ಕಲಬುರ್ಗಿ:- ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಛಾಳಿ ಬಿಜೆಪಿ ಅವರದ್ದು ಎಂ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಭಾವನಾತ್ಮಕವಾಗಿ ಜನರ ಕೆರಳಿಸಿ ಲಾಭ ಮಾಡಿಕೊಳ್ಳುವುದು ಬಿಜೆಪಿಯ ಗುಣ. ಜನ ಬಹಳಷ್ಟು ಜಾಗೃತರಾಗಿದ್ದಾರೆ, ಈ ರೀತಿಯ ವಿಷ ಬೀಜ ಬಿತ್ತುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮ, ಕೃಷ್ಣ, ಸೀತಾ ಎಲ್ಲಾ ಜನರ ಭಕ್ತಿ ಮತ್ತು ನಂಬಿಕೆಗೆ ಬಿಟ್ಟಿದ್ದು. ನಾವು ದೇವರ ಭಕ್ತರೇ ಇದ್ದೆವೆ. ಬಿಜೆಪಿಯವರು ದೇಶಕ್ಕಾಗಿ ಏನೇನು ಮಾಡಿಲ್ಲ. ದೇಶಕ್ಕಾಗಿ ಎಲ್ಲಾ ರೀತಿಯಲ್ಲಿ ತ್ಯಾಗ ಮಾಡಿದ್ದು ಕಾಂಗ್ರೆಸ್. ನ್ಯಾವ್ಯಾಕೆ ಹೊಟ್ಟೆ ಕಿಚ್ಚು ಪಡಬೇಕು?, ರಾಷ್ಟ್ರವಿರೋಧಿ ಸಂಘಟನೆಗಳಿಗೆ ಯಾವತ್ತಿಗೂ ಬೆಂಬಲ ಕೊಡುವವರು ಬಿಜೆಪಿಯವರು. ನಮಗೆ ನಷ್ಟ ಆದ್ರೂ ಪರವಾಗಿಲ್ಲ, ನಾವು ರಾಷ್ಟ್ರ ವಿರೋಧಿಗಳಿಗೆ ಬೆಂಬಲ ಕೊಡಲಾರೆವು ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.