ಕೆಲವು ವಸ್ತುಗಳಿಂದಲೇ ಸಮಸ್ಯೆ ಬಗೆಹರಿಯುತ್ತೆ ಎನ್ನಲಾಗುತ್ತದೆ. ಕೆಲವೊಂದು ಸಣ್ಣ ವಸ್ತುಗಳನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಒಬ್ಬ ವ್ಯಕ್ತಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಜೇಬಿನಲ್ಲಿ ಇಡಬೇಕು ಅನ್ನೋದನ್ನು ತಿಳಿಯೋಣ
ಒಬ್ಬ ತನ್ನ ಜೇಬನ್ನು ಎಂದಿಗೂ ಖಾಲಿಯಾಗಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಹಾಗೆ ಮಾಡುವುದರಿಂದ ವ್ಯಕ್ತಿಗೆ ಹಣದ ನಷ್ಟವಾಗಬಹುದು. ಆದ್ದರಿಂದ ನಿಮ್ಮ ಜೇಬಿನಲ್ಲಿ ಪರ್ಸ್ ಇರಿಸಿಕೊಳ್ಳಿ.
ನೀವು ಪ್ರತಿದಿನ ಲವಂಗವನ್ನು (clove) ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ, ಅದು ಯಶಸ್ಸನ್ನು ಸಾಧಿಸುವ ಅವಕಾಶಗಳನ್ನು ನೀಡುತ್ತದೆ. ಹಾಗಾಗಿ ಮನೆಯಿಂದ ಹೊರಡುವ ಮೊದಲು ಯಾವಾಗಲೂ 2 ಲವಂಗಗಳನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ.
ಯಾವಾಗಲೂ ನವಿಲು ಗರಿಗಳು (peacock feather) ಮತ್ತು ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ, ನಕಾರಾತ್ಮಕ ಶಕ್ತಿಯು (Negative Energy) ನಿಮ್ಮಿಂದ ದೂರ ಉಳಿಯುತ್ತದೆ. ಅಲ್ಲದೆ, ವ್ಯಕ್ತಿಯು ಅದೃಷ್ಟವನ್ನು (Luck) ಪಡೆಯುತ್ತಾನೆ.
ನಿಮ್ಮ ಜೇಬಿನಲ್ಲಿ ಬೆಳ್ಳಿ ನಾಣ್ಯವನ್ನು (silver coin) ಇಟ್ಟುಕೊಳ್ಳುವುದು ಸಿಕ್ಕಿ ಹಾಕಿಕೊಂಡ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚಿಸುತ್ತದೆ. ಇದರೊಂದಿಗೆ, ಶ್ರೀ ಯಂತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಸಹ ತುಂಬಾ ಶುಭವೆಂದು ಪರಿಗಣಿಸಲಾಗಿದೆ.