ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ಅಪ್ಲಿಕೇಶನ್ಗಳನ್ನು ಒದಗಿಸುವ ಗೂಗಲ್ನ ಅಧಿಕೃತ ಪ್ಲೇ ಸ್ಟೋರ್ನಲ್ಲಿ ಸೇರಿಕೊಂಡಿದ್ದ ನಕಲಿ ಮತ್ತು ಅನಧಿಕೃತ ಸುಮಾರು 36 ಕ್ಯಾಮರಾ ಆಯಪ್ಗಳನ್ನು ತೆಗೆದುಹಾಕಲಾಗಿದೆ. ಹೀಗಾಗಿ ನೀವು ಕೂಡ ನಿಮ್ಮ ಫೋನ್ನಲ್ಲಿ ಅವುಗಳನ್ನು ಬಳಸುತ್ತಿದ್ದರೆ, ತಕ್ಷಣ ತೆಗೆದುಹಾಕುವುದು ಉತ್ತಮ.
ಅಂದರೆ, ಗೂಗಲ್ ಪ್ಲೇ ಸ್ಟೋರ್ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆಯಪ್ಗಳನ್ನು ಗೂಗಲ್ ತೆಗೆದುಹಾಕುತ್ತದೆ. ಈ ಬಾರಿ ಗ್ರಾಹಕರ ಮಾಹಿತಿ ಕದಿಯುವ ಮತ್ತು ಫೋನ್ನಲ್ಲಿ ಅನಗತ್ಯ ಅಕ್ಸೆಸ್ ಪಡೆದುಕೊಳ್ಳುವ, ಸುಳ್ಳು ಜಾಹೀರಾತು ಹರಡುವ ಕ್ಯಾಮರಾ ಆಯಪ್ಗಳನ್ನು ಗೂಗಲ್ ಕಿತ್ತುಹಾಕಿದೆ. ಅವುಗಳ ವಿವರ ಇಲ್ಲಿದೆ. ಈ ಆಯಪ್ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಅನ್ಇನ್ಸ್ಟಾಲ್ ಮಾಡಿ. ಆ ಮೂಲಕ ಸಮಸ್ಯೆಯಿಂದ ಪಾರಾಗಿ ಗೂಗಲ್ ಎಚ್ಚರಿಕೆ ನೀಡಿದೆ.
ಇಲ್ಲಿದೆ ನೋಡಿ ಈ ಕ್ಯಾಮರಾ ಆಯಪ್
- ಯೊರೋಕೊ ಕ್ಯಾಮರಾ ಆಯಪ್
- ಸೋಲು ಕ್ಯಾಮರಾ ಆಯಪ್
- ಲೈಟ್ ಬ್ಯೂಟಿ ಕ್ಯಾಮರಾ ಆಯಪ್
- ಬ್ಯೂಟಿ ಕೊಲಾಜ್ ಲೈಟ್
- ಬ್ಯೂಟಿ ಕೊಲಾಜ್ ಲೈಟ್
- ಫೋಟೋ ಕೊಲಾಜ್ & ಬ್ಯೂಟಿ ಆಯಪ್
- ಬ್ಯೂಟಿ ಕ್ಯಾಮರಾ ಸೆಲ್ಫಿ ಆಯಪ್
- ಗೇಟಿ ಬ್ಯೂಟಿ ಕ್ಯಾಮರಾ
- ಪಾಂಡ್ ಸೆಲ್ಫಿ ಬ್ಯೂಟಿ ಕ್ಯಾಮರಾ
- ಬೆಂಬು ಸೆಲ್ಫಿ ಬ್ಯೂಟಿ ಕ್ಯಾಮರಾ
- ಮೂಡ್ ಫೋಟೋ ಎಡಿಟರ್
- ಸೆಲ್ಫಿ ಕ್ಯಾಮರಾ
- ಫಾಗ್ ಸೆಲ್ಫಿ ಬ್ಯೂಟಿ ಕ್ಯಾಮರಾ
- ಸನ್ನಿ ಬ್ಯೂಟಿ ಕ್ಯಾಮರಾ