ಬೆಂಗಳೂರು:- ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್ಲೈನ್ ಖಾತೆಗಳಲ್ಲಿ ಒಂದೇ ರೀತಿಯ ಪಾಸ್ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಆನ್ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್ವರ್ಡ್ ಬಳಸದಂತೆ ಸಿಐಡಿ ಸೈಬರ್ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.
ಹೀಗಾಗಿ ಹುಟ್ಟುಹಬ್ಬದ ದಿನಾಂಕ, ಹೆಸರು ಹಾಗೂ ಸಾಮಾನ್ಯ ಪದಗಳನ್ನು ಪಾಸ್ವರ್ಡ್ಗೆ ಬಳಸುವಾಗ ಯೋಚಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ನಿಯಮಿತವಾಗಿ ಬಳಸುವ ಪಾಸ್ ವರ್ಡ್ಗಳನ್ನು ಆಗಾಗ್ಗೆ ಬದಲಾಯಿಸಿ. ಸೈಬರ್ ವಂಚನೆಗಳಿಗೆ ಒಂದೇ ರೀತಿಯ ಪಾಸ್ ವರ್ಡ್ ಬಳಕೆ ಸಹ ಪ್ರಮುಖ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.