ಸಾಕಷ್ಟು ಕಂಪನಿಗಳು ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತದೆ. ಕೆಲಸಗಾರರು ಖುಷಿಯಾದ್ರೆ, ಸಂತೋಷದಿಂದ ಇದ್ರೆ ಅವರು ಸರಿಯಾಗಿ ಕೆಲಸ ಮಾಡ್ತಾರೆ. ಇದ್ರಿಂದ ಕಂಪನಿಗೆ ಲಾಭ ಸಿಗುತ್ತದೆ. ಈ ಗುಟ್ಟನ್ನು ಅರಿತಿರುವ ಬಹುತೇಕ ಕಂಪನಿಗಳು ಕೆಲಸಗಾರರ ಆರೋಗ್ಯ, ಆರ್ಥಿಕ ಸ್ಥಿತಿ ಬಗ್ಗೆಯೂ ಗಮನ ನೀಡುತ್ತದೆ. ಆರೋಗ್ಯ ವಿಮೆ ಅಥವಾ ಅನಾರೋಗ್ಯದ ಪರಿಸ್ಥಿತಿಯಲ್ಲಿ ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿಗಳೂ ಸಾಕಷ್ಟಿವೆ.
ಹೆರಿಗೆ (Childbirth) ಸಮಯದಲ್ಲಿ ಮೂರು ತಿಂಗಳು ವೇತನ ಸಹಿತ ರಜೆಯನ್ನು ಕಂಪನಿಗಳು ನೀಡುವುದು ನಿಮಗೆ ಗೊತ್ತು. ಆದ್ರೆ ಈ ಕಂಪನಿ (Company) ಮಕ್ಕಳನ್ನು ಹೆರಲು ಉದ್ಯೋಗಿ (employee) ಗಳಿಗೆ ಹಣದ ಸಹಾಯ ಮಾಡುತ್ತದೆ. ಹತ್ತೋ, ಇಪ್ಪತ್ತೋ ಸಾವಿರ ಅಲ್ಲ, ಮಕ್ಕಳನ್ನು ಪಡೆಯಲು ಬಯಸಿರುವ ಉದ್ಯೋಗಿಗಳಿಗೆ ಕಂಪನಿ ಲಕ್ಷಾಂತರ ರೂಪಾಯಿ ಸಹಾಯ ಮಾಡುತ್ತದೆ.
ಮಕ್ಕಳನ್ನು ಹೆರಲು ಹಣ ಸಹಾಯ : ಮಕ್ಕಳನ್ನು ಪಡೆಯಲು ಉದ್ಯೋಗಿಗಳಿಗೆ ಹಣದ ಸಹಾಯ ಮಾಡುವ ಕಂಪನಿ ಹೆಸರು ಬೋಯಂಗ್ ಗ್ರೂಪ್ ( Booyoung Group). ಕಂಪನಿ ಯಾಕೆ ನಾವು ಹೀಗೆ ಮಾಡ್ತಿದ್ದೇವೆ ಎಂಬುದನ್ನು ಕೂಡ ಹೇಳಿದೆ. ಕಂಪನಿ ಇದನ್ನು ಪ್ರೋತ್ಸಾಹಧನ ಎಂದು ಕರೆದಿದೆ.
Breaking: ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ, ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ನಿಧನ!
ಕಂಪನಿ ಇದಕ್ಕೆ ಸಂಬಂಧಿಸಿದಂತೆ ಒಂದು ಪ್ರೆಸ್ ನೋಟ್ ಬಿಡುಗಡೆ ಮಾಡಿದೆ. ಅದ್ರಲ್ಲಿ ತನ್ನ ಉದ್ಯೋಗಿಗಳಿಗೆ ಮಗುವನ್ನು ಹೊಂದಲು 100 ಮಿಲಿಯನ್ ಕೊರಿಯನ್ ವಾನ್ ಅಂದ್ರೆ ಸುಮಾರು 62.34 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದೆ. ಇದಲ್ಲದೆ 2021 ರಿಂದ ಒಟ್ಟು 70 ಮಕ್ಕಳನ್ನು ಹೊಂದಿರುವ ಸಿಬ್ಬಂದಿ ಸದಸ್ಯರಿಗೆ ಒಟ್ಟು 7 ಬಿಲಿಯನ್ ಕೊರಿಯನ್ ವಾನ್ ಅಂದಾಜು 43.6 ಕೋಟಿ ರೂಪಾಯಿ ನಗದನ್ನು ವಿತರಿಸಲು ಕಂಪನಿಯು ಘೋಷಿಸಿದೆ. ಇಲ್ಲಿ ಬರೀ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ ಪುರುಷ ಉದ್ಯೋಗಿಗಳಿಗೂ ಮಕ್ಕಳನ್ನು ಪಡೆಯಲು ಹಣದ ನೆರವು ಸಿಗಲಿದೆ.
ಕೋರಿಯಾದಲ್ಲಿ ಜನನ ಪ್ರಮಾಣವು ವೇಗವಾಗಿ ಕಡಿಮೆಯಾಗುತ್ತಿದೆ. ಸದ್ಯ ದರವು ಶೇಕಡಾ 0.78 ರಷ್ಟಿದೆ. ಇದು ವಿಶ್ವದ ಅತ್ಯಂತ ಕಡಿಮೆ ಫಲವತ್ತತೆ ದರವಾಗಿದೆ. ಕೊರಿಯಾದ ಅಧಿಕೃತ ಮಾಹಿತಿಯ ಪ್ರಕಾರ, ಈ ದರವು 2025 ರ ವೇಳೆಗೆ ಶೇಕಡಾ 0.65ರಷ್ಟು ತಲುಪುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಕಂಪನಿ ಇಂಥ ಕ್ರಮಕೈಗೊಂಡಿದೆ. ಕಂಪನಿಯು ಹೆಚ್ಚಿನ ಮಕ್ಕಳನ್ನು ಹೊಂದುವ ಉದ್ಯೋಗಿಗಳಿಗೆ ಆರ್ಥಿಕವಾಗಿ ಹಣವನ್ನು ನೀಡುವ ಘೋಷಣೆ ಮಾಡಿದೆ.
ಮಕ್ಕಳ ಪಾಲನೆ ಈಗಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ಜನರು ಒಂದೋ ಎರಡೋ ಮಕ್ಕಳಿಗೆ ಸೀಮಿತಗೊಳಿಸ್ತಿದ್ದಾರೆ. ಕಂಪನಿ ಆರ್ಥಿಕ ಸಹಾಯ ಮಾಡುತ್ತಿರುವ ಕಾರಣ, ಮಕ್ಕಳ ಪೋಷಣೆ ಉದ್ಯೋಗಿಗಳಿಗೆ ಸುಲಭವಾಗಲಿದೆ ಎಂದು ಕಂಪನಿಯ ಅಧ್ಯಕ್ಷ ಲೀ ಜಂಗ್-ಕ್ಯುನ್ ಹೇಳಿದ್ದಾರೆ. ಮಕ್ಕಳನ್ನು ಪಡೆಯಲು ಇದ್ರಿಂದ ಪ್ರೋತ್ಸಾಹ ಕೂಡ ಸಿಗಲಿದೆ.