ಬೆಂಗಳೂರು: ಪಂಚಮಸಾಲಿ ಮೀಸಲಾತಿ ವಿಚಾರ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮುರುಗೇಶ್ ನಿರಾಣಿ ಸವಾಲು ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಲಕ್ಷ್ಮಿ ಅವರು 2ಎ ಮೀಸಲಾತಿ ಮಾಡಿ ಕೊಟ್ರೆ ಒಂದು ಕೆಜಿ ಕುಂದಾ ತಂದು ಸನ್ಮಾನ ಮಾಡೋದಾಗಿ ಹೇಳಿದ್ರು ನಿಮ್ಮ ಕೈಯಲ್ಲಿ ಆಗದಿದ್ರೆ ಮೂರು ತಿಂಗಳ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2ಎ ಮೀಸಲಾತಿ ಮಾಡಿಕೊಡ್ತೇವೆ ಆಗ ನೀವು ಒಂದು ಜತೆ ಬಂಗಾರದ ಬಳೆ ಮಾಡಿಸಿ ಕೊಡಿ ಅಂದಿದ್ರು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮುರುಗೇಶ್ ನಿರಾಣಿ ಸವಾಲು ಹಾಕಿದರು.
ಹೈಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ವೀಕ್ ಆಗಿಲ್ಲ ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ: ಜಿ.ಪರಮೇಶ್ವರ್
ಈಗ ಅವರದ್ದೇ ಸರ್ಕಾರ ಬಂದು ಒಂದೂವರೆ ವರ್ಷ ಆಯ್ತು, ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲಿ ಮೀಸಲಾತಿ ಕೊಟ್ಟರೆ ಲಕ್ಷ್ಮಿ ಅವರಿಗೆ ಒಂದು ಕೆಜಿ ಬಂಗಾರ ಕೊಟ್ಟು ಸನ್ಮಾನ ಮಾಡ್ತೇನೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಒಂದು ಕೆಜಿ ಬಂಗಾರ ನೀಡಿ ಸನ್ಮಾನದ ಆಫರ್ ಕೊಟ್ಟ ಮುರುಗೇಶ್ ನಿರಾಣಿ