ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕು ಅಂದ್ರೆ, ನೀರಿನಂಶ ಹೆಚ್ಚಿರುವ ತರಕಾರಿ ಸೇವನೆ ಮಾಡಬೇಕು. ಹಸಿರು ಸೊಪ್ಪಿನ ಸೇವನೆಯೂ ಅತ್ಯವಶ್ಯಕ. ಹಾಗಾಗಿ ಇಂಥ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆಯಿಂದ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ನೀವು ಆರೋಗ್ಯವಂತರಾಗಿರುತ್ತೀರಿ. ಅಲ್ಲದೇ, ನಿಮ್ಮ ತ್ವಚೆಯ ಸೌಂದರ್ಯ ಕೂಡ ಅಭಿವೃದ್ಧಿಯಾಗುತ್ತದೆ.
ಸೌತೇಕಾಯಿ, ಬೂದುಗುಂಬಳಕಾಯಿ, ಜ್ಯುಕಿನಿ ಇಂಥ ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇಂಥ ತರಕಾರಿ ಬಳಕೆ ಉತ್ತಮ ಎನ್ನುತ್ತಾರೆ ವೈದ್ಯರು. ಏಕೆಂದರೆ ಇದರ ಸೇವನೆಯಿಂದ ದೇಹದಲ್ಲಿ ನೀರಿನ ಅಂಶವನ್ನು ನಾವು ಕಾಪಾಡಿಕೊಳ್ಳಬಹುದು. ಇನ್ನು ಕೋಸುಗಳು ಸಹ ನಿಮ್ಮ ಆರೋಗ್ಯಕ್ಕೆ ಉತ್ತಮ. ಹೂಕೋಸು, ಎಲೆಕೋಸು, ಬ್ರೋಕೋಲಿ ಇವೆಲ್ಲವೂ ನಿಮ್ಮ ದೇಹಕ್ಕೆ ಪೋಷಕಾಂಶ ಒದಗಿಸಲು ಸಹಕಾರಿಯಾಗಿದೆ.