ಭಾರತದಲ್ಲಿ ಜನರು ಸಂಪ್ರದಾಯಗಳು ಮತ್ತು ಪದ್ಧತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಲ್ಲದೇ, ಪ್ರವೃತ್ತಿಗೆ ಅನುಗುಣವಾಗಿ ಜೀವನ ಶೈಲಿಯಲ್ಲಿ ಅಗತ್ಯವಾದ ಬದಲಾವಣೆ ಮತ್ತು ಸೇರ್ಪಡೆಗಳನ್ನು ಮಾಡಿಕೊಳ್ಳುವಲ್ಲಿ ಅವರು ಎಂದಿಗೂ ಮುಂದಿರುತ್ತಾರೆ. ಅದರಲ್ಲಿಯೂ ನೆಮ್ಮದಿಯ ಜೀವನಕ್ಕಾಗಿ ಸುಧಾರಿತ ತಂತ್ರಜ್ಞಾನದೊಂದಿಗೆ ಬರುವ ವಿವಿಧ ಉತ್ಪನ್ನಗಳು ಬಳಕೆಯಲ್ಲಿ ಎಂದಿಗೂ ಹಿಂದುಳಿದಿಲ್ಲ. ಈಗ ಶೌಚಾಲಯದ ವಿಷಯದಲ್ಲೂ ಅದೇ ಟ್ರೆಂಡ್ ಅನುಸರಿಸಲಾಗುತ್ತದೆ.
ತಾನೇ ಹೆತ್ತ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದ ತಾಯಿ: ಕರುಳು ಚುರ್ ಅನ್ನಿಸುವ ಸ್ಟೋರಿ!
ವೆಸ್ಟರ್ನ್ ಟಾಯ್ಲೆಟ್ ಭಾರತೀಯ ಶೌಚಾಲಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಇದು ವಯಸ್ಸಾದವರಿಗೆ ತುಂಬಾ ಅನುಕೂಲಕರವಾಗಿದೆ. ಹಿಂದೆಯೆಲ್ಲಾ ಜನರು ಹೆಚ್ಚಾಗಿ ಇಂಡಿಯನ್ ಟಾಯ್ಲೆಟ್ ಬಳಸುತ್ತಿದ್ದರು. ಆದರೆ ಈಗ ಸಿನಿಮಾ, ಶಾಪಿಂಗ್ ಮಾಲ್, ಆಸ್ಪತ್ರೆ ಅಥವಾ ಸಾರ್ವಜನಿಕ ಶೌಚಾಲಯ ಎಲ್ಲೆಲ್ಲೂ ವೆಸ್ಟನ್ ಟಾಯ್ಲೆಟ್ಗಳು ಕಾಣ ಸಿಗುತ್ತದೆ. ಹೀಗಾಗಿ ಪಾಶ್ಚಿಮಾತ್ಯ ಶೌಚಾಲಯಗಳ ಬಳಕೆ ಈಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಅದರಲ್ಲೂ ಈಗ ಇಂಡಿಯನ್ ಟಾಯ್ಲೆಟ್ ಜೊತೆಗೆ ಒಂದಾದರೂ ವೆಸ್ಟನ್ ಟಾಯ್ಲೆಟ್ ಕಟ್ಟಿಸುವುದು ಅನಿವಾರ್ಯದ ಜೊತೆಗೆ ಒಂದು ರೀತಿ ಟ್ರೆಂಡ್ ಕೂಡ ಆಗಿದೆ. ವೆಸ್ಟನ್ ಟಾಯ್ಲೆಟ್ ಬಳಸುವಾಗ ಮಗ್ ಅಥವಾ ಬಕೆಟ್ನಲ್ಲಿ ನೀರು ತುಂಬಿಸಿಕೊಂಡು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ.
ಇದಕ್ಕಾಗಿ ಪ್ರತ್ಯೇಕವಾಗಿ ನೀರು ಹಾಕುವ ಕೆಲಸ ಕೂಡ ಬರುವುದಿಲ್ಲ. ಏಕೆಂದರೆ ಟಾಯ್ಲೆಟ್ ಹಿಂದೆ ಅಥವಾ ಪಕ್ಕದಲ್ಲಿಯೇ ನೀರು ತುಂಬಿದ ತೊಟ್ಟಿ ಇರುತ್ತದೆ. ಮಲ ವಿಸರ್ಜನೆಯ ತ್ಯಾಜ್ಯವನ್ನು ಹೋಗಲಾಡಿಸಲು ಟ್ಯಾಂಕ್ ಮೇಲಿನ ಫ್ಲಶ್ ಬಟನ್ ಅನ್ನು ಒತ್ತಿದರೆ ಸಾಕು.
ಟಾಯ್ಲೆಟ್ ಸೀಟಿನ ಎಡಭಾಗದಲ್ಲಿ ಪೇಪರ್ ರೋಲ್ ಇದೆ. ನೀವು ಕುಳಿತುಕೊಳ್ಳುವ ಟಾಯ್ಲೆಟ್ ಸೀಟಿನ ತೇವವನ್ನು ಒರೆಸಲು ಅಥವಾ ಕಲೆಗಳನ್ನು ಸ್ವಚ್ಛಗೊಳಿಸಲು ನೀವು ಇದನ್ನು ಬಳಸಬಹುದು. ಅಲ್ಲದೇ ಕೈ ಒರೆಸಲು ಸಹ ಬಳಸಬಹುದು. ಇದನ್ನು ಬೀಸಾಡಲು ಸಮೀಪವೇ ಕಸದ ಬುಟ್ಟಿಯೂ ಇರುತ್ತದೆ. ಅಲ್ಲದೇ ಟಾಯ್ಲೆಟ್ ಸೀಟಿನ ಬಲಭಾಗದಲ್ಲಿ ಫ್ಲಶಿಂಗ್ಗಾಗಿ ಪೈಪ್ ಇದೆ. ನೀವು ಇದನ್ನು ಫ್ಲಶ್ ಮಾಡಲು ಬಳಸಬಹುದು.
ಇವುಗಳ ಜೊತೆಗೆ ಟಾಯ್ಲೆಟ್ ಸೀಟಿನ ಬಲಭಾಗದಲ್ಲಿ ತೊಳೆಯಲು ಸ್ಪ್ರೇ ಹೊಂದಿರುವ ಪೈಪ್ ಇದೆ. ಇದನ್ನು ಗೋಡೆಯ ಮೇಲೆ ನೇತು ಹಾಕಲಾಗಿರುತ್ತದೆ. ಒಟ್ಟಾರೆ ಇಷ್ಟೆಲ್ಲಾ ಅನುಕೂಲಗಳನ್ನು ಒದಗಿಸುವ ವೆಸ್ಟನ್ ಟಾಯ್ಲೆಟ್ ಅತಿಯಾದ ಬಳಕೆ ಕೆಲವೊಮ್ಮೆ ಸಾಕಷ್ಟು ರೋಗಗಳನ್ನು ಹರಡಬಹುದು. ಹಾಗಾದ್ರೆ ವೆಸ್ಟರ್ನ್ ಟಾಯ್ಲೆಟ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಆಗುವ ಅನಾನುಕೂಲಗಳೇನು ತಿಳಿಯೋಣ ಬನ್ನಿ.
ಮಲಬದ್ಧತೆ ಸಮಸ್ಯೆ: ಯೋಗಸಾನದಲ್ಲಿ ಬರುವ ಮಲಸಾನ ಅಥವಾ ಗಾರ್ಲ್ಯಾಂಡ್ ಪೋಸ್ ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಕರುಳು ಸುಲಭವಾಗಿ ಸ್ವಚ್ಛವಾಗುತ್ತದೆ. ಅಂದರೆ ಇಂಡಿಯನ್ ಟಾಯ್ಲೆಟ್ನಲ್ಲಿ ಕುಳಿತುಕೊಳ್ಳುವ ಭಂಗಿಯು ಸ್ಕ್ವಾಟ್ ಅಥವಾ ಮಲಸಾನವಾಗಿದೆ. ಆದರೆ ವೆಸ್ಟರ್ನ್ ಟಾಯ್ಲೆಟ್ ಬಳಕೆಯು ದೇಹದಲ್ಲಿನ ಕರುಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದಿಲ್ಲ. ಇದರಿಂದ ಕ್ರಮೇಣ ಮಲಬದ್ಧತೆಯ ಸಮಸ್ಯೆ ಉಂಟಾಗುತ್ತದೆ
ಮೂತ್ರದ ಸೋಂಕಿನ ಅಪಾಯ: ವೆಸ್ಟನ್ ಪಬ್ಲಿಕ್ ಟಾಯ್ಲೆಟ್ ಬಳಸುವುದರಿಂದ ಕೆಲವೊಮ್ಮೆ ಸೋಂಕಿಗೆ ಕಾರಣವಾಗಬಹುದು. ಏಕೆಂದರೆ ನಮ್ಮ ಚರ್ಮವು ಟಾಯ್ಲೆಟ್ ಸೀಟಿನೊಂದಿಗೆ ನೇರ ಸಂಪರ್ಕಕ್ಕೆ ಬರುತ್ತದೆ. ಈ ಆಸನದ ಮೇಲೆ ಅನೇಕ ಸೂಕ್ಷ್ಮಜೀವಿಗಳು ಇರುತ್ತವೆ. ಹಾಗಾಗಿ ಟಿಶ್ಯೂ ಪೇಪರ್ ಬಳಸುವಾಗ ಸ್ವಲ್ಪ ಜಾಗರೂಕತೆಯಿಂದ ಇರಿ. ಒಂದು ವೇಳೆ ಪೇಪರ್ ಯೋನಿಯ ಮೇಲೆ ಅಂಟಿಕೊಂಡರೆ ಸೋಂಕಿನ ಅಪಾಯವಿದೆ.
ಪೈಲ್ಸ್ ಸಮಸ್ಯೆ: ವೆಸ್ಟನ್ ಟಾಯ್ಲೆಟ್ ಅನ್ನು ದೀರ್ಘಕಾಲ ಬಳಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಇದರಿಂದಾಗಿ ಪೈಲ್ಸ್ ಬರುವ ಅಪಾಯವಿದೆ. ಹೊಟ್ಟೆಯನ್ನು ಸ್ವಚ್ಛಗೊಳಿಸಲು, ಗುದನಾಳದ ಮೇಲೆ ಒತ್ತಡವನ್ನು ಉಂಟು ಮಾಡುವುದರಿಂದ ಊತ ಬರುತ್ತದೆ. ಇದರಿಂದ ಪೈಲ್ಸ್ ಬರುವ ಭೀತಿ ಎದುರಾಗುತ್ತದೆ.
ಊದಿಕೊಂಡ ಗುದನಾಳದ ಮೇಲೆ ಜೆಟ್ನಿಂದ ನೀರಿನ ಒತ್ತಡ ಬಿದ್ದಾಗ ಗುದನಾಳದ ಅಂಗಾಂಶಗಳು ಸಿಡಿಯುತ್ತವೆ. ಇದರಿಂದ ಪೈಲ್ಸ್ ಜೊತೆಗೆ ಫಿಶರ್ ಸಮಸ್ಯೆ ಉಂಟಾಗುತ್ತದೆ.