ಗದಗ: ಕಾಂಗ್ರೆಸ್ ಸಮುದ್ರ ಇದ್ದಂತೆ ಜಗದೀಶ್ ಶೆಟ್ಟರ್ ಬಂದ್ರು ಅಂತ ಉಕ್ಕಲಿಲ್ಲ ಅವರು ಹೋದರು ಅಂತ ಹೆಚ್ಚು ಕಡಿಮೆಯಾಗಿಲ್ಲ ಎಂದು ಗದಗದಲ್ಲಿ ಕಾನೂನು ಸಚಿವ ಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತತ್ವ, ಸಿದ್ಧಾಂತ, ಜನಪರ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಸಂಘಟನೆಗೆ ಶಕ್ತಿ ನೀಡಿದೆ. ಕ್ರಾಂತಿಕಾರಕ ಬದಲಾವಣೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ತಂದಿದೆ. ನಮ್ಮನ್ನು ನೋಡಿ ಮೋದಿ ಅವರೂ ಗ್ಯಾರಂಟಿ ಅನ್ನೋದಕ್ಕೆ ಪ್ರಾರಂಭಿಸಿದ್ರು.
ಯಾರೋ ಒಬ್ಬರು ಹೋದರು ಹಂತ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲ್ಲ, ಶೆಟ್ಟರ್ ಅವರು ಜೆಂಟಲ್ ಮ್ಯಾನ್ ಅಂತ ತಿಳಿದುಕೊಂಡು ಸ್ವಾಗತಿಸಿದ್ವಿ, ಅವರು ಸಿಎಂ ಆದವರು ಅವರಿಗೆ ಎಂಎಲ್ಎ ಟಿಕೆಟ್ ಕೊಟ್ಟಿದ್ದೇವೆ. ಸೋಲಾದಾಗ ಗೌರವಕ್ಕೆ ಚ್ಯುತಿ ಬರಬಾರದು ಅಂತ ಎಂಎಲ್ಸಿ ಮಾಡಿದ್ವಿ. ಅವರ ಜೊತೆಗೆ ನಡೆದುಕೊಂಡ ರೀತಿ ಅವರು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ಗೆ ಚಿಂತೆ ಮಾಡುವ ವಿಷಯ ಏನಿಲ್ಲ ಎಂದು ಹೇಳಿದರು.
ಇನ್ನು ಶೆಟ್ಟರ್ ಶೆಟ್ಟರ್ ಘರ್ ವಾಪ್ಸಿಯಿಂದ ಲಿಂಗಾಯತ ಮತಗಳು ಮತ್ತೆ ಬಿಜೆಪಿ ಕಡೆಗೆ ಎಂಬ ವಿಶ್ಲೇಷಣೆಗೆ ಕೆಲ ಆಸಕ್ತ ವರ್ಗ ಮಾತ್ರ ಹೀಗೆ ಮಾತನಾಡುತ್ತದೆ. ತಾವು ತೆಗೆದುಕೊಂಡ ನಿರ್ಣಯದ ಬಗ್ಗೆ ಅಂತರಾಷ್ಟ್ರೀಯ ಲಿಂಗಾಯಿತ ಸಮೂಹ ಅಭಿನಂದಿಸಿದೆ. ಸಿದ್ದರಾಮಯ್ಯ ಅವರಿಗೆ ಮಾಲೆ ಶಾಲು ಹಾಕುತ್ತಿದ್ದಾರೆ. ಯಾವುದೇ ವರ್ಗ ಯಾವುದೇ ಸಮೂಹ ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಹಿಂದೂ ಎಚ್ ಕೆ ಪಾಟೀಲ್ ಹೇಳಿದರು.