ಬೆಂಗಳೂರು:- ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ರೆ ಚುನಾವಣೆಗೆ ನಿಲ್ಲುವೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
PSI ಬಂಧನಕ್ಕೆ ಆಗ್ರಹ: ಬಂದ್ ಗೆ ಸಹಕಾರ ನೀಡಿದ ಅಂಗಡಿ ಮಾಲೀಕರಿಗೆ ಅಭಿನಂದನೆ!
ಈ ಸಂಬಂಧ ಮಾತನಾಡಿದ ಅವರು,ಬೊಮ್ಮಾಯಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲು ಎಂದರೆ ನಾನು ಸ್ಪರ್ಧಿಸುತ್ತೇನೆ. ನಾನು ಅಷ್ಟು ದೊಡ್ಡ ವ್ಯಕ್ತಿ ಅಲ್ಲ. ನನಗೆ ಹೈಕಮಾಂಡ್ ಗೊತ್ತಿಲ್ಲ. ಕಾಂಗ್ರೆಸ್ನವರು ನಿಂತುಕೊಳ್ಳಿ ಎಂದರೆ ರುಬ್ಬೋಣ ಹಾಕ್ಕೊಂಡು. ನಂಗೇನೂ ಸಮಸ್ಯೆ ಇಲ್ಲ’ ಎಂದು ಜಗದೀಶ್ ಅವರು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಆದಿವಾಸಿ ಹೆಣ್ಣುಮಗಳನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ. ಒಬ್ಬ ಟೀ ಮಾರುವವನು ಪ್ರಧಾನಿ ಆಗಬಹುದಾದರೆ ನಾನೇಕೆ ಆಗಬಾರದು. ನಾನು ಸಿಎಂ ಆಗುತ್ತೇನೆ ಎಂದರೆ ತುಂಬಾ ಕಡಿಮೆ. ನಾನು ಪ್ರಧಾನ ಮಂತ್ರಿ ಆಗಬೇಕಾದವನು. ಆದರೆ ಏನೂ ಅಚ್ಚರಿ ಇಲ್ಲ. ಯಾಕೆಂದರೆ ನಾವು ಅದೇ ಹಾದಿಯಲ್ಲಿ ಇದ್ದೇವೆ. ನಮ್ಮ ಗುರಿ ತುಂಬ ದೊಡ್ಡದಾಗಿದೆ’ ಎಂದು ಜಗದೀಶ್ ಹೇಳಿದ್ದಾರೆ.
ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕು. ಬಡವರ ಮಕ್ಕಳು ಎಂಎಲ್ಎ, ಎಂಪಿ, ಮಂತ್ರಿ ಆಗಬೇಕು. ಆಗ ದೇಶ ಉದ್ಧಾರ ಆಗತ್ತೆ. ಹೊಟ್ಟೆ ತುಂಬಿರುವವರು ಆದರೆ ದೇಶವನ್ನು ಹಾಳು ಮಾಡುತ್ತಾರೆ. ಬಡವಳ ಮಕ್ಕಳು ಅಧಿಕಾರಕ್ಕೆ ಬಂದರೆ ದೇಶ ಸಮೃದ್ಧಿ ಆಗುತ್ತೆ ಅಂತ ನಂಬಿರುವ ವ್ಯಕ್ತಿ ನಾನು. ನಾನೂ ಕೂಡ ಸಾಮಾನ್ಯರ ಮಗ. ಹಾಗಾಗಿ ನಾನು ಸಿಎಂ, ಪಿಎಂ ಆದರೆ ತಪ್ಪೇನಿದೆ? ಖಂಡಿತಾ ಆಗುತ್ತೇನೆ, ಬಿಡಲ್ಲ. ಈ 11 ವರ್ಷದಲ್ಲಿ ನನ್ನನ್ನು ರಾಜಕೀಯದಲ್ಲಿ ಬಚ್ಚ ಅಂತ ಅಂದುಕೊಂಡಿರುವವರ ಮುಂದೆ ನಾನು ಆಗೇ ಆಗುತ್ತೇನೆ’ ಎಂದು ಜಗದೀಶ್ ತಮ್ಮ ಗುರಿ ಬಗ್ಗೆ ಹೇಳಿಕೊಂಡಿದ್ದಾರೆ.