ಚಾಮರಾಜನಗರ:– ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಪರ ಬ್ಯಾಟ್ ಬೀಸಿದ್ದ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆಗೆ ಮಾಜಿ ಸಚಿವ ಹೆಚ್ ವಿಶ್ವನಾಥ್ ಕೆಂಡಾಮಂಡಲ ಆಗಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಶ್ಯಾಮನೂರು ಶಿವಶಂಕರಪ್ಪ ಯಾವ ಹಿರಿಯ ಮುತ್ಸದ್ದಿಯೂ ಅಲ್ಲ ಜಾತಿವಾದಿ ಮುತ್ಸದ್ದಿಗಳು. ಕಾಂಗ್ರೆಸ್ ಜೀವಂತವಾಗಿದ್ರೆ ಮೊದ್ಲು ಅವನನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡ್ಸಿ.
ಶ್ಯಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಇಂದ ಟಿಕೆಟ್ ಪಡೆದು ಶಾಸಕರಾಗಿ ಮಗ ಮಂತ್ರಿಯಾಗಿ. ನೀನು ಕಾಂಗ್ರೆಸ್ ನಲ್ಲಿ ಇದ್ದುಕೊಂಡೆ ನೀನು ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡೆ ಬೇರೆ ಪಾರ್ಟಿಗೆ ಕ್ಯಾನ್ವಸ್ ಮಾಡ್ತಿಯಲ್ಲ ಏನ್ ಹೇಳ್ಬೇಕು ನಿನಗೆ. ನೀನು ದೇಶವಾದಿನೊ ಇಲ್ಲ ಜಾತಿ ವಾದಿನೊ..? ಎಂದು ಪ್ರಶ್ನಿಸಿದರು.
ಇನ್ನೂ ನಿಗಮ ಮಂಡಳಿ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ, ಎಂ.ಎಲ್.ಎ ಗಳಿಗೆ ಬೋರ್ಡ್ಸ್ ಎಂಡ್ ಕಾರ್ಪೋರೇಷನ್ ಕೊಡ್ಬೇಡಿ ಅಂತ ವೀರೆಂದ್ರ ಪಾಟೀಲರ ಕಾಲದಲ್ಲೇ ಹೇಳಿದ್ದೆ ನಾನು ಎಂದು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.