ಪ್ರತಿ ವರ್ಷ ಸುಮಾರು 2.1 ಮಿಲಿಯನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಯಿಲೆಯು ಕಾಣಿಸಿಕೊಳ್ಳುತ್ತಿದೆ. ಸ್ತನದ ಹಾಲು ಉತ್ಪಾದಿಸುವ ಗ್ರಂಥಿಗಳಲ್ಲಿ ಅಥವಾ ಗ್ರಂಥಿಗಳಿಂದ ಮೊಲೆತೊಟ್ಟುಗಳಿಗೆ ಹಾಲನ್ನು ಸಾಗಿಸುವ ಮಾರ್ಗಗಳಲ್ಲಿ ಕ್ಯಾನ್ಸರ್ ರೂಪುಗೊಳ್ಳುತ್ತದೆ.
ಕಾಂಗ್ರೆಸ್ ಸರ್ಕಾರ ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಪ್ರಯತ್ನ -ಬೊಮ್ಮಾಯಿ
ಸ್ತನದ ಕೊಬ್ಬಿನ ಅಥವಾ ನಾರಿನ ಸಂಯೋಜಕ ಅಂಗಾಂಶವು ಕ್ಯಾನ್ಸರ್ ಕೋಶಗಳಿಗೆ ಹಾಟ್ಸ್ಪಾಟ್ ಆಗಿರಬಹುದು. ಕೆಲವು ಸಂದರ್ಭಗಳಲ್ಲಿ ಕ್ಯಾನ್ಸರ್ ಕೋಶಗಳು ನಿಮ್ಮ ತೋಳುಗಳ ಅಡಿಯಲ್ಲಿ ದುಗ್ಧರಸ ಗ್ರಂಥಿಗಳನ್ನು ತಲುಪಬಹುದು. ಅದಲ್ಲದೇ, ದೇಹದ ವಿವಿಧ ಭಾಗಗಳಿಗೆ ಹರಡುವ ಸಾಧ್ಯತೆಯು ಅಧಿಕವಾಗಿದೆ. ಆರಂಭಿಕ ಹಂತದಲ್ಲಿ ಈ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ಈ ಗಂಭೀರ ಕಾಯಿಲೆಯಿಂದ ಪಾರಾಗಬಹುದು.
ಸ್ತನ ಕ್ಯಾನ್ಸರ್ ಲಕ್ಷಣಗಳು:
ಸ್ತನ ಕ್ಯಾನ್ಸರ್ ಎದೆಯ ಅಂಗಾಂಶದಿಂದ ಬೆಳೆಯುವ ಕ್ಯಾನ್ಸರ್ ಆಗಿದ್ದು, ಈ ಕೆಲವು ಲಕ್ಷಣಗಳು ಕಂಡು ಬಂದರೆ ಅಂತಹವರಲ್ಲಿ ಸ್ತನ ಕ್ಯಾನ್ಸರ್ ಇದೆ ಎನ್ನುವುದನ್ನು ಸೂಚಿಸುತ್ತದೆ.
ಸ್ತನ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ. ಸ್ತನದ ಮಂದಗೊಳ್ಳುವಿಕೆ.
ಎದೆಯ ಸುತ್ತ ಬಟಾಣಿಯಂತಹ ಸಣ್ಣ ಗಡ್ಡೆಗಳು.
ಮುಟ್ಟಿನ ಸಮಯದಲ್ಲಿ ಕಂಕುಳ ಭಾಗಗಳಲ್ಲಿ ಅಥವಾ ಸ್ತನದ ಸುತ್ತ ಉಂಡೆಗಳು ಕಾಣಿಸಿಕೊಳ್ಳುತ್ತವೆ.
ಕಂಕುಳದ ಎರಡು ಭಾಗಗಳಲ್ಲಿ ಉಂಡೆ ಅಥವಾ ಊತ ಕಾಣಿಸುವುದು.
ಎದೆಯ ಚರ್ಮದಲ್ಲಿ ತೀವ್ರವಾದ ಬದಲಾವಣೆ ಉಂಟಾಗುವುದು.
ಸ್ತನ ಅಥವಾ ಮೊಲೆತೊಟ್ಟುಗಳ ಚರ್ಮದಲ್ಲಿ ಬದಲಾವಣೆಗಳು.
ಮೊಲೆತೊಟ್ಟುಗಳಿಂದ ಸ್ವಲ್ಪ ರಕ್ತಸ್ರಾವ ಅಥವಾ ದ್ರವ ವಿಸರ್ಜನೆ.
ಮೊಲೆತೊಟ್ಟುಗಳ ಚರ್ಮವು ಕೆಂಪು ಅಥವಾ ಕಿತ್ತಳೆ ಬಣ್ಣದ ಚರ್ಮವನ್ನು ಹೋಲುತ್ತದೆ.
ಈ ಕೆಲವು ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಈ ಮಹಾ ಮಾರಿ ರೋಗದಿಂದ ಪಾರಾಗಬಹುದು.