ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ಒಂದೊಂದೇ ರೋಗಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಡೆಗಣಿಸದೇ, ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು
- ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದ ಮಿತಿಮೀರಿ ಹೋಗಿದ್ದರೆ, ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳುವುದು, ಇಲ್ಲಾಂದ್ರೆ ಕಣ್ಣಿನಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳಲು ಶುರುವಾಗುತ್ತದೆ.
- ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಲಿವರ್ ಸಮಸ್ ಇದ್ದವರಿಗೆ ಹಾಗೂ ಅನು ವಂಶಿಯ ಕಾರಣಗಳಿಂದ ಕೊಲೆ ಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ ಇರುವವರಿಗೆ ಈ ರೀತಿಯ ಆರೋಗ್ಯ ಸಮಸ್ಯೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತದೆ ಯಂತೆ.
- ಇನ್ನು ಕೆಲವರಿಗೆ, ನಿಧಾನಕ್ಕೆ ಕಣ್ಣಿನ ದೃಷ್ಟಿ ಮಂಜಾಗುವ ಸಮಸ್ಯೆ ಕಾಡಲು ಶುರುವಾಗುತ್ತದೆ. ಅದೂ ಕೂಡ ಕೇವಲ ಒಂದು ಕಣ್ಣಿನಲ್ಲಿ ಮಾತ್ರ ಈ ರೀತಿ ಆಗುತ್ತದೆ.
ಇಲ್ಲಿ ಕೇಳಿ: ಮೊಸರಿಗೆ ಸಕ್ಕರೆ ಬದಲು ಬೆಲ್ಲ ಹಾಕಿ ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ!?
- ಮೊದಲೇ ಹೇಳಿದ ಹಾಗೆ, ದೇಹದ ನರನಾಡಿಗಳಲ್ಲಿ ಕೆಟ್ಟ ಕೊಲೆ ಸ್ಟ್ರಾಲ್ ಅಂಶಗಳು ಸೇರಿಕೊಂಡಾಗ, ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ, ದೇಹದ ಪ್ರತಿಯೊಂದು ಅಂಗಾಂಗಳ ರಕ್ತ ನಾಳಗಳು ಬ್ಲಾಕ್ ಆಗುತ್ತವೆ.
- ಈ ಸಮಯದಲ್ಲಿ ಎರಡೂ ಕಾಲುಗಳ ಸ್ನಾಯುಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಸಿಗದೇ ಇರುವುದರಿಂದ ಕಾಲು ಗಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಬಹಳ ಬೇಗನೇ ಶುರು ವಾಗಲು ಪ್ರಾರಂಭವಾಗುತ್ತದೆ.
- ಉದಾಹರಣೆಗೆ ನಡೆಯುವಾಗ ಕಾಲುಗಳ ಸ್ನಾಯುಗಳಲ್ಲಿ ಸೆಳೆತ, ನೋವು ಕಾಣಿಸಿಕೊಳ್ಳುವುದು, ಸರಿಯಾಗಿ ನಡೆಯಲು ಆಗದೇ ಇರುವುದು, ಕೆಲವೊಮ್ಮೆ ಕಾಲುಗಳನ್ನು ಎತ್ತಲು ಕೂಡ ಕಷ್ಟ ವಾಗುವುದು. ಒಂದು ವೇಳೆ ಈ ರೀತಿಯ ಸಮಸ್ಯೆಗಳು ಕಾಣಿಸಿ ಕೊಂಡರೆ, ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.
- ಉಗುರಿನ ಬಣ್ಣದಲ್ಲಿ ಬದಲಾವಣೆಗಳು ಆದರೆ, ಅದು ದೇಹದ ಒಳಗಿನ ಅಂಗಾಂಗಗಳ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ವೈದ್ಯರು ಕೂಡ ಹೇಳುತ್ತಾರೆ.
- ಒಂದು ವೇಳೆ ಉಗುರಿನ ಬಣ್ಣ ಒಂದು ವೇಳೆ ಹಳದಿ ಬಣ್ಣಕ್ಕೆ ತಿರುಗಿದರೆ ಲಿವರ್ ಕಾಯಿಲೆಯನ್ನು ಸೂಚಿಸುತ್ತದೆ ಅದೇ ರೀತಿ ಯಾಗಿ ಉಗುರುಗಳ ಬಣ್ಣ ಬದಲಾಗುತ್ತಾ ಇದ್ದರೆ, ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ.
- ಕೆಲವೊಮ್ಮೆ ದೇಹದಲ್ಲಿ ಸರಿಯಾಗಿ ರಕ್ತ ಸಂಚಾರ ಸರಿಯಾಗಿ ನಡೆಯದೇ ಹೋದಾಗಲೂ ಕೂಡ, ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
- ಕಾಲುಗಳಲ್ಲಿ ಹರಡಿರುವ ಹೃದಯ ರಕ್ತನಾಳಗಳು ಹಾಗೂ ಪಾದಗಳಲ್ಲಿ ಸರಿಯಾಗಿ ರಕ್ತ ಸಂಚಾರ ಆಗದೇ ಇದ್ದರೆ ಈ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
- ಇದಕ್ಕೆ ಪ್ರಮುಖ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಏರಿಕೆ ಯಾಗಿರುವು ದರಿಂದ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯದೇ ಬ್ಲಾಕ್ ಆಗಿರುವುದರಿಂದ ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎನ್ನುತ್ತಾರೆ ಕಾರ್ಡಿಯಾಲಜಿ ಕನ್ಸಲ್ಟೆಂಟ್ ಆಗಿರುವ ಡಾ. ತನ್ಮಯ್ ಯೆರ್ಮಲ್ ಜೈನ್.
- ಇದರಿಂದಾಗಿ ಕೆಲವರಿಗೆ ಕಾಲುಗಳ ಬೆರಳುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಆಗುವುದು, ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು.
- ನಿಮ್ಮ ಆಹಾರದಲ್ಲಿ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬಿನ ಪ್ರಮಾಣವನ್ನು ಮಿತಿಗೊಳಿಸುವುದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ, ಅಧಿಕ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಬಹುದು. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಕರಗಬಲ್ಲ ಫೈಬರ್ ಆಹಾರಗಳಾದ ಕಿಡ್ನಿ ಬೀನ್ಸ್, ಓಟ್ ಮೀಲ್, ಮೊಳಕೆ ಕಾಳುಗಳು, ಸೇಬುಗಳು ಮತ್ತು ಪ್ಲಮ್ ಕೂಡ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ದಿನನಿತ್ಯದ ವ್ಯಾಯಾಮದಿಂದ ದೇಹದಲ್ಲಿರುವ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು.