ದಾವಣಗೆರೆ:- CM ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಮಾತನಾಡಿದ್ರೆ ಸಹಿಸೋದಿಲ್ಲ ಎಂದು ಮಾಜಿ ಶಾಸಕ ಎಸ್ ರಾಮಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಏಕವಚನದಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗಡೆಗೆ ಮೆಟ್ನಲ್ಲಿ ಹೊಡಿತೀನಿ ಎಂದು ಹೇಳಿದ್ದಾರೆ. ಇನ್ನೊಂದು ಸಾರಿ ಮಾತನಾಡಿದ್ರೆ ಎಲ್ಲಿದಾನೋ ಅಲ್ಲಿಗೆ ಹೋಗಿ ಮೆಟ್ನಲ್ಲಿ ಹೊಡಿತೀನಿ ಎಂದು ಹೇಳುವ ಮೂಲಕ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ಮಾಜಿ ಶಾಸಕ ಎಸ್ ರಾಮಪ್ಪ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅ ನನ್ ಮಗ ಇಷ್ಟು ದಿನ ನೆಲ ಕಚ್ಚಿದ್ದ ದೇವರ ದಯದಿಂದ ಬದುಕಿ ಬಂದಿದಾನೆ. ಈಗ ಸಿದ್ದರಾಮಯ್ಯ ನವರಿಗೆ ಹೀಗೆ ಮಾತನಾಡಿದ್ರೆ ಸರಿ ಇರೋದಿಲ್ಲ. ಹಿಂದುತ್ವ ಅನ್ನೋದು ಬಿಜೆಪಿ ಅಪ್ಪನ ಸ್ವತ್ತಾ. ನಾವು ಕೂಡ ಹಿಂದೂಗಳು ನಮಗೂ ಹಿಂದೂತ್ವ ಇದೆ. ಆದರೆ ಎಲ್ಲಾ ಧರ್ಮಗಳು ಒಂದಾಗಿ ಬಾಳಬೇಕು ಅನ್ನೋದು ನಮ್ ಆಸೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಗೆ ಏಕವಚನದಲ್ಲೇ ಸಿದ್ದರಾಮಯ್ಯ ಆಪ್ತ ಮಾಜಿ ಶಾಸಕ ಎಸ್ ರಾಮಪ್ಪ ನಿಂದಿಸಿದ್ದಾರೆ.