ಅರಿಶಿನ ಮಿಶ್ರಿತ ಹಾಲು ಭಾರತದ ಜನಪ್ರಿಯ ಪಾನೀಯಗಳಲ್ಲಿ ಒಂದು. ಇದು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅದ್ಭುತ ಔಷಧವೆಂದು ಪರಿಗಣಿಸಲಾಗಿದೆ. ನಿತ್ಯದ ಆಹಾರ ಪದ್ಧತಿಯಲ್ಲಿ ಅರಿಶಿನ ಹಾಲನ್ನು ಸೇರಿಸಿಕೊಂಡರೆ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು. ಪ್ರತಿ ದಿನ ಅರಿಶಿನ ಮಿಶ್ರಿತ ಹಾಲನ್ನು ಕುಡಿಯುವುದರಿಂದ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಯನ್ನು ಪರಿಶೀಲಿಸಿ.
ರೋಗನಿರೋಧಕ ಶಕ್ತಿ
ಅರಿಶಿನ ಮಿಶ್ರಿತ ಹಾಲನ್ನು ಪ್ರತಿದಿನ ಮಲಗುವ ಮುನ್ನ ಕುಡಿಯಬೇಕು. ಆಗ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು ಎಂದು ಹೇಳಲಾಗುವುದು. ಅರಿಶಿನದಲ್ಲಿ ಖನಿಜ, ಜೀವಸತ್ವ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಒಳಗೊಂಡಿದೆ. ಇದನ್ನು ಹಾಲಿನೊಂದಿಗೆ ಸೇರಿಸಿದಾಗ ಅದರ ಶಕ್ತಿಯು ದ್ವಿಗುಣವಾಗುವುದು. ನಿತ್ಯವೂ ಅರಿಶಿನ ಮಿಶ್ರಿತ ಹಾಲನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು. ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ. ದೇಹವು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆದುಕೊಂಡಿದೆ.
ಹೃದಯದ ಆರೋಗ್ಯವನ್ನು ಸುಧಾರಿಸುವುದು
ಅರಿಶಿನ ಪುಡಿ ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಪಡೆದುಕೊಂಡಿದೆ. ಇದು ಅಪದಮನಿಯ ಕೆಲಸವನ್ನು ತೆರವುಗೊಳಿಸಿ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು. ಹೃದಯದ ಆರೋಗ್ಯವನ್ನು ಸುಧಾರಿಸಿ, ವಿಷ ಮುಕ್ತ ಆಗುವಂತೆ ಮಾಡುವುದು. ಜೊತೆಗೆ ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಆರೋಗ್ಯ ಸಮಸ್ಯೆಯನ್ನು ಸುಧಾರಿಸುವುದು.
ರೋಗಗಳನ್ನು ದೂರ ಇರಿಸುವುದು
ಅರಿಶಿನ ಮಿಶ್ರಿತ ಹಾಲನ್ನು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ದೇಹವು ಎಲ್ಲಾ ಬಗೆಯ ರೋಗಗಳ ವಿರುದ್ಧ ಹೋರಾಡಲು ಸಿದ್ಧವಾಗಿರುತ್ತದೆ. ಶೀತ, ವೈರಸ್, ಬ್ಯಾಕ್ಟೀರಿಯಾ ಸೇರಿದಂತೆ ಇನ್ನಿತರ ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡುತ್ತವೆ. ದೇಹವು ಸದಾ ಆರೋಗ್ಯದಿಂದ ಕೂಡಿರುತ್ತದೆ.
ರಕ್ತವನ್ನು ಶುದ್ಧೀಕರಿಸುತ್ತದೆ
ರಾತ್ರಿ ಮಲಗುವ ಮುನ್ನ ಅರಿಶಿನ ಮಿಶ್ರಿಯ ಹಾಲನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಎಲ್ಲಾ ಜೀವಾಣುಗಳನ್ನು ತೆರವುಗೊಳಿಸುತ್ತದೆ. ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಅರಿಶಿನವು ದೇಹವನ್ನು ನಿರ್ವಿಷಗೊಳಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ರಕ್ತದಲ್ಲಿ ಇರುವ ನಂಜು ಹಾಗೂ ಜಿಡ್ಡಿನ ಗುಣಗಳನ್ನು ತೆರವು ಗೊಳಿಸಿ, ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ವೃದ್ಧಿಸುವುದು.
ಉತ್ತಮ ಚರ್ಮದ ಆರೋಗ್ಯ
ಅರಿಶಿನ ಮಿಶ್ರಿತ ಹಾಲು ದೈಹಿಕ ಸ್ವಾಸ್ತ್ಯವನ್ನು ಹೆಚ್ಚಿಸುವುದರ ಜೊತೆಗೆ ಸೌಂದರ್ಯ ವೃದ್ಧಿಗೂ ಸಹಾಯ ಮಾಡುವುದು. ಅರಿಶಿನದಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ನಂಜು ನಿರೋಧಕ ಗುಣಗಳು ಇರುವುದರಿಂದ ಚರ್ಮದ ಮೇಲೆ ಕಾಣಿಸಿಕೊಳ್ಳುವ ಮೊಡವೆ, ಗುಳ್ಳೆ, ಸುಕ್ಕು, ಉರಿಯೂತ ಸೇರಿದಂತೆ ಅನೆಕ ಚರ್ಮ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುವುದು.
ಚರ್ಮವು ತೇವಾಂಶದಿಂದ ಕೂಡಿರುತ್ತದೆ. ತಲೆಯ ಕೂದಲು ಉದುರಲು ಕಾರಣವಾಗುವ ಹೊಟ್ಟಿನಂತಹ ಸಮಸ್ಯೆಯನ್ನು ಸಹ ನಿವಾರಿಸುವುದು. ಜೊತೆಗೆ ಕೂದಲ ಬೆಳವಣಿಗೆಗೆ ಸಹಾಯ ಮಾಡುವುದು. ಪ್ರತಿ ದಿನ ಒಂದು ಗ್ಲಾಸ್ ಅರಿಶಿನ ಹಾಲನ್ನು ಕುಡಿಯಲು ಸೀಮಿತಗೊಳಿಸಬೇಕು.