ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಮಾಜ ವಿಧ್ರೋಹಿಗಳಿಗೆ, ಮತಾಂಧರಿಗೆ ಶಕ್ತಿ ಬಂದಂತಾಗಿದೆಕಾಂಗ್ರೆಸ್ ಸರ್ಕಾರ ಬಂದಾಗೆಲ್ಲ ಪಿಎಫ್ ಐ, ಎಸ್ ಡಿಪಿಐ ಮೇಲಿನ ಕೇಸ್ ಗಳನ್ನ ಹಿಂಪಡೆದ ಹಿನ್ನೆಲೆ ಸಮಾಜ ದ್ರೋಹಿ ಶಕ್ತಿಗಳಿಗೆ ಬಲ ಬಂದಿದೆ. ಹೀಗಾಗಿ ಹಸು ಕೆಚ್ಚಲು ಕೊಯ್ಯುವ ಮಟ್ಟಕ್ಕೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಂದಿನಂತೆ ಕಾಂಗ್ರೆಸ್ ಸರಕಾರ ಹಾಗೂ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕ್ರಿಮಿನಲ್ ಗಳನ್ನು ಏನಾದ್ರು ಆದ್ರೆ ರಕ್ಷಿಸಿಸುತ್ತಾರೆ ಅನ್ನೋ ಧೈರ್ಯ ಬಂದಿದೆ. ಪರಿಣಾಮ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ.
IAF Recruitment: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಸಿ
ಸರ್ಕಾರ ಗಟ್ಟಿಯಾಗಿದ್ರೆ, ಈ ರೀತಿ ನಡೆಯೋದಿಲ್ಲ. ಸರ್ಕಾರದ ಸಂಪೂರ್ಣ ವೈಫಲ್ಯ ಆಗಿದೆ. ಅಮಾಯಕ ಹಸುಗಳ ಮೇಲೆ ಈ ರೀತಿ ಮಾಡ್ತಾರೆ. ಇದರ ಬಗ್ಗೆ ಹೋರಾಟ ಮಾಡಿದ್ರೆ ಇದು ರಾಜಕೀಯ ಪ್ರೇರಿತ ಅಂತ ಸಿಎಂ ಅಸಡ್ಡೆಯಿಂದ ಮಾತನಾಡುತ್ತಾರೆ ಎಂದರು.ರಾಜ್ಯ ಸರ್ಕಾರದ ನೀತಿಯಿಂದಾಗಿ ಜನರ ಬದುಕು ಹೇಗೆ ಅನ್ನೋದನ್ನ ವಿಚಾರ ಮಾಡಬೇಕು.
ಎಲ್ಲಾ ಕ್ರಿಮಿನಲ್ಸ್ ಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗ ಆಗಿದೆ ಎಂದರು.ಇನ್ನು ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸು ಕೆಚ್ಚಲು ಕೊಯ್ದ ಆರೋಪಿ ಬಂಧನ ಕುರಿತು ಮಾತನಾಡಿದ ಅವರು ಕುಡಿದ ಮತ್ತಿನಲ್ಲಿ ಅವರ ಮನೆಯವರನ್ನು ಕೊಲೆ ಮಾಡತ್ತಾರಾ? ಯಾರು ಆ ರೀತಿ ಹೇಳಿದ್ದಾರಲ್ಲ. ಅವರ ಮನೆಯಲ್ಲೇ ಯಾರನ್ನದ್ರೂ ಕೊಲೆ ಮಾಡಿದ್ರೆ ಬಿಡ್ತಾರಾ? ಕುಡಿದಾಗ ಏನು ಬೇಕಾದ್ರೂ ಮಾತನಾಡಬಹುದಾ? ಇದ್ದ ಹಸುಗಳನ್ನು ನರಳುವಂತೆ ಮಾಡಿ, ಹೊಸದನ್ನ ಕೊಡಸ್ತೀನಿ ಅಂದ್ರೆ, ಜಮೀರ್ ಗೆ ಏನಾದ್ರೂ ಬುದ್ದಿ ಇದೆಯಾ? ಎಂದು ಪ್ರಶ್ನಿಸಿದರು.