ಬೆಂಗಳೂರು: ನಿಮ್ಮಿಂದ ಆಗಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ. ದೇವರೇ ಬಂದರು ಬೆಂಗಳೂರು ಅಭಿವೃದ್ಧಿ ಮಾಡೋಕೆ ಆಗಲ್ಲ ಎಂಬ ಡಿಕೆಶಿ ಹೇಳಿಕೆಗೆ ನಗರದಲ್ಲಿ ಮಾತನಾಡಿದ ಅವರು, ಕೈಲಾಗದವರು ಮೈ ಪರಚಿಕೊಂಡ ರೀತಿ ಇವರದ್ದು ಆಗಿದೆ.
ಬೆಂಗಳೂರನ್ನ ಹಾಗೆ ಮಾಡ್ತೀವಿ ಹೀಗೆ ಮಾಡ್ತೀವಿ ಅಂತ ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ಇವರು.ಅವರು ಕೊಟ್ಟ ಗ್ಯಾರಂಟಿಗೆ ವಾರಂಟಿ ಇಲ್ಲದ ಹಾಗೇ ಆಗಿದೆ.ಇವರು ನಮ್ಮನ್ನ ಗ್ಯಾರಂಟಿ ಒಂದೇ ಕಾಪಾಡುತ್ತೆ ಅಂತ ಅಂದುಕೊಂಡಿದ್ದಾರೆ. ದೇವರು ಬಂದರೂ ಅಭಿವೃದ್ಧಿ ಮಾಡೋಕೆ ಆಗಲ್ಲ ಅಂದರೆ ನೀವು ಯಾಕೆ ಅಧಿಕಾರದಲ್ಲಿ ಇದ್ದೀರಾ?
ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ: ದೊಡ್ಡ ಅಪಾಯ ಕಾದಿದೆ ಎಂದ ಕೇಂದ್ರ ಸರ್ಕಾರ
ಅಧಿಕಾರ ಬಿಟ್ಟು ತೊಲಗಿ ಹೋಗಿ. ರಾಜೀನಾಮೆ ಕೊಟ್ಟುಬಿಡಿ. ಇಷ್ಟು ದಿನ ಬೆಂಗಳೂರನ್ನ ನೀವೇ ಕಾಪಾಡಿರೋದಾ? ನಿಮ್ಮಿಂದ ಆಗಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಿ ಅಂತ ಕಾಂಗ್ರೆಸ್ ವಿರುದ್ದ, ಡಿಕೆಶಿ ವಿರುದ್ದ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು