ಬೆಂಗಳೂರು:- ಒಂದೇ ಒಂದು BPL ಕಾರ್ಡ್ ರದ್ದಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಸುಖಾಸುಮ್ಮನೆ ಸಂಗಾತಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸೋದು ತಪ್ಪು! ಸುಪ್ರೀಂ
ಈ ಸಂಬಂಧ ಮಾತನಾಡಿದ ಅವರು, ರದ್ದಾಗಿರುವ ರೇಷನ್ ಕಾರ್ಡ್ಗಳನ್ನು ಸರ್ಕಾರ ವಾಪಸ್ ಕೊಡದೇ ಹೋದರೆ ಹಳ್ಳಿಹಳ್ಳಿಗಳಲ್ಲಿ ಹೋರಾಟದ ಮೂಲಕ ಬಿಜೆಪಿ ಜಾಗೃತಿ ಮೂಡಿಸಬೇಕಾಗುತ್ತದೆ ಎಂದರು.
ಚುನಾವಣೆ ಪೂರ್ವದಲ್ಲಿ ಯಾವುದೇ ಷರತ್ತು ವಿಧಿಸದೇ ಎಲ್ಲರಿಗೂ ಉಚಿತ ಎಂದು ಗ್ಯಾರಂಟಿ ಘೋಷಿಸಿದ್ದೀರಿ. ಈಗ ಬಿಪಿಎಲ್ ರದ್ದುಪಡಿಸಿದ್ದೀರಿ. ಸಿಎಂ, ಆಹಾರ ಸಚಿವರು ಈಗ ಉತ್ತರ ಕೊಡಿ ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಚುನಾವಣೆ ಮುಗಿಯುತ್ತಿದ್ದಂತೆ ಬಿಪಿಎಲ್ ರದ್ದು ಮಾಡಲು ಹೊರಟಿದ್ದೀರಿ. ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡಾ ರದ್ದು ಮಾಡಬಾರದು. ಮಾಡಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದರು.