ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಹನುಮಂತನಿಗೆ ಅರ್ಪಿಸಿದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವಾರವನ್ನು ಮಂಗಳ ಗ್ರಹದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹನುಮಂತನ ಆರಾಧನೆ ಮಾಡುವುದರಿಂದ ಮನುಷ್ಯನ ಎಲ್ಲಾ ದುಃಖಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
ಹನುಮಂತನನ್ನು ಮೆಚ್ಚಿಸಲು ಪೂಜೆ ಮತ್ತು ಮಂತ್ರಗಳ ಪಠಣ, ಮಂಗಳವಾರ ಕೆಂಪು ಬಟ್ಟೆ ಧರಿಸುವುದು, ಪೂಜೆಯ ಸಮಯದಲ್ಲಿ ಸಿಹಿ ತಿಂಡಿಗಳನ್ನು ಅರ್ಪಿಸುವುದು, ಹನುಮಾನ್ ದೇವಾಲಯಗಳಿಗೆ ಭೇಟಿ ನೀಡುವುದು, ಯೋಗ ಅಥವಾ ಧ್ಯಾನದ ಸಮಯದಲ್ಲಿ ‘ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್’ ಎಂದು ಜಪಿಸುವುದು
ಮತ್ತು ಶಾಂತಿ, ಸಮೃದ್ಧಿ ಮತ್ತು ಸಂತೋಷಕ್ಕಾಗಿ ಹನುಮಾನ್ ಚಾಲೀಸಾವನ್ನು ಪಠಿಸುವುದು. ಹೀಗೆ ಹನುಮಂತನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳಿದ್ದು, ಇವುಗಳನ್ನು ಅಳವಡಿಸಿಕೊಂಡಲ್ಲಿ ದೇವರ ಆಶೀರ್ವಾದ ಪಡೆಯಬಹುದು.
ಮಂಗಳವಾರದ ದಿನದಂದು ಹನುಮಾನ್ ಚಾಲೀಸಾವನ್ನು ಪಠಿಸುವುದು ಬಜರಂಗ ಬಲಿಯನ್ನು ಮೆಚ್ಚಿಸಲು ಸುಲಭವಾದ ಮಾರ್ಗವಾಗಿದೆ. ಚಾಲೀಸಾವನ್ನು ಪ್ರತಿದಿನ ಅಥವಾ ಪ್ರತಿ ಮಂಗಳವಾರ ಮತ್ತು ಶನಿವಾರ ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಹೊರತುಪಡಿಸಿ, ನೀವು ಶ್ರೀ ರಾಮಚರಿತ ಮಾನಸದ ಸುಂದರಕಾಂಡವನ್ನು ಪಠಿಸುವ ಮೂಲಕ, ಹನುಮಂತನು ಶೀಘ್ರದಲ್ಲೇ ಶುಭ ಫಲಿತಾಂಶಗಳನ್ನು ನೀಡುತ್ತಾನೆ.ಆಂಜನೇಯ ಸ್ವಾಮಿಗೆ ಇವುಗಳನ್ನು ಅರ್ಪಿಸಿ
ಪ್ರತಿ ಮಂಗಳವಾರ ಅಥವಾ ಶನಿವಾರ ಹನುಮಂತನಿಗೆ ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸಬೇಕು. ಸಿಂಧೂರವು ಹನುಮಂತನಿಗೆ ಬಹಳ ಪ್ರಿಯವಾದ ವಸ್ತುವಾಗಿದೆ ಮತ್ತು ಅವನಿಗೆ ಸಿಂಧೂರವನ್ನು ಅರ್ಪಿಸುವ ಭಕ್ತನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ.
ಇದನ್ನು ನೈವೇದ್ಯ ಮಾಡಿ
ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಹೊರತುಪಡಿಸಿ ಆಂಜನೇಯ ಸ್ವಾಮಿಗೆ ಪಾನ್ನ್ನು ಕೂಡ ಅರ್ಪಿಸಬೇಕು. ಬನಾರಸಿ ಎಲೆಗಳಿಂದ ಮಾಡಿದ ಪಾನ್ನ್ನು ಆಂಜನೇಯ ಸ್ವಾಮಿಗೆ ನೈವೇದ್ಯವಾಗಿ ನೀಡುವುದರಿಂದ ಆಂಜನೇಯ ಸ್ವಾಮಿಯ ಆಶೀರ್ವಾದವೂ ಸದಾಕಾಲ ನಿಮ್ಮ ಮೇಲಿರುತ್ತದೆ.
ಹನುಮಂತನ ಫೋಟೋ
ಮನೆಯಲ್ಲಿ ಆಂಜನೇಯ ಸ್ವಾಮಿಯ ಫೋಟೋವನ್ನು ಅಥವಾ ವಿಗ್ರಹವನ್ನು ಪವಿತ್ರ ಸ್ಥಳದಲ್ಲಿ ಇರಿಸಿ. ಆಂಜನೇಯ ಸ್ವಾಮಿಯು ದಕ್ಷಿಣ ದಿಕ್ಕಿಗೆ ನೋಡುವಂತೆ ಫೋಟೋವನ್ನು ಅಥವಾ ವಿಗ್ರಹವನ್ನು ಇಡಬೇಕು. ಇದರ ಬಳಿಕ ನಿತ್ಯವೂ ಹನುಮಂತನಿಗೆ ದೀಪ, ಧೂಪಗಳನ್ನು ಅರ್ಪಿಸಬೇಕು. ಹಾಗೂ ಆಂಜನೇಯ ಸ್ವಾಮಿಗೆ ಪ್ರಿಯವಾದ ಚೆಂಡು ಹೂವಿನ ಹಾರವನ್ನು ಅರ್ಪಿಸಬೇಕು.
ಹನುಮಂತನ ಮುಂದೆ ಈ ದೀಪವನ್ನು ಹಚ್ಚಿಡಿ
ಪ್ರತಿದಿನ ರಾತ್ರಿ ಆಂಜನೇಯ ಸ್ವಾಮಿ ವಿಗ್ರಹ ಅಥವಾ ಫೋಟೋದ ಮುಂದೆ ಎಣ್ಣೆಯ ದೀಪವನ್ನು ಹಚ್ಚಿಡಿ. ಇದು ವ್ಯಕ್ತಿಯ ದುರಾದೃಷ್ಟವನ್ನು ಕೂಡ ಅದೃಷ್ಟವನ್ನಾಗಿ ಬದಲಾಯಿಸುತ್ತದೆ. ಹಾಗೂ ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರಾಗಿಸುತ್ತದೆ. ರಾಮಾಯಣ ಅಥವಾ ಶ್ರೀ ರಾಮಚರಿತ ಮಾನಸವನ್ನು ಪಠಿಸುವ ಅಥವಾ ಅವರ ದ್ವಿಪದಿಗಳನ್ನು ಪ್ರತಿದಿನ ಓದುವ ಭಕ್ತರು ಆಂಜನೇಯ ಸ್ವಾಮಿಯ ವಿಶೇಷ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.