ಪಾಕಿಸ್ತಾನ ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಗೆ ಗುರಿಯಾಗುತ್ತಲೆ ಇರುತ್ತದೆ. ಇದೀಗ ಪಾಕ್ ಪ್ರಧಾನಿ ಶಹಬಾಬ್ ಷರೀಫ್ ಅವರ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಷರೀಫ್ ಅವರ ಹೇಳಿಕೆಯನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ.
ಪಾಕ್ ಪ್ರಧಾನಿ ರ್ಯಾಲಿಯೊಂದರಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭದಲ್ಲಿ ʼಅಭಿವೃದ್ಧಿಯ ವಿಚಾರದಲ್ಲಿ ಭಾರತವನ್ನು ನಾನು ಸೋಲಿಸುತ್ತೇನೆ. ನಾವು ಭಾರತವನ್ನು ಮೀರಿ ಬೆಳೆಯದಿದ್ದರೆ ನನ್ನ ಹೆಸರು ಶೆಹಜಾಬ್ ಷರೀಫ್ ಅಲ್ಲʼ ಎಂದು ದಿಟ್ಟ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಪಾಕ್ ಪ್ರಧಾನಿಯ ಈ ಹೇಳಿಕೆ ಇದೀಗ ಟ್ರೋಲ್ಗೆ ಗುರಿಯಾಗಿದ್ದು, ಮೊದಲು ನೀವು ನಿಮ್ಮ ಆರ್ಥಿಕತೆಯನ್ನು ಸ್ಥಿರಗೊಳಿಸುವತ್ತ ಗಮನಹರಿಸಿ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಪಾಕ್ ಪ್ರಧಾನಿ ಶೆಹಜಾಬ್ ಷರೀಫ್ “ಪಾಕಿಸ್ತಾನವು ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಭಾರತವನ್ನು ಹಿಂದಿಕ್ಕದಿದ್ದರೆ, ನನ್ನ ಹೆಸರು ಶಹಬಾಜ್ ಷರೀಫ್ ಅಲ್ಲ” ಎಂಬ ಹೇಳಿದ್ದಾರೆ.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ, ತಮ್ಮ ಸರ್ಕಾರ ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಿದೆ ಎಂದು ಹೇಳಿದರು. ಪಾಕಿಸ್ತಾನದ ಪರಿಸ್ಥಿತಿಯನ್ನು ಸುಧಾರಿಸಲು ನಾವು ಹಗಲಿರುಳು ಶ್ರಮಿಸುತ್ತೇವೆ. ಪ್ರಕೃತಿಯ ಆಶೀರ್ವಾದ ಪಾಕಿಸ್ತಾನದ ಮೇಲಿದೆ. ನಮ್ಮ ಪ್ರಯತ್ನಗಳಿಂದಾಗಿ ಪಾಕಿಸ್ತಾನವು ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಭಾರತವನ್ನು ಮೀರದಿದ್ದರೆ, ನನ್ನ ಹೆಸರು ಶಹಬಾಜ್ ಷರೀಫ್ ಅಲ್ಲ ಎಂದು ಗುಡುಗಿದ್ದಾರೆ. ನನ್ನ ನಾಯಕತ್ವದಲ್ಲಿ ಪಾಕಿಸ್ತಾನವು ಸಾಲದ ಮೇಲೆ ಅವಲಂಬಿತವಾಗುವ ಬದಲು ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವತ್ತ ಗಮನ ಹರಿಸಲಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ ತಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ ಹಣದುಬ್ಬರ ಶೇ. 40 ರಷ್ಟಿತ್ತು, ಇಂದು ಅದು ಕೇವಲ ಶೇ. 2% ಕ್ಕೆ ಇಳಿದಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಅಭಿವೃದ್ಧಿಯ ವಿಚಾರದಲ್ಲಿ ಭಾರತವನ್ನು ಸೋಲಿಸುವ ಪ್ರತಿಜ್ಞೆಯನ್ನು ಕೂಡಾ ಮಾಡಿದ್ದು ಈ ಹೇಳಿಕೆ ಇದೀಗ ಟ್ರೋಲ್ಗೆ ಗುರಿಯಾಗಿದೆ.