ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೊಸೂರ ಗ್ರಾಮದ ಸಮಸ್ತ ಹಿಂದೂ ಸಮಾಜದಿಂದ ಶ್ರೀ ಮಹಾದೇವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮಾಡುವುದರ ಮುಖಾಂತರ ವಕ್ಫ್ ಬೋರ್ಡ್ ರದ್ದುಪಡಿಸಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ವಕ್ಫ್ ಬೋರ್ಡ್ ಹಟಾವೋ ಭಾರತ ದೇಶ ಬಚಾವೋ ಘೋಷಣೆ ಕೂಗುವುದರೊಂದಿಗೆ ಪ್ರತಿಭಟನೆ ನಡೆಸಿತು.
ವಕ್ಫ್ ಬೋರ್ಡ್ ಅನ್ನೋದು ಪಾಪಸ್ ಕಳ್ಳಿ ಇದ್ದಂತೆ ನೀವೇನಾದರೂ ನಿಮ್ಮ ಜಮೀನಿನಲ್ಲಿ ಬಿಟ್ಟುಕೊಂಡರೆ ಇಡೀ ಜಮೀನಿನಲ್ಲಿ ಆವರಿಸಿಕೊಳ್ಳುತ್ತದೆ ಹಿಂದೂಗಳೆ ಇನ್ನಾದರೂ ಎಚ್ಚೆತ್ತುಕೊಳ್ಳಿ.ಹಿಂದೂಗಳ ಸ್ಮಶಾನಕ್ಕಾಗಿ ಹೋರಾಟ ನಡೆಯುತ್ತಿರುವುದು ನಮಗೆ ನಾಚಿಕೆಗೇಡಿನ ಸಂಗತಿ
ಹಿಂದೆ ಹೇಳಿದ್ರು ಮಹಾತ್ಮ ಗಾಂಧೀಜಿಯವರಿಗೆ ಹಿಂದುಗಳನ್ನು ಭಾರತಕ್ಕೆ ಬಿಡಿ ಬೇರೆ ದೇಶಕ್ಕೆ ಹೋಗೋರು ಹೋಗಲಿ ಎಂದು ಹೇಳಿದರು ಅಂದು ಯಾರೂ ಕೇಳಲಿಲ್ಲ ಇಂದು ನಮ್ಮ ನೆಲಕ್ಕಾಗಿ ನಾವು ಹೋರಾಟ ಮಾಡಬೇಕಾಗುವ ಪರಿಸ್ಥಿತಿ ಬಂದಿದೆ.ತಹಶೀಲ್ದಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ ಪರಮಪೂಜ್ಯ ಶ್ರೀ ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು
ಒಂದು ವಾರದ ಒಳಗಡೆ ಹೊಸೂರಿನ ಹಿಂದೂ ರುದ್ರ ಭೂಮಿಯ ಉತಾರಿನಲ್ಲಿ ಸೇರ್ಪಡೆ ಆಗಿರುವ ಮುಸ್ಲಿಂ ವಕ್ಫ್ ಸುನ್ನಿ ಹೆಸರು ತೆಗೆದು ಹಾಕದೇ ಇದ್ದಲ್ಲಿ ನೇರವಾಗಿ ರಬಕವಿ ಬನಹಟ್ಟಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಮತ್ತು ಕೀಲಿ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೊಸೂರು ಸಾರ್ವಜನಿಕರಿಂದ ಮಂಗಳವಾರ ರಂದು ರಬಕವಿ ಬನಹಟ್ಟಿ ತಾಲೂಕಿನಲ್ಲಿ ಪ್ರತಿಭಟನೆ ಮತ್ತು ಪ್ರೊಟೆಸ್ಟ್ ನಡೆಸಿ ನಂತರ ತಹಶೀಲ್ದಾರ್ ಗಿರೀಶ್ ಸ್ವಾದಿ ಅವರಿಗೆ ಮನವಿ ಸಲ್ಲಿಸಿದರು.
ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅಹ್ಮದ್ ಖಾನ್ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನನ್ನು ಕನ್ವರ್ಷನ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ. 1974 ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು.
ಕ್ಯಾರೆಟ್ ಬೆಳೆ ಹರಿಸುತ್ತೆ ಹಣದ ಹೊಳೆ: ಕ್ಯಾರೆಟ್ ಕೃಷಿ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್ಫ್ ಜಾಗ ಅಂತ ಮಾಡಿದ್ದಾರೆ. ಇದು ತುಘಲಕ್ ಸರ್ಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಹಿಂದುಗಳಿಗೆ ಮತ್ತು ರೈತರಿಗೆ ಅನ್ಯಾಯ ಆಗಿರೋದನ್ನ ಸರಿಪಡಿಸಿ ವಕ್ಫ್ ಬೋರ್ಡ್ ರದ್ದು ಮಾಡಿ ಇಲ್ಲ ಅಂದ್ರೆ ರಾಜ್ಯ ಸರ್ಕಾರವನ್ನು ಮತ್ತು ಅಧಿಕಾರಿಗಳನ್ನ ಓಡಿಸೋಕಾಲ ಹತ್ತಿರ ಬಂದಿದೆ ಎಂದು ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ಪರಮಪೂಜ್ಯಶ್ರೀ ಪರಮಾನಂದ ಮಹಾಸ್ವಾಮಿಗಳು. ವಿ ಸಿ ಪಾಟೀಲ ಅರುಣ್ ಬುದ್ಧಿ. ಟಿ ಟಿ ನಿಂಗಸಾನಿ. ಸೇರಿದಂತೆ ಮಹಿಳೆಯರುಮತ್ತು ರೈತರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ