ಮಹಿಳೆಯರು ಗರ್ಭಧರಿಸಿದಾಗ ದೇಹದಲ್ಲಿ ಪ್ರೊಲ್ಯಾಕ್ಟಿನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಹೆಚ್ಚಾಗಿ ಹಾಲನ್ನು ಉತ್ಪಾದಿಸಲು ಸ್ತನಗಳನ್ನು ಪ್ರಚೋದಿಸುತ್ತದೆ. ಇದರಲ್ಲಿ ತಾಯಿಯ ಆಹಾರ ಮತ್ತು ಪೌಷ್ಟಿಕಾಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ತಾಯಿಯ ದೇಹ ತಂಪಾಗಿದ್ದರೆ ಅದು ಹಾಲಿನ ಮೂಲಕ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಂತೆ.
ಹಾಗೇ ಹಾಲುಣಿಸುವ ತಾಯಂದಿರು ಯಾವುದೇ ಔಷಧಿಗಳನ್ನು ಸೇವಿಸಿದರೆ ಅದು ಹಾಲಿನ ಮೂಲಕ ಮಗುವಿನ ದೇಹ ಸೇರುವುದಿಲ್ಲ. ಇದರಿಂದ ಮಗುವಿಗೆ ಯಾವುದೇ ಪರಿಣಾಮವಾಗುವುದಿಲ್ಲ. ಆದರೆ ಕ್ಯಾನ್ಸರ್ ನಂತಹ ರೋಗಗಳಿಗೆ ಔಷಧಿ ತೆಗೆದುಕೊಳ್ಳುವವರು ಮಗುವಿಗೆ ಹಾಲುಣಿಸುವ ಹಾಗಿಲ್ಲ ಎನ್ನಲಾಗುತ್ತದೆ.