ಬೆಂಗಳೂರು: ಸರ್ಕಾರವನ್ನು ಥ್ರೆಟನ್ ಮಾಡದ್ರೆ, ಸರ್ಕಾರ ಸುಮ್ಮನಿರುತ್ತಾ? ರಾಜ್ಯ ಸರ್ಕಾರ ಅಷ್ಟೋಂದ್ ವೀಕ್ ಆಗಿದ್ಯಾ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಬಿಜೆಪಿ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳನ್ನು ಸತ್ಯ ಎಂದು ಹೇಳಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಕೂಡ ಸತ್ಯಾಂಶದ ಕುರಿತು ಜನರಿಗೆ ತಿಳಿಸುತ್ತೇವೆ ಎಂದರು.
MUDA, Valmiki Scam: ದೋಸ್ತಿಗಳ ಪಾದಯಾತ್ರೆ ತಡೆದ್ರೆ ಪರಿಸ್ಥಿತಿ ವಿಕೋಪ: ಸರ್ಕಾರಕ್ಕೆ ವಿಜಯೇಂದ್ರ ಚಾಟಿ!
ಬಿಜೆಪು ಪಾದಯಾತ್ರೆಗೆ ಪ್ರತಿಯಾಗಿ ನಾವೂ ಕೂಡ ಪಾದಯಾತ್ರೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧಯಕ್ಷರಾಗಲಿ, ಮುಖ್ಯಮಂತ್ರಿಗಳಾಲಿ ನಾವಾಗಲಿ ಎಲ್ಲೂ ಹೇಳಿಲ್ಲ, ಮಾಡೋದು ಇಲ್ಲ ಎಂದರು.
ಪಾದಯಾತ್ರೆಗೆ ತಡೆ ಅಥವ ಅನುಮತಿ ನೀಡದಿದ್ದರೇ ಪರಿಣಾಮ ಸರಿ ಇರೋದಿಲ್ಲ ಏನ್ ಬೇಕಾದ್ರೂ ಆಗಬಹುದು ಎಂದು ಬಿಜೆಪಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನಿಡಿದ ಅವರು, ಆಗ್ಲಿ, ಏನ್ ಆಗುತ್ತೋ ನೋಡೋಣ, ಅವರು ಸರ್ಕಾರವನ್ನು ಥ್ರೆಟನ್ ಮಾಡೋದಾದ್ರೆ ಕರ್ನಾಟಕ ಸರ್ಕಾರ ಅಷ್ಟೋಂದು ವೀಕ್ ಆಗಿದ್ಯಾ? ನಾವು ಅವರಿಗೆ ಪರ್ಮಿಷನ್ ನೀಡೋದಿಲ್ಲ ಎಂದು ಹೇಳಿದ್ದೇವೆ, ಅನುಮತಿ ನೀಡಲ್ಲ. ಆದರೇ ನಾವು ಅವರನ್ನು ತಡೆಯೋಕೆ ಹೋಗೋದಿಲ್ಲ, ಪ್ರತಿಭಟನೆ ಅವರ ಹಕ್ಕು. ಮಾಡ್ಲಿ ಆದರೇ, ಕಾನೂನು ಬಾಹಿರವಾದ ಕೆಲಸ ಮಾಡಿದರೇ ಸ್ವಾಭಾವಿಕವಾಗಿ ಕಾನೂನು ರಕ್ಷಣೆಯ ಕೆಲಸವನ್ನ ಪೊಲೀಸರು ಮಾಡ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.