ನವದೆಹಲಿ: ಭಾರಿ ಕುತೂಹಲ ಮೂಡಿಸಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಜ್ಜಾಗುತ್ತಿದೆ. ಇದೀಗ ಫೆ.5 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿ ನಿವಾಸಿಗಳಿಗೆ ಗ್ಯಾರಂಟಿ ಯೋಜನೆಯನ್ನು ಘೋಷಿಸಿದ್ದು,
ಈ ಮೂಲಕ 500 ರೂ. ಎಲ್ಪಿಜಿ ಸಿಲಿಂಡರ್, ಉಚಿತ ಪಡಿತರ ಕಿಟ್ ಮತ್ತು 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಜೊತೆಗೆ ಕಾಂಗ್ರೆಸ್ ತನ್ನ ಐದು ಭರವಸೆಗಳನ್ನು ಪೂರೈಸುತ್ತದೆ ಎಂದು ತಿಳಿಸಿದರು.
Gruha Lakshmi: ಗೃಹಲಕ್ಷ್ಮಿ ಹಣ ನಿಮಗೆ ಇನ್ನೂ ಬಂದಿಲ್ವಾ..? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಗುಡ್ ನ್ಯೂಸ್
ಇದಕ್ಕೂ ಮುನ್ನ `ಜೀವನ್ ರಕ್ಷಾ’ ಹೆಸರಿನಲ್ಲಿ 25 ಲಕ್ಷ ರೂ. ವಿಮೆ, `ಪ್ಯಾರಿ ದೀದಿ’ ಯೋಜನೆಯಡಿ 2,500 ರೂ. ನೀಡುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದರು. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ `ಪ್ಯಾರಿ ದೀದಿ’ ಯೋಜನೆಯನ್ನು ಘೋಷಿಸಿದ್ದರು. ಅಲ್ಲದೇ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.