಹ ಸ್ವಚ್ಛ ಆಗೋದರ ಜೊತೆಗೆ ಮನಸ್ಸು ನಿರಾಳ ಆಗುತ್ತದೆ
ಹೌದು, ವೈದಿಕ ಗ್ರಂಥಗಳಲ್ಲಿ ಸ್ನಾನಕ್ಕೆ ಕೆಲವು ವಿಧಾನಗಳಿವೆ ಎಂಬುದು ನಿಜ. ಸ್ನಾನ ಮಾಡುವಾಗ ನಾವು ತಪ್ಪಾಗಿ ಮಾಡುವ ಕೆಲವು ಕೆಲಸಗಳು ನಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಸ್ನಾನದ ವಿಧಿ ವಿಧಾನಗಳ ಬಗ್ಗೆ ತಿಳಿಸಲಾಗಿದೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸ್ನಾನ ಮಾಡುವಾಗ ಬೆತ್ತಲೆಯಾಗಿ ಸ್ನಾನ ಮಾಡಬಾರದು. ಹಲವರು ಬಟ್ಟೆ ಇಲ್ಲದೆ ಸ್ನಾನ ಮಾಡುತ್ತಾರೆ. ಬೆತ್ತಲೆಯಾಗಿ ಸ್ನಾನ ಮಾಡುವುದರಿಂದ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಸಂಪೂರ್ಣ ಬೆತ್ತಲೆಯಾಗಿ ಸ್ನಾನ ಮಾಡೋದರಿಂದ ಅಪಾಯ ಉಂಟಾಗುತ್ತದೆ. ಆ ತೊಂದರೆ ಏನು ಎಂಬುದರ ಮಾಹಿತಿ ಇಲ್ಲಿದೆ
ಹೆಚ್ಚು ಹೊತ್ತು ಬಟ್ಟೆ ಹಾಕದೆ ಸ್ನಾನ ಮಾಡಿದರೆ ದುಷ್ಟಶಕ್ತಿಗಳು ಮನೆಗೆ ನುಗ್ಗುತ್ತವೆ ಎಂಬ ನಂಬಿಕೆ ಇದೆ. ಇದರಿಂದ ಸ್ನಾನ ಮಾಡುವವರ ಮನಸ್ಸು ಮತ್ತು ಮನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಸ್ನಾನ ಮಾಡುವಾಗ ದೇಹದ ಮೇಲೆ ಏನನ್ನಾದರೂ ಧರಿಸಬೇಕೆಂದು ಹೇಳಲಾಗುತ್ತದೆ.
ಇನ್ನೊಂದು ಮುಖ್ಯವಾದ ವಿಷಯವೆಂದರೆ ಬಟ್ಟೆ ಇಲ್ಲದೆ ಸ್ನಾನ ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯೂ ಇದೆ. ಈ ರೀತಿಯಾಗಿ ಬೆತ್ತಲೆಯಾಗಿ ಸ್ನಾನ ಮಾಡೋದರಿಂದ ಆರ್ಥಿಕ ಸ್ಥಿತಿಗೆ ಧಕ್ಕೆಯಾಗುತ್ತದೆ. ಉಡುಗೆ ಎಂದರೆ ಚೂಡಿದಾರ್, ಸೀರೆ, ಅಂಗಿ ಅಲ್ಲ. ಕನಿಷ್ಠ ಟವೆಲ್ ನಲ್ಲಿ ಆಥವಾ ಇನ್ನರ್ ವಿಯರ್ ಸುತ್ತಿ ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ
ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಬೆತ್ತಲೆಯಾಗಿ ಸ್ನಾನ ಮಾಡಿದರೆ ಕೆಲವೊಮ್ಮೆ ಪಿತೃ ದೋಷ ಬರುತ್ತದೆ. ನೀವು ಬೆತ್ತಲೆಯಾಗಿ ಸ್ನಾನ ಮಾಡಿದರೆ ಪೂರ್ವಜರು ಕೋಪಗೊಳ್ಳುತ್ತಾರೆ. ಈ ಕಾರಣದಿಂದಾಗಿ ನೀವು ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸ್ನಾನದ ವೇಳೆ ತುಂಡು ಬಟ್ಟೆಯಾದರೂ ಧರಿಸಬೇಕು ಎಂದು ಹೇಳುತ್ತಾರೆ
ಬೆತ್ತಲೆಯಾಗಿ ಸ್ನಾನ ಮಾಡುವುದರ ಹಿಂದೆ ಇನ್ನೊಂದು ಪೌರಾಣಿಕ ಸತ್ಯವಿದೆ. ಕೃಷ್ಣನು ಗೋಪಿಕೆಯರು ಸ್ನಾನ ಮಾಡುವಾಗ ಅವರ ಬಟ್ಟೆಗಳನ್ನು ಮುಚ್ಚಿಟ್ಟಿದ್ದನು. ನಂತರ, ಗೋಪಿಕೆಯರು ಕೃಷ್ಣನನ್ನು ಬೇಡಿಕೊಂಡ ನಂತರ, ಅವನು ಅವರಿಗೆ ಬಟ್ಟೆಗಳನ್ನು ಕೊಟ್ಟನು. ಇದರರ್ಥ ಕೃಷ್ಣನು ಗೋಪಿಕೆಯರೊಂದಿಗೆ ಬೆತ್ತಲೆಯಾಗಿ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ,