ವಯಸ್ಸಾದಂತೆ ನಮ್ಮಲ್ಲಿ ಕೆಲವು ಗುಣಗಳು ಹೆಚ್ಚಗುತ್ತವೆಯಂತೆ. ಮನೋ ವಿಜ್ಞಾನಿಗಳು ಇದನ್ನು ಸರಳವಾಗಿ ವಿವರಿಸಿದ್ದಾರೆ.
ವಯಸ್ಸು ದಾಟುತ್ತಿದ್ದ ಹಾಗೇ ನಮ್ಮಲ್ಲೂ ಬದಲಾವಣೆ ಕಾಣ ಸಿಗುತ್ತದೆ ಮತ್ತು ಹೆಚ್ಚು ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತೇವೆ.
Bangalore: ರೋಡ್ ರೇಜ್ ಜೊತೆ ವ್ಹೀಲಿಂಗ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ
ಮನೋವಿಜ್ಞಾನದ ಪ್ರಕಾರ, ಸಮಯ ಕಳೆದಂತೆ ನೀವು ಹೆಚ್ಚು ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ಹೊಂದುತ್ತಿರುವ ಚಿಹ್ನೆಗಳು ಇಲ್ಲಿವೆ.
ಯಾರಾದರೂ ಏನಾದರೂ ಕೇಳಿದರೆ, ನಿಮ್ಮ ಕೈಯಲ್ಲಿ ಸಾಧ್ಯವಾಗದಿದ್ದರೂ ಅವರೆಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ದೃಷ್ಟಿಯಲ್ಲಿ ಇಲ್ಲ ಎನ್ನುವುದು ಕಮ್ಮಿ. ಆದರೆ ವಯಸ್ಸಾದಂತೆ ಸಲೀಸಾಗಿ “ಇಲ್ಲ” ಎನ್ನುವ ಸ್ವಭಾವವನ್ನು ಪಡೆದುಕೊಳ್ಳುತ್ತೀರಿ.
ಇಲ್ಲ ಎನ್ನುವ ಮೂಲಕ ಸ್ವಾತಂತ್ರ್ಯ ಮತ್ತು ಸ್ವಾಭಿಮಾನವನ್ನು ಕಂಡುಕೊಳ್ಳುವ ಮಾರ್ಗ ಹುಡುಕುತ್ತೀರಿ. ಇದು ನಿಮ್ಮ ಅರಿವು ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತದೆ.
ಇಲ್ಲ” ಎಂದು ಹೇಳುವುದು ಕೂಡ ನಿಮ್ಮ ಗಡಿಗಳನ್ನು ಸ್ಥಾಪಿಸುವ ಒಂದು ಮಾರ್ಗವಾಗಿದೆ. ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವಿಲ್ಲದಿದ್ದಾಗ ಸ್ವಂತ ಗಡಿಗಳನ್ನು ಹೊಂದಿಸಲು ಕಷ್ಟವಾಗಬಹುದು.
ಆದರೆ ವಯಸ್ಸಾದಂತೆ ಈ ಗಡಿ ಹಾಕಿಕೊಂಡು ಅದನ್ನು ಗೌರವಿಸುವುದನ್ನು ಕಲಿಯುತ್ತೀರಿ. ಗಡಿಗಳ ಜೊತೆಗಿನ ಜೀವನ ನಿಮ್ಮ ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ.
ಚಿಕ್ಕವರಿದ್ದಾಗ ಯಾರಾದ್ರೂ ಹೊಗಳಿದರೆ ಸಾಕು ಕೆನ್ನೆ ಕೆಂಪಾಗಿ ನಾಚಿಕೆ ಪಡುವುದೇ ಹೆಚ್ಚು. ಆದರೆ ವಯಸ್ಸಾದಂತೆ ಅಭಿನಂದನೆಗಳನ್ನು ಸ್ವೀಕರಿಸುವ ಆತ್ಮವಿಶ್ವಾಸ ನಮ್ಮಲ್ಲಿ ಬೆಳೆಯುತ್ತದೆ. ಅಭಿನಂದನೆಯ ಸ್ವೀಕಾರ ಹೆಚ್ಚು ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ತೋರಿಸುತ್ತದೆ.
ವಯಸ್ಸಾದಂತೆ ಸ್ವಯಂ ಅರಿವು ಮತ್ತು ಆತ್ಮವಿಶ್ವಾಸ ಪಡೆಯುತ್ತಾ ಹೋಗುವವರು ಅಭಿನಂದನೆಗಳನ್ನು ಹೇಗೆ ಸ್ವೀಕರಿಸುತ್ತಾರೋ ಹಾಗೇ ಟೀಕೆಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಈ ಗುಣ ನೀವು ಸಾಕಷ್ಟು ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡಿದ್ದೀರಿ ಎಂಬುವುದನ್ನು ಸೂಚಿಸುತ್ತದೆ.
ಯಾರಾದರೂ ಮಾತನಾಡುವುದಕ್ಕಿಂತ ಹೆಚ್ಚು ಕೇಳುತ್ತಿದ್ದರೆ ಖಂಡಿತ ಅವರು ಸ್ವಯಂ-ಅರಿವುಳ್ಳವರಾಗಿರುತ್ತಾರೆ. ವರ್ಷ ಕಳೆದ ಹಾಗೇ ಸ್ವಯಂ-ಅರಿವು, ಆತ್ಮವಿಶ್ವಾಸವನ್ನು ಹೊಂದುವವರು ಸಕ್ರೀಯ ಕೇಳುಗಾರರಾಗಿರುತ್ತಾರೆ.
ಅವರಲ್ಲಿ ಇರೋದು ಯಾಕೆ ನಮ್ಮಲಿಲ್ಲ ಎಂಬ ಹೋಲಿಕೆ ಚಿಕ್ಕವರಿದ್ದಾಗ ಸಹಜವಾಗಿ ಬಂದು ಬಿಡುತ್ತದೆ. ಅದೇ ಪ್ರಬುದ್ಧತೆ ಬರೋ ಹೊತ್ತಿನಲ್ಲಿ ನಿಮ್ಮ ಸಾಮರ್ಥ್ಯ, ಪ್ರತಿಭೆಯನ್ನು ಯಾರ ಜೊತೆಯೂ ಹೋಲಿಕೆ ಮಾಡದೇ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತೀರಿ. ಇದು ವಯಸ್ಸಾದಂತೆ ಬರುವ ಆತ್ಮವಿಶ್ವಾಸದ ಸಂಕೇತವಾಗಿದೆ.
ಕೆಲವರು ಇತರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಅವರಿಷ್ಟ-ಕಷ್ಟಗಳನ್ನೇ ಮರೆತು ಬಿಡುತ್ತಾರೆ. ಕಡಿಮೆ ಆತ್ಮವಿಶ್ವಾಸವನ್ನು ಹೊಂದಿರುವವರು, ಇತರರ ನಿರೀಕ್ಷೆಗಳಿಗೆ ತಕ್ಕಂತೆ ಜೀವನ ಮಾಡುವುದನ್ನು ರೂಢಿಸಿಕೊಳ್ಳುತ್ತಾರೆ.
ಆದಾಗ್ಯೂ, ನೀವು ಪ್ರಬುದ್ಧರಾದಾಗ, ನೀವು ಬೇರೆಯವರಿಗಿಂತ ನಿಮ್ಮ ಸ್ವಂತ ಅನುಮೋದನೆಯನ್ನು ಹೆಚ್ಚು ಗೌರವಿಸಲು ಪ್ರಾರಂಭಿಸುತ್ತೀರಿ ಮತ್ತು ಜನರನ್ನು ಮೆಚ್ಚಿಸೋ ಪ್ರಯತ್ನಕ್ಕೆ ಹೈ ಹಾಕುವುದಿಲ್ಲ.
ಅನಿಶ್ಚಿತತೆಯನ್ನು ಸ್ವೀಕರಿಸುವ ಮನೋಭಾವ ಪ್ರಬುದ್ಧತೆ ಜೊತೆಗೆ ಸಂಬಂಧ ಹೊಂದಿದೆ. ಯಾರೆಲ್ಲಾ ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೋ ಅವರು ಅನಿಶ್ಚಿತತೆಗಳಿಗೆ ಭಯ ಪಡದೇ ಸ್ವೀಕಾರ ಮಾಡುತ್ತಾರೆ, ಎದುರಿಸುತ್ತಾರೆ. ಇದರೊಂದಿಗೆ ಹೆಚ್ಚು ಆತ್ಮವಿಶ್ವಾಸವನ್ನು ಹೊಂದುತ್ತಾರೆ.
ಸ್ವಯಂ-ಅರಿವು ನಮ್ಮ ಸಮಯ ಮತ್ತು ಶಕ್ತಿಯ ಬಗ್ಗೆ ಹೆಚ್ಚು ಜಾಗರೂಕರಾಗಿರಲು ನಮಗೆ ತರಬೇತಿ ನೀಡುತ್ತದೆ. ಆದ್ದರಿಂದ ನಾವು ಪ್ರತಿಯೊಂದು ಸಣ್ಣ ವಿಷಯಕ್ಕೂ ಕೆಲಸ ಮಾಡುವುದಕ್ಕಿಂತ ಆಂತರಿಕ ಶಾಂತಿಯನ್ನು ಆಯ್ಕೆ ಮಾಡಲು ಕಲಿಯುತ್ತೇವೆ. ವಯಸ್ಸಾದಂತೆ ನೆಮ್ಮದಿ, ಶಾಂತಿಗೆ ಆದ್ಯತೆ ನೀಡುತ್ತೇವೆ.
ಕೊನೆಯದಾಗಿ, ನೀವು ವಯಸ್ಸಾದಂತೆ ಹೆಚ್ಚು ಸ್ವಯಂ-ಅರಿವು ಮತ್ತು ಆತ್ಮವಿಶ್ವಾಸವನ್ನು ಹೊಂದಿರುವಾಗ, ನಿಮ್ಮ ಹಿಂದಿನದರ ಬಗ್ಗೆ ಯೋಚಿಸುತ್ತಾ ಕಾಲಹರಣ ಮಾಡುವುದಿಲ್ಲ
ಇದು ನಿಜವಾದ ಸ್ವಯಂ-ಅರಿವಿನ ಸಂಕೇತವಾಗಿದೆ.