ಮೊಬೈಲ್ ಬಳಕೆದಾರರಿಗೆ ಗೂಗಲ್ ಎಚ್ಚರಿಕೆ ನೀಡಿದೆ. ಏಕೆಂದರೆ ನಿಮ್ಮ ಮೊಬೈಲ್ನಲ್ಲಿರು ಕೆಲ ಆ್ಯಪ್ಗಳಿಂದ ಹ್ಯಾಕರ್ಗಳು ನಿಮ್ಮ ಮೊಬೈಲ್ ಹ್ಯಾಕ್ ಮಾಡಬಹುದು. ಹಾಗಾಗಿ ಕೂಡಲೇ ಅವುಗಳನ್ನು ಡಿಲೀಟ್ ಮಾಡುವಂತೆ ಗೂಗಲ್ ಎಚ್ಚರಿಕೆ ನೀಡಿದೆ.
Shani Effect: ನಿಮಗೆ ಶನಿ ಕಾಟವೇ!? ಹಾಗಿದ್ರೆ ತಪ್ಪದೇ ಹೀಗೆ ಮಾಡಿ, ಎಲ್ಲವೂ ಶುಭ ಆಗುತ್ತೆ!
ಇತ್ತೀಚೆಗೆ, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮಾಲೀಕತ್ವದ ಮೆಟಾ ಕಂಪನಿಯು ಫೋನ್ನಲ್ಲಿರುವ ಎಡಿಟಿಂಗ್ ಅಪ್ಲಿಕೇಶನ್ ಮೂಲಕ ಬಳಕೆದಾರರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
ವರದಿಯಲ್ಲಿ ಹಲವಾರು ಅಪ್ಲಿಕೇಶನ್ಗಳ ಹೆಸರನ್ನು ಗೂಗಲ್ ಬಹಿರಂಗಪಡಿಸಿದ್ದು, ಈ ಆ್ಯಪ್ಗಳು ಸುರಕ್ಷಿತವಾಗಿಲ್ಲ ಎಂದು ಮೆಟಾ ಕೂಡ ಹೇಳಿಕೊಂಡಿದೆ. ಇವುಗಳಲ್ಲಿ ಹೆಚ್ಚಿನವು ಫೋಟೋ ಎಡಿಟಿಂಗ್ ಅಪ್ಲಿಕೇಶನ್ಗಳಾಗಿವೆ. ಕೆಲವು ಸಾಕಷ್ಟು ಜನಪ್ರಿಯವಾಗಿವೆ. ಅನೇಕ ಬಳಕೆದಾರರು ಈ ಅಪ್ಲಿಕೇಶನ್ಗಳನ್ನು ಇಂದಿಗೂ ಬಳಸುತ್ತಲೂ ಇದ್ದಾರೆ
ಈ ಫೋಟೋ ಎಡಿಟಿಂಗ್ ಅಪ್ಲಿಕೇಶನ್ಗಳಲ್ಲಿ 16 ಚೀನೀ ಅಪ್ಲಿಕೇಶನ್ಗಳಾಗಿವೆ. 2020 ರಲ್ಲಿ, ಭಾರತ ಸರ್ಕಾರವು ನೂರಾರು ಚೀನೀ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಆದರೆ Google Play Store ಇನ್ನೂ BeautyPlus-Easy Photo Editor, BeautyCam, Selfie Camera-Beauty Camera & Photo Editor, B612- Beauty & Filter, Sweet Snap ನಂತಹ ಹತ್ತಾರು ಅಪ್ಲಿಕೇಶನ್ಗಳನ್ನು ಹೊಂದಿದೆ. ಲಕ್ಷಾಂತರ ಬಳಕೆದಾರರು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ
ಈ ಬಾರಿ, ಗೂಗಲ್ ಮೆಟಾ ರೀತಿಯ ವರದಿಯನ್ನು ಪ್ರಕಟಿಸಿದೆ. ಈ ಫೋಟೋ ಎಡಿಟಿಂಗ್ ಆ್ಯಪ್ ಗಳ ಮೂಲಕ ಮಾಲ್ ವೇರ್ಗಳನ್ನು ಸುಲಭವಾಗಿ ಕಳುಹಿಸಬಹುದು ಎಂದು ಟೆಕ್ ದೈತ್ಯ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇದು ಬಳಕೆದಾರರಿಗೆ ತುಂಬಾ ಹಾನಿಕಾರಕವಾಗಿದೆ.