ಕೋಲ್ಕತ್ತಾ:- ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಅವರ ಗೂಂಡಾಗಳನ್ನು ತಲೆ ಕೆಳಗಾಗಿ ನೇತು ಹಾಕುತ್ತೇವೆ ಎಂದರು.
ಮಮತಾ ಬ್ಯಾನರ್ಜಿ ಅವರು ಮಾ, ಮಾತಿ, ಮಾನುಷ್ ಘೋಷಣೆಯ ಮೇಲೆ ಅಧಿಕಾರಕ್ಕೆ ಬಂದರು. ಸಂದೇಶಖಾಲಿಯಲ್ಲಿ ‘ಮಾ’ರನ್ನು ಹಿಂಸಿಸಲಾಯಿತು. ಮನುಷ್ (ಬ್ಯಾನರ್ಜಿ) ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಬಿಜೆಪಿಗೆ ಮತ ನೀಡಿ, ಮಮತಾ ಬ್ಯಾನರ್ಜಿ ಗೂಂಡಾಗಳನ್ನು ತಲೆ ಕೆಳಗಾಗಿ ನೇತುಹಾಕುತ್ತೇವೆ ಎಂದು ತಿಳಿಸಿದ್ದಾರೆ
ಕಾಂಗ್ರೆಸ್ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಟ್ಟುವ ಧೈರ್ಯವಿಲ್ಲ. ಹೊಸ ಕಾನೂನಿನ ಅಡಿಯಲ್ಲಿ ಎಲ್ಲಾ ಹಿಂದೂ ನಿರಾಶ್ರಿತರಿಗೆ ಪೌರತ್ವ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಒಳನುಸುಳುವಿಕೆಯನ್ನು ನಿಲ್ಲಿಸಬಹುದೇ? ಅವರಿಂದ ಸಾಧ್ಯವಿಲ್ಲ. ಮೋದಿಜಿ ಮಾತ್ರ ಒಳನುಸುಳುವಿಕೆಯನ್ನು ತಡೆಯಬಹುದು. ಕಳೆದ ಬಾರಿ 18 ಸೀಟು ಕೊಟ್ಟಿದ್ದೀರಿ. ಮೋದಿ ರಾಮಮಂದಿರ ಕೊಟ್ಟಿದ್ದಾರೆ. ಈ ಬಾರಿ 35 ಸೀಟು ಕೊಡಿ, ನುಸುಳುವುದನ್ನು ನಿಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ