ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, 9 ಕೋಟಿಗೂ ಹೆಚ್ಚು ರೈತರ ಖಾತೆಗೆ 21,000 ಕೋಟಿ ರೂ ವರ್ಗಾವಣೆ ಮಾಡಲಾಗಿದೆ.
ಐದು ವರ್ಷದಲ್ಲಿ ಒಟ್ಟಾರೆ 3 ಲಕ್ಷ ಕೋಟಿ ರೂ ಹಣ ರೈತರಿಗೆ ಸಿಕ್ಕಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅರ್ಹ ರೈತರಿಗೆ ವರ್ಷಕ್ಕೆ 6,000 ರೂ ಒದಗಿಸುತ್ತದೆ. ನಾಲ್ಕು ತಿಂಗಳಿಗೊಮ್ಮೆಯಂತೆ 2,000 ರೂಗಳನ್ನು ನೀಡಲಾಗುತ್ತದೆ
ಒಂದು ವೇಳೆ ನೀವು ಯೋಜನೆಯ ಫಲಾನುಭವಿಯಾಗಿ ಇಕೆವೈಸಿ ಮಾಡಿದ್ದರೂ ಹಣ ಬಂದಿಲ್ಲದಿದ್ದರೆ ದೂರು ಸಲ್ಲಿಸಲು ಅವಕಾಶ ಇದೆ. ಹೆಲ್ಪ್ ಡೆಸ್ಕ್ ತೆರೆದಿರುತ್ತದೆ, ಸಹಾಯವಾಣಿ ನಂಬರ್ಗಳಿವೆ. ಪಿಎಂ ಕಿಸಾನ್ ಪೋರ್ಟಲ್ಗೆ ಹೋಗಿ (pmkisan.gov.in/) ನೇರವಾಗಿ ದೂರು ಸಲ್ಲಿಸುವ ಅವಕಾಶ ಇದೆ.
ದೂರು ಸಲ್ಲಿಸುವ ಕ್ರಮಗಳು
- ಇಮೇಲ್ ಐಡಿ: [email protected] ಮತ್ತು [email protected]
- ಪಿಎಂ ಕಿಸಾನ್ ಹೆಲ್ಪ್ಲೈನ್ ನಂಬರ್: 155261 / 011-24300606
- ಪಿಎಂ ಕಿಸಾನ್ ಟೋಲ್ ಫ್ರೀ ನಂಬರ್: 1800-115-526
- ಪೋರ್ಟಲ್ನಲ್ಲಿ ನೇರ ಲಿಂಕ್: pmkisan.gov.in/Grievance.aspx
ಇಲ್ಲಿ ಪೋರ್ಟಲ್ನಲ್ಲಿ ನೀವು ಮೇಲಿನ ದೂರು ಪುಟ ತೆರೆದರೆ, ಅದರಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್, ಅಥವಾ ಮೊಬೈಲ್ ನಂಬರ್ ಅನ್ನು ನಮೂದಿಸಿ, ‘ಗೆಟ್ ಡೀಟೇಲ್ಸ್’ ಕ್ಲಿಕ್ ಮಾಡಿ.
ಪಿಎಂ ಕಿಸಾನ್ ಹಣ ಬರದೇ ಇರುವುದಕ್ಕೆ ಸಂಭಾವ್ಯ ಕಾರಣಗಳೇನು?
- ಬ್ಯಾಂಕ್ ಖಾತೆ ಸ್ಥಗಿತಗೊಂಡಿರಬಹುದು
- ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿರಬಹುದು
- ಖಾತೆದಾರ ಮೃತಪಟ್ಟಿರಬಹುದು
- ಆಧಾರ್ ನಿಷ್ಕ್ರಿಯಗೊಂಡಿರಬಹುದು
- ಬ್ಯಾಂಕ್ ಖಾತೆ ತಪ್ಪಾಗಿ ನಮೂದಿಸಿರಬಹುದು
- ಬ್ಯಾಂಕ್ ಖಾತೆಯ ಐಎಫ್ಎಸ್ಸಿ ಕೋಡ್ ತಪ್ಪಾಗಿರಬಹುದು
- ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಇಕೆವೈಸಿ ಅಪ್ಡೇಟ್ ಮಾಡಿಲ್ಲದೇ ಇದ್ದರೆ 14, 15 ಮತ್ತು 16ನೇ ಕಂತಿನ ಹಣ ಸಿಕ್ಕಿರುವುದಿಲ್ಲ. ಸರ್ಕಾರ ಈ ಹಿಂದೆಯೇ ಸಾಕಷ್ಟು ಗಡುವು ಕೊಟ್ಟಿತ್ತು. ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಸುಲಭವಾಗಿ ಇಕೆವೈಸಿ ಸಲ್ಲಿಸಬಹುದು