ರಾತ್ರಿ ಹೊತ್ತು ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಿದೆಯೇ?, ಈ ಕಾರಣದಿಂದ ನಿದ್ರೆಗೆ ಅಡಚಣೆಯುಮಟಾಗುತ್ತಿದೆಯೇ?, ದಿನವಿಡೀ ಓಡಾಟುವುದು, ಅಥವಾ ಇಡೀ ದಿನ ನಿಂತು ಕೆಲಸ ಮಾಡುವುದು ಅಥವಾ ಒಂದೆಡೆ ಕುಳಿತು ಕೆಲಸ ಮಾಡುವುದರಿಂದ ಕಾಲು ಸೆಳೆತ ಉಂಟಾಗುವುದು.
ಈ ಮನೆಮದ್ದುಗಳು ಕಾಲು ನೋವನ್ನು ಹೋಗಲಾಡಿಸುತ್ತದೆ ಸಾಸಿವೆ ಎಣ್ಣೆ ಕಾಲು ನೋವಿನ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪರಿಹಾರ ದೊರೆಯುತ್ತದೆ. ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಇದು ಅತ್ಯುತ್ತಮ ಮತ್ತು ಅತ್ಯುತ್ತಮ ಪಾಕವಿಧಾನವೆಂದು ಪರಿಗಣಿಸಲಾಗಿದೆ. ಇದು ಪ್ರತಿ ಮನೆಯಲ್ಲೂ ಸುಲಭವಾಗಿ ದೊರೆಯುತ್ತದೆ.
ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತದೆ. ಆದರೆ ನಿರ್ಲಕ್ಷ್ಯದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ, ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ. ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಕಾಲು ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಬಹುದು.
ಪೊಟ್ಯಾಶಿಯಂ ಅಂಶದ ಕೊರತೆ ಉಂಟಾದರೆ, ಆಗಾಗ ಕಾಲುಗಳ ಸೆಳೆತ ಕಂಡು ಬರಬಹುದು. ಕಾಲುಗಳ ಸೆಳೆತಕ್ಕೆ ಪರಿಹಾರ ಬೇಕು ಎಂದರೆ ಅತಿ ಹೆಚ್ಚಿನ ಪೊಟ್ಯಾಶಿಯಂ ಅಂಶ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಆ್ಯಪಲ್ ಸೈಡರ್ ವಿನೇಗರ್
ಉಗುರು ಬೆಚ್ಚಗಿನ ನೀರಿನಲ್ಲಿ ಆಪಲ್ ಸೈಡರ್ ವಿನಿಗರ್ ಹಾಕಿ ಮಿಶ್ರಣ ಮಾಡಿ, ಪ್ರತಿದಿನ ಸ್ವಲ್ಪ ಸ್ವಲ್ಪ ಸೇವನೆ ಮಾಡಿದರೆ ಈ ಕಾಲು ಸೆಳೆಯುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಕಾಲಿನ ಭಾಗದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ ಕಾಲಿನ ಸೆಳೆತ ಕಡಿಮೆ ಮಾಡಲು ಮೆಗ್ನೀಷಿಯಂ ಸಹಾಯಕ ಎನ್ನಲಾಗುತ್ತದೆ, ಶುಂಠಿಯಲ್ಲಿ ಈ ಅಂಶ ಹೆಚ್ಚಿದ್ದು, ಕಾಲು ಸೆಳೆತಕ್ಕೆ ಪರಿಹಾರ ನೀಡುತ್ತದೆ. ನೀವು ಪ್ರತಿದಿನ ಶುಂಠಿ ಚಹಾ ಕುಡಿಯುವುದು ಬಹಳ ಮುಖ್ಯ.
ಒಂದು ಟೇಬಲ್ ಚಮಚ ತುರಿದ ಶುಂಠಿಯನ್ನು ನೀರಿನಲ್ಲಿ ಹಾಕಿ ಕುದಿಸಿ. ಅದಕ್ಕೆ ನಿಂಬೆರಸ ಮತ್ತೆ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ದಿನಕ್ಕೆ ಒಮ್ಮೆ ಸೇವನೆ ಮಾಡಿದರೆ ಉತ್ತಮ ಪ್ರಯೋಜನ ದೊರೆಯುತ್ತದೆ.
ಹಳದಿ ಸಾಸಿವೆ ಅಸಿಟಿಕ್ ಆಮ್ಲವನ್ನು ಹೊಂದಿದ್ದು. ಇದು ಕಾಲುಗಳು ಸೆಳೆತಕ್ಕೆ ಪರಿಣಾಮಕಾರಿ ಎನ್ನುತ್ತಾರೆ. ಕಾಲುಗಳಲ್ಲಿ ರಕ್ತ ಸಂಚಾರವನ್ನು ಸರಾಗಗೊಳಿಸಲು ಸಹಕಾರಿ ಎನ್ನಲಾಗುತ್ತದೆ.
ಹಳದಿ ಸಾಸಿವೆ ಎಣ್ಣೆಯನ್ನು ನಿಮ್ಮ ಕಾಳುಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.
ಐಸ್ ಕ್ಯೂಬ್ ಗಳನ್ನು 1 ಕಾಟನ್ ಬಟ್ಟೆಯಲ್ಲಿ ಸುತ್ತಿಕೊಂಡು ಅದನ್ನು ಸೆಳೆತವಿರುವ ಜಾಗದಲ್ಲಿ 15 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಬೇಕು, ಇದು ಅಲ್ಲಿನ ಭಾಗದ ನರಮಂಡಲಗಳಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡುತ್ತದೆ