ನವದೆಹಲಿ: ನಾವು ಇಷ್ಟಪಡುವ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನದಲ್ಲಿ ಸಮತೋಲನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಹೇಳಿದ್ದಾರೆ. ವಾರಕ್ಕೆ 70 ಗಂಟೆ ದುಡಿಬೇಕು ಎನ್ನುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಹೇಳಿಕೆ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ.
ಇದರ ಬೆನ್ನಲ್ಲೇ ʻಕೆಲಸ-ಜೀವನ ಸಮತೋಲʼ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ನಾವು ಇಷ್ಟಪಡುವ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನದಲ್ಲಿ ಸಮತೋಲನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಗಮನಿಸಿ.. ಹೊಸ ವರ್ಷಕ್ಕೆ ಹೊಸ ರೂಲ್ಸ್: UPI, LPG ಸಿಲಿಂಡರ್, GST ನಿಯಮಗಳಲ್ಲಿ ಭಾರೀ ಬದಲಾವಣೆ
ನಿಮ್ಮ ಕೆಲಸ ಮತ್ತು ಜೀನವದ ಸಮತೋಲನವನ್ನು ನನ್ನ ಮೇಲೆ ಹೇರಬಾರದು, ಹಾಗೆಯೇ ನನ್ನ ಕೆಲಸ-ಜೀವನ ಸಮತೋಲನವನ್ನ ನಿಮ್ಮ ಮೇಲೆ ಹೇರಬಾರದು. ನಾನು ನನ್ನ ಕುಟುಂಬದೊಂದಿಗೆ ನಿತ್ಯ 4 ಗಂಟೆ ಕಳೆಯುತ್ತೇನೆ, ನನಗೆ ಅದರಲ್ಲಿ ಆನಂದ ಇದೆ. ಉಳಿದ ಸಮಯದಲ್ಲೂ 8 ಗಂಟೆಕಾಲ ಕೆಲಸ ಮಾಡ್ತಾ ಕುಳಿತರೇ ಹೆಂಡ್ತಿ ಓಡಿಹೋಗ್ತಾಳೆ ಅಂತ ಹಾಸ್ಯ ಚಟಾಕಿ ಹಾರಿಸಿದ್ದಾರೆ.