ಮೀನಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಸ್ತವವಾಗಿ, ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ, ಇದು ನಮ್ಮ ದೇಹಕ್ಕೆಇದನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆಹಾರ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಒಮೆಗಾ -3 ಕೊಬ್ಬಿನಾಮ್ಲವನ್ನು ಮರುಪೂರಣಗೊಳಿಸಬಹುದು.
ಸ್ನಾನಕ್ಕೆ ಹೋದವಳು ಪರಲೋಕಕ್ಕೆ ಹೋದ್ಲು! ಮಹಿಳೆಯ ತಲೆಗೆ ಅಪರಿಚಿತರಿಂದ ಹಲ್ಲೆ
ಭಾರತ ಪ್ರಪಂಚದಲ್ಲಿ ಏಳನೇ ಅತಿ ಹೆಚ್ಚು ಮೀನು ಉತ್ಪಾದಿಸುವ ರಾಷ್ಟ್ರ. ಭಾರತದ ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ ಅದರಲ್ಲೂ ಕರಾವಳಿ ತೀರದವರಿಗೆ ಅಂತೂ ಮೀನು ಬೇಕೇ ಬೇಕು. ಇದಲ್ಲದೇ ಮೀನಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ 2, ಕಬ್ಬಿಣ, ಸತು, ಅಯೋಡಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಹೆಚ್ಚಿನ ಪ್ರೋಟೀನ್ ಅಂಶಗಳಂತಹ ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿದೆ. ಇದರಿಂದಾಗಿ ವಾರಕ್ಕೆ ಎರಡು ಬಾರಿಯಾದರೂ ಮೀನು ತಿನ್ನಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ
ಮೀನು ಸೇವನೆಯಿಂದ ಮಾನವನ ಯುಕ್ತಿ ಹಾಗೂ ಶಕ್ತಿ ಎರಡು ಚುರುಕಾಗುತ್ತದೆ. ಆದರೆ ಎಲ್ಲ ರೀತಿಯ ಮೀನುಗಳು ಸಮಾನ ಪೋಷ್ಠಿಕಾಂಶಗಳನ್ನು ಹೊಂದಿರುತ್ತವೆ ಎಂಬುದು ಕೂಡ ಇಲ್ಲ. ಕೆಲವು ಮೀನುಗಳ ಕೊಬ್ಬು ಹಾಗೂ ನಾರಿನಂಶ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಸಾಂಪ್ರದಾಯಿಕವಾಗಿ ಮೀನಿನ ಜೊತೆಗೆ ಕೆಲವು ಆಹಾರಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದು ಕೇವಲ ಸಾಂಪ್ರದಾಯಿಕವಾಗಿ ಹೇಳಿರುವ ವಿಚಾರಲ್ಲ ಇದರ ಹಿಂದೆ ವಿಜ್ಞಾನ, ಆಯುರ್ವೇದ ಮತ್ತು ಅನುಭವದ ಪರಿಭಾಷೆಯಲ್ಲಿ ಕೂಡ ಹೇಳಲಾಗಿದೆ.
ಮೀನು ಮತ್ತು ಹಾಲು: ಮೀನನ್ನು ಹಾಲು ಮತ್ತು ಹಾಲು ಆಧಾರಿತ ಆಹಾರಗಳ ಜೊತೆಯಲ್ಲಿ ಸೇವಿಸುವುದನ್ನು ತ್ಯಜಿಸಬೇಕು ಎಂದು ಹೇಳಲಾಗುತ್ತದೆ. ಕಾರಣವೆಂದರೆ ಮೀನಿನಲ್ಲಿರುವ ಪ್ರೋಟೀನ್ ಮತ್ತು ಹಾಲಿನ ಕೊಬ್ಬು ಇವುಗಳು ಚರ್ಮದ ಅಲರ್ಜಿ ಅಥವಾ ಜೀರ್ಣಕ್ರಿಯೆಯ ಮೇಲೆ ಪ್ರಭಾವವನ್ನು ಉಂಟು ಮಾಡಬಹುದು
ವಿವಿಧ ತರಕಾರಿಗಳು: ಕೆಲವೊಮ್ಮೆ ಮೀನಿನ ಜೊತೆಗೆ ಹಸಿರು ಮೆಣಸಿನಕಾಯಿ, ಕುಂಬಳಕಾಯಿ, ಬದನೆ ಇತ್ಯಾದಿಗಳೊಂದಿಗೆ ಬೇಯಿಸಲಾಗುತ್ತದೆ, ಇದು ಅಜೀರ್ಣಕ್ಕೆ ಕಾರಣವಾಗಬಹುದು. ಮೀನಿನೊಂದಿಗೆ ಮೊಸರು ತಿನ್ನುವುದನ್ನು ಸಹ ತಪ್ಪಿಸಬೇಕು. ಇದು ಶೀತ ಮತ್ತು ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಸಹ ಉಂಟುಮಾಡಬಹುದು
ಮೀನು ಮತ್ತು ಪಪ್ಪಾಯಿ: ಪಪ್ಪಾಯಿಯಂತಹ ತಂಪು ಹಣ್ಣುಗಳು, ಕಿತ್ತಳೆಯಂತಹ ಹುಳಿ ಹಣ್ಣುಗಳು ಮತ್ತು ಮೀನು ಜೊತೆಯಾಗಿ ಸೇವಿಸುವುದು ಕೂಡ ದೇಹಕ್ಕೆ ಒಳ್ಳೆಯದಲ್ಲ. ಕೆಲವರಿಗೆ ಇದರಿಂದ ಅತಿಸಾರ ಅಥವಾ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತದೆ
ಆವಕಾಡೊಗಳು ಮತ್ತು ಮೀನು: ಅವಕಾಡೋ ಹಾಗೂ ಮೀನು ಒಟ್ಟಿಗೆ ಸೇವಿಸುವುದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ. ಮೀನಿನಲ್ಲಿರುವ ಪ್ರೋಟೀನ್ ಮತ್ತು ಕೆಲವು ಲವಣಗಳು ಇತರ ಆಹಾರಗಳಲ್ಲಿನ ಖನಿಜಗಳು ಹೊಂದಿಕೆಯಾಗುವುದಿಲ್ಲ, ಇದು ತ್ವರಿತ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ
ಮೀನಿನ ಆಹಾರವನ್ನು ಸೇವಿಸುವಾಗ ಸುಲಭವಾಗಿ ಜೀರ್ಣವಾಗುವ ಆಹಾರಗಳಾದ ಅನ್ನ, ತರಕಾರಿಗಳನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು. ಅಲ್ಲದೆ, ಒಂದೇ ರೀತಿಯ ಆಹಾರವನ್ನು ಮಿಶ್ರಣ ಮಾಡುವುದು ಉತ್ತಮ. ಹಾಗಾಗಿ ಮೇಲೆ ತಿಳಿಸಿದ ಆಹಾರಗಳನ್ನು ಮೀನಿನೊಂದಿಗೆ ಸೇವಿಸಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ