ಬೆಳಗ್ಗೆ ಕೇವಲ 10 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಪ್ರತಿದಿನವೂ ಈ ನಿಯಮವನ್ನು ಅನುಸರಿಸಿದ್ರೆ ನೀವು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಲ್ಲದೆ ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಅಂಶಗಳು ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ಅತಿಸಾರ ಮತ್ತು ವಾಂತಿ ತಡೆಯಲು ಕರಿಬೇವಿನ ಎಲೆಗಳನ್ನು ಬಳಸುವುದು ಸೂಕ್ತ.
ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿ
ನೀವು ಬಾಯಿಯ ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸಲು ಬಯಸಿದರೆ, 2-4 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಅಷ್ಟೇ ಅಲ್ಲ ಕರಿಬೇವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಬಾಯಿಯ ಆರೋಗ್ಯವೂ ಸಾಕಷ್ಟು ಸುಧಾರಿಸುತ್ತದೆ. ಪ್ರತಿದಿನ ಬೆಳಗ್ಗೆ ಕೇವಲ ಒಂದು ಚಮಚ ಕರಿಬೇವಿನ ಎಲೆಯ ರಸವನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು
ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ C, ವಿಟಮಿನ್ A, ವಿಟಮಿನ್ B, ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಉತ್ತಮ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ನಿಮ್ಮ ಆರೋಗ್ಯವನ್ನು ಬಲವಾಗಿಡುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಆದಾಗ್ಯೂ, ಉತ್ತಮ ಫಲಿತಾಂಶಗಳನ್ನು ಪಡೆಯಲು ಕರಿಬೇವಿನ ಎಲೆಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.