ಬೆಂಗಳೂರು:- ಹೈಕಮಾಂಡ್ ನಾಯಕರನ್ನು DCM ಡಿಕೆಶಿ ಭೇಟಿ ಮಾಡಿರುವ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹೊಸ ವರ್ಷದ ಕಾರಣ ವಿಶ್ ಮಾಡಲು ಹೋಗಿದ್ದಾರೆ. ಹೈಕಮಾಂಡ್ ನಾಯಕರನ್ನು ಡಿಕೆಶಿ ಬೇಟಿ ಮಾಡುತ್ತಿದ್ದಾರೆ. ಸೋನಿಯಾ, ಖರ್ಗೆ,ರಾಹುಲ್ ಭೇಟಿ ಮಾಡುವುದು ಡಿಕೆಶಿ ಪದ್ದತಿ. ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರ ಭೇಟಿ ಮಾಡ್ತಾರೆ. ಮೂವತ್ತು ವರ್ಷಗಳಿಂದ ಇದನ್ನು ಡಿಕೆಶಿ ಪಾಲಿಸಿಕೊಂಡು ಬಂದಿದ್ದಾರೆ ಎಂದರು.
ಇನ್ನೂ ಒನ್ ಮ್ಯಾನ್ ಒನ್ ಪೊಸ್ಟ್ ವಿಚಾರವಾಗಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಗೆ ಪಕ್ಷ ಕೊಟ್ಟಿರುವ ಹುದಗಳು.
ಡಿ ಕೆ ಶಿವಕುಮಾರ್ ಏನು ಕಿತ್ತುಕೊಂಡಿಲ್ಲ. ಸೋನಿಯಾ ಗಾಂಧಿ, ಖರ್ಗೆ, ರಾಹುಲ್ ಗಾಂಧಿ ಹುದ್ದೆ ಕೊಟ್ಟಿದ್ದಾರೆ. ಹೈಕಮಾಂಡ್ ಬೇಡ ಅಂದ್ರೆ ಹುದ್ದೆ ಬಿಡಲು ರೆಡಿ ಇದ್ದಾರೆ. ಯಾವುದು ಶಾಸ್ವತವಾದ ಹುದ್ದೆಗಳೇನು ಅಲ್ಲ. ತೀರ್ಮಾನ ಹೈಕಮಾಂಡ್ ನಾಯಕರೆ ಮಾಡಬೇಕು.
ಹೈಕಮಾಂಡ್ ನಾಯಕರನ್ನೇ ಪ್ರಶ್ನಿಸಿದಂತಾಗುತ್ತದೆ. ಮಾಧ್ಯಮಗಳ ಮುಂದೆ ಬೇಡಿಕೆ ಇಡುವುದು ಬೇಡ. ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟು ಹುದ್ದೆ ಪಡೆಯಲಿ. ಕೆಪಿಸಿಸಿ ಅಧ್ಯಕ್ಷ ಹಾಗೂ ಹೆಚ್ಚುವರಿ ಡಿಸಿಎಂ ಕೇಳಿದವರಿಗೆ ಡಿಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.