ಅನೇಕ ಬಾರಿ ಆಭರಣಗಳ ಹೊಳಪು ಸಮಯ ಕಳೆದಂತೆ ಮಸುಕಾಗುತ್ತಾ ಹೋಗುತ್ತದೆ. ಹೀಗೆ ಆಗಬಾರದು ಎಂದಾದರೆ, ನಿಮ್ಮ ಆಭರಣ ಯಾವಾಗಲೂ ಹೊಸದರಂತೆ ಕಾಣಬೇಕೆಂದು ನೀವು ಬಯಸಿದ್ರೆ ನೀ ಈ ಕೆಳಗಿನ ಟಿಪ್ಸ್ ಟ್ರೈ ಮಾಡಬಹುದು.
ನಿಮ್ಮ ಮನೆಯಲ್ಲಿ ಯಾವುದೇ ಬೆಳ್ಳಿಯ ಆಭರಣಗಳು ಅಥವಾ ವಸ್ತುವು ಕಪ್ಪು ಬಣ್ಣಕ್ಕೆ ತಿರುಗಿದ್ದರೆ, ಅದನ್ನು ಸ್ವಚ್ಛಗೊಳಿಸಲು ನೀವು ಅಕ್ಕಸಾಲಿಗರ ಬಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕೆಲವು ಸುಲಭ ವಿಧಾನದ ಮೂಲಕ ಬೆಳ್ಳಿಯ ಹೊಳಪನ್ನು ಹೆಚ್ಚಿಸಬಹುದು.
ಬೆಳ್ಳಿಯನ್ನು ಹೊಳಪು ಮಾಡುವ ಮಾರ್ಗಗಳು
- ಬಿಸಿ ನೀರಿಗೆ ಬಿಳಿ ವಿನೆಗರ್ ಹಾಕಿ ಮತ್ತು ಅದಕ್ಕೆ ಉಪ್ಪು ಸೇರಿಸಿ. ಅದರಲ್ಲಿ ಬೆಳ್ಳಿಯ ವಸ್ತುಗಳನ್ನು ಹಾಕಿ ಸುಮಾರು ಅರ್ಧ ಗಂಟೆ ಬಿಡಿ. ನಂತರ ಬೆಳ್ಳಿಯ ಮೇಲೆ ಸಂಗ್ರಹವಾಗಿರುವ ಕೊಳೆಯು ಸುಲಭವಾಗಿ ಹೊರಬರುತ್ತದೆ. ಸ್ವಲ್ಪ ಸಮಯದ ನಂತರ ಬಳಸದ ಟೂತ್ ಬ್ರಶ್ ಉಪಯೋಗಿದಿ ಸ್ವಚ್ಛಗೊಳಿಸಿ. ಬೆಳ್ಳಿ ಸ್ವಲ್ಪ ಸಮಯದಲ್ಲೇ ಹೊಳೆಯುತ್ತದೆ.
- ಬೆಳ್ಳಿ ವಸ್ತುಗಳನ್ನು ಟೂತ್ಪೇಸ್ಟ್ ಮತ್ತು ಟೂತ್ ಪೌಡರ್ನಿಂದ ಕೂಡ ಹೊಳಪುಗೊಳಿಸಬಹುದು. ಆದರೆ ಇದಕ್ಕೆ ಬಿಳಿ ಬಣ್ಣದ ಕೋಲ್ಗೇಟ್ ಟೂತ್ ಪೇಸ್ಟ್ ಮತ್ತು ಟೂತ್ ಪೌಡರ್ ಮಾತ್ರ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಪೌಡರ್ ಅಥವಾ ಪೇಸ್ಟ್ ಅನ್ನು ಬ್ರಶ್ನಲ್ಲಿ ತೆಗೆದುಕೊಂಡು ಬೆಳ್ಳಿಯನ್ನು ಉಜ್ಜಿ ಮತ್ತು ಮಧ್ಯದಲ್ಲಿ ಬಿಸಿ ನೀರನ್ನು ಕೂಡ ಬಳಸಿ. ಕೆಲವೇ ಸಮಯದಲ್ಲಿ ಬೆಳ್ಳಿ ಹೊಳೆಯಲು ಪ್ರಾರಂಭಿಸುತ್ತದೆ.
- ಬಿಸಿ ನೀರಿಗೆ ಒಂದು ಚಮಚ ಅಡಿಗೆ ಸೋಡಾ ಹಾಕಿ ಅದರಲ್ಲಿ ಬೆಳ್ಳಿಯ ವಸ್ತುಗಳನ್ನು ಹಾಕಿ. ಅರ್ಧ ಗಂಟೆಯ ನಂತರ ಚೆನ್ನಾಗಿ ಉಜ್ಜಿ. ಬೆಳ್ಳಿ ಶುದ್ಧವಾಗುತ್ತದೆ. ನೀವು ಉಜ್ಜಲು ಫಾಯಿಲ್ ಪೇಪರ್ ಅನ್ನು ಬಳಸಿದರೆ, ನೀವು ಉತ್ತಮ ಹೊಳಪನ್ನು ಪಡೆಯುತ್ತೀರಿ.
- ಕೊರೊನಾ ಅವಧಿಯಿಂದ ಹ್ಯಾಂಡ್ ಸ್ಯಾನಿಟೈಸರ್ ಪ್ರತಿ ಮನೆಯಲ್ಲೂ ಇರುತ್ತದೆ. ಬೆಳ್ಳಿಯನ್ನು ಹೊಳಪು ಮಾಡಲು ಸಹ ಇದನ್ನು ಬಳಸಬಹುದು. ಇದಕ್ಕಾಗಿ, ನೀವು ಒಂದು ಪಾತ್ರೆಯಲ್ಲಿ ಸ್ವಲ್ಪ ಸ್ಪ್ರೇ ಸ್ಯಾನಿಟೈಸರ್ ಅನ್ನು ಹೊರತೆಗೆಯಿರಿ. ಅದರಲ್ಲಿ ಬೆಳ್ಳಿಯನ್ನು ಹಾಕಿ. ಅರ್ಧ ಗಂಟೆಯ ನಂತರ ಉಜ್ಜಿ ಮತ್ತೆ ಸ್ಯಾನಿಟೈಸರ್ನಲ್ಲಿ ಅದ್ದಿ. ಸ್ವಲ್ಪ ಸಮಯದ ನಂತರ ಅದನ್ನು ಉಜ್ಜುವಾಗ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಬೆಳ್ಳಿ ಹೊಳೆಯುತ್ತದೆ.
- ಬೆಳ್ಳಿ ತುಂಬಾ ಕಪ್ಪಾಗದಿದ್ದರೆ, ನಿಂಬೆ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕೂಡ ಸ್ವಚ್ಛಗೊಳಿಸಬಹುದು. ಇದಲ್ಲದೇ ಬಿಸಿ ನೀರಿಗೆ ಡಿಟರ್ಜೆಂಟ್ ಹಾಕಿ ಅದರಲ್ಲಿ ಬೆಳ್ಳಿಯನ್ನು ಸ್ವಲ್ಪ ಹೊತ್ತು ಇಡಬೇಕು. ಅದರ ನಂತರ ಅದನ್ನು ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ನಂತರ ಬೆಳ್ಳಿ ಸ್ಪಷ್ಟವಾಗುತ್ತದೆ.