ನವದೆಹಲಿ: ಉದ್ಧವ್ ಠಾಕ್ರೆ ಅವರು ‘ದ್ರೋಹದ ಬಲಿಪಶು’ ಎಂಬ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಹೇಳಿಕೆಗೆ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಶಂಕರಾಚಾರ್ಯ ವಿರುದ್ಧ ಹರಿಹಾಯ್ದ ಕಂಗನಾ, ಶಿಂಧೆ ಅವರನ್ನು ‘ವಿಶ್ವಾಸಘಾತುಕ’ ಹಾಗೂ ‘ದ್ರೋಹಿ’ ಎಂದು ಕರೆಯುವ ಮೂಲಕ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಎಲ್ಲರ ಭಾವನೆಗಳಿಗೆ ಘಾಸಿ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆನ್ನು ನೋವು ಪ್ರಾಣ ಹಿಂಡುತ್ತಿದೆಯೇ..? ಇಲ್ಲಿದೆ ನೋಡಿ ಮುಕ್ತಿ ಹೊಂದಲು ಪರಿಹಾರ
ರಾಜಕೀಯದಲ್ಲಿ ಮೈತ್ರಿಗಳನ್ನು, ಒಪ್ಪಂದಗಳನ್ನು ಹೊಂದುವುದು ಹಾಗೂ ಪಕ್ಷದ ಒಳಗೆ ವಿಭಜನೆಯಾಗುವುದು ಬಹಳ ಸಹಜ ಮತ್ತು ಅದು ಸಾಂವಿಧಾನಿಕ ಕೂಡ. ಕಾಂಗ್ರೆಸ್ ಪಕ್ಷವು 1907ರಲ್ಲಿ ಮತ್ತು 1971ರಲ್ಲಿ ವಿಭಜನೆಯಾಗಿತ್ತು. ಒಬ್ಬ ರಾಜಕಾರಣಿಯು ರಾಜಕೀಯ ಮಾಡದೆ, ಆತ ಗೋಲ್ಗಪ್ಪ ಮಾರಾಟ ಮಾಡುತ್ತಾನೆಯೇ?” ಎಂದು ಎಕ್ಸ್ ಖಾತೆಯಲ್ಲಿ ಕಂಗನಾ ಕಿಡಿಕಾರಿದ್ದಾರೆ.
ತನ್ನ ಪ್ರಜೆಗಳನ್ನು ರಾಜನೇ ಶೋಷಿಸಲು ಆರಂಭಿಸಿದರೆ ವಿಶ್ವಾಸಘಾತುಕತನವೇ ಅಂತಿಮವಾದ ಧರ್ಮ ಎಂದು ಧರ್ಮ ಕೂಡ ಹೇಳುತ್ತದೆ. ಇಂತಹ ಕ್ಷುಲ್ಲಕ ಹೇಳಿಕೆಗಳ ಮೂಲಕ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ” ಎಂದು ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.