ಅಕ್ಕಿಯನ್ನು ಗಾಳಿಯಾಡದ ಕಂಟೇನರ್ಗಳಲ್ಲಿ ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸಲು ಸೂಚಿಸಲಾಗುತ್ತದೆ. ಆದರೆ, ಎಲ್ಲಾ ಪ್ರಯತ್ನಗಳು ಮತ್ತು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೂ, ಧಾನ್ಯಗಳಲ್ಲಿ ಕೀಟಗಳನ್ನು ಕಾಣಬಹುದು. ಮಳೆಗಾಲದಲ್ಲಿ ತೇವಾಂಶದಿಂದಾಗಿ ಕೀಟಗಳು ಧಾನ್ಯಗಳಲ್ಲಿ ಮತ್ತು ಅಕ್ಕಿಯಲ್ಲಿ ಹೆಚ್ಚಾಗುತ್ತದೆ. ಆದ್ದರಿಂದ, ಕೀಟಗಳನ್ನು ನೋಡಿದವರು ಅನ್ನ ತಿನ್ನಲು ಬಯಸುವುದಿಲ್ಲ.
ನೀವು ಅದನ್ನು ಎಷ್ಟು ಕ್ಲೀನ್ ಮಾಡಿದರೂ ಕೀಟಗಳು ಅಕ್ಕಿಯಿಂದ ದೂರ ಹೋಗುವುದು ಕಷ್ಟ ಹಾಗೂ ಸ್ವಚ್ಛಗೊಳಿಸಲು ಬಯಸಿದರೂ, ಆದರಿಂದ ಹೆಚ್ಚಿನ ಸಮಯ ವ್ಯರ್ಥವಾಗುತ್ತದೇ ಹೊರೆತು ಕೀಟಗಳು ದೂರ ಹೋಗುವುದಿಲ್ಲ. ಈ ಸಮಸ್ಯೆಗೆ ನಾವು ಕೆಲವು ಸುಲಭ ಪರಿಹಾರವನ್ನು ನೀಡುತ್ತೇವೆ. ಬನ್ನಿ ಆ ಸುಲಭ ಪರಿಹಾರ ಯಾವುದು ಎಂದು ನೋಡೋಣ.
ಬಿರಿಯಾನಿ ಎಲೆಗಳು
ಬಿರಿಯಾನಿ ಎಲೆಗಳನ್ನು ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅಕ್ಕಿಯನ್ನು ಕೀಟಗಳಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ. ಮನೆಯಲ್ಲಿ ತಂದಿಟ್ಟಿರುವ ಅಕ್ಕಿಯಲ್ಲಿ ಹುಳುವಾಗಿದ್ದರೆ, ಆ ಡಬ್ಬಕ್ಕೆ ಸ್ವಲ್ಪ ಬಿರಿಯಾನಿ ಎಲೆಗಳನ್ನು ಹಾಕಿ. ಇದರಿಂದ ಹುಳು, ಅಕ್ಕಿಯಿಂದ ಸುಲಭವಾಗಿ ಬೇರೆಯಾಗುತ್ತದೆ. ಮಾತ್ರವಲ್ಲ ವರ್ಷವಿಡೀ ಅಕ್ಕಿಗೆ ಹುಳು ಸೇರೋ ಭಯವಿರೋದಿಲ್ಲ.
ಬೇವಿನ ಎಲೆಗಳು
ಬೇವಿನ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಕಹಿ ರುಚಿಯನ್ನು ಹೊಂದಿರುವ ಕೀಟಗಳಿಂದ ಅಕ್ಕಿಯನ್ನು ರಕ್ಷಿಸುವಲ್ಲಿ ಈ ಎಲೆಗಳು ಪರಿಣಾಮಕಾರಿ. ಇದಕ್ಕಾಗಿ ಬೇವಿನ ಸೊಪ್ಪನ್ನು ಹತ್ತಿ ಬಟ್ಟೆಯಲ್ಲಿ ಕಟ್ಟಿ ಅಕ್ಕಿಯಿರುವ ಪಾತ್ರೆಯಲ್ಲಿ ಹಾಕಬೇಕು. ಇದರಿಂದ ಅಕ್ಕಿಯಲ್ಲಿರುವ ಎಲ್ಲಾ ಕೀಟಗಳು ನಾಶವಾಗುತ್ತವೆ.
ಬೆಂಕಿ ಕಡ್ಡಿಗಳು
ಅಕ್ಕಿಯನ್ನು ಹುಳುಗಳು ಮತ್ತು ಇತರ ಕೀಟಗಳಿಂದ ರಕ್ಷಿಸಲು ಬಯಸಿದರೆ.. ಅದನ್ನು ಸಂಗ್ರಹಿಸಿದ ಪಾತ್ರೆಯಲ್ಲಿ ಬೆಂಕಿಕಡ್ಡಿಗಳನ್ನು ಹಾಕುವುದು ಸಹ ಪ್ರಯೋಜನಕಾರಿಯಾಗಿದೆ.. ಇವುಗಳು ಅಕ್ಕಿಯ ಮೇಲೆ ಇರುವಂತೆ ನೋಡಿಕೊಳ್ಳಿ. ಇವುಗಳಿಂದಲೂ ಸಂಗ್ರಹಿಸಿಟ್ಟ ಅಕ್ಕಿಗೆ ಕೀಟಗಳು ಬರುವುದಿಲ್ಲ
ಲವಂಗ
ಲವಂಗವು ಅಕ್ಕಿಯಿಂದ ಹುಳುಗಳನ್ನು ಹೊರಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಕೆಲವು ಲವಂಗಗಳನ್ನು ತೆಗೆದುಕೊಂಡು ಅಕ್ಕಿ ಇರುವ ಪಾತ್ರೆಗಳಲ್ಲಿ ಇರಿಸಿ. ಇದು ಕೀಟಗಳು ಮತ್ತು ಇರುವೆಗಳು ಬರದಂತೆ ತಡೆಯುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಬಳಸುವುದರಿಂದ ಅಕ್ಕಿಯನ್ನು ಕೀಟಗಳಿಂದ ರಕ್ಷಿಸಬಹುದು. ಕತ್ತರಿಸಿದ ಬೆಳ್ಳುಳ್ಳಿಯನ್ನು ಅಕ್ಕಿಯ ಬಾಕ್ಸ್ನಲ್ಲಿ ಇರಿಸಿ. ಅದರ ಬಲವಾದ ವಾಸನೆಯಿಂದ ಕೀಟಗಳು, ಹುಳುಗಳು ಓಡಿಹೋಗುತ್ತವೆ.