ರಜೆ, ಇಲ್ಲವೆ ಯಾವುದಾದ್ರೂ ಹಬ್ಬ ಬಂದ್ರೆ, ಜನರು ಮನೆ ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಮನೆಗಳಲ್ಲಿ ಶುಚಿಗೊಳಿಸುವ ಸಮಯದಲ್ಲಿ, ಟೇಬಲ್, ಖುರ್ಚಿ ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಈ ವೇಳೆ ಅವುಗಳ ಕೆಳಗೆ ಅಡಗಿ ಕುಳಿರುತವ ಕೀಟಗಳು ಹೊರ ಬರುತ್ತವೆ. ಹಾಗೇಯೆ ಮನೆ ಕ್ಲೀನಿಂಗ್ ವೇಳೆ ಚೇಳು ಕಂಡರೆ ಪ್ಯಾನಿಕ್ ಆಗಬೇಡಿ, ಅವುಗಳನ್ನು ಕೊಲ್ಲಬೇಡಿ, ಏಕೆಂದರೆ ಅವುಗಳು ಒಳ್ಳೆಯ ಸಂಕೇತವೆಂದು ಹೇಳಲಾಗುತ್ತದೆ.
Becareful: ಈ ಲಕ್ಷಣಗಳು ಇದ್ರೆ ಕೋಲ್ಡ್ ಅಂತ ಸುಮ್ಮನಾಗಬೇಡಿ, ಇದು ಗಂಟಲು ಕ್ಯಾನ್ಸರ್!
ಸಾಮಾನ್ಯವಾಗಿ ಲಕ್ಷ್ಮಿಚೇಳು ಹುಳುವನ್ನು ಎಲ್ಲರೂ ನೋಡಿರುತ್ತೀರಿ. ಒಣಗಿದ ಮರ, ತೇವವಿರುವ ಜಾಗ, ಕಲ್ಲುಗಳ ಕೆಳಗೆ ಹೀಗೆ ಅನೇಕ ಸ್ಥಳಗಳಲ್ಲಿ ನಾವು ಜರಿಗಳು ವಾಸಮಾಡುವುದನ್ನು ನೋಡಬಹುದು. ಕೆಲವರು ಇದರಲ್ಲಿ ವಿಷವಿರುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಇದು ಕಿವಿಯೊಳಗೆ ಹೋದರೆ ಮೆದುಳನ್ನು ತಿನ್ನುತ್ತದೆ ಎನ್ನುವ ಕಾರಣಕ್ಕಾಗಿ ಇದು ಮನೆಯೊಳಗೆ ಬಂದಾಕ್ಷಣ ಮನೆಯ ಸದಸ್ಯರು ಅದನ್ನು ಹೊಡೆದು ಹಾಕುತ್ತಾರೆ. ಅಷ್ಟು ಮಾತ್ರವಲ್ಲ ಜರಿ ಕಚ್ಚಿದರೆ ತುರಿಕೆ, ಉರಿ, ಅಲರ್ಜಿಯಂತಹ ಲಕ್ಷಣಗಳು ಕಚ್ಚಿದ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿಯೂ ಜನರು ಇದರಿಂದ ದೂರವಿರಲು, ಮನೆಯನ್ನು ಪ್ರವೇಶಿಸದಂತೆ ಕಾಳಜಿವಹಿಸುತ್ತಾರೆ. ಜರಿ ಮನೆಯೊಳಗೆ ಬಂದರೆ ಅದನ್ನು ಶುಭವೆಂದು ಪರಿಗಣಿಸಬೇಕೇ.? ಅಥವಾ ಅಶುಭವೆಂದು ಪರಿಗಣಿಸಬೇಕೆ.?
ಜರಿ ಯಾವ ಸ್ಥಳದಲ್ಲಿ ನೋಡುವುದು ಶುಭವಾಗಿದೆ.?
ಜರಿ ಹುಳುವನ್ನು ಅಥವಾ ಶತಪದಿಯನ್ನು ರಾಹುವಿನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಜರಿಯನ್ನು ನಾವು ಮನೆಯಲ್ಲಿ ನೋಡುವುದು ಅಥವಾ ಕನಸಿನಲ್ಲಿ ಶುಭ ಮತ್ತು ಅಶುಭ ಎರಡೂ ರೀತಿಯಾದ ಸೂಚನೆಯನ್ನು ನೀಡುತ್ತದೆ. ಒಂದು ವೇಳೆ ಓರ್ವ ವ್ಯಕ್ತಿ ತನ್ನ ಮನೆಯ ದೇವರ ಕೋಣೆಯಲ್ಲಿ ಜರಿಗಳು ಓಡಾಡುವುದನ್ನು ನೋಡಿದರೆ ಅದು ನೀವು ಶೀಘ್ರದಲ್ಲೇ ಶುಭ ಸುದ್ದಿಯನ್ನು ಪಡೆದುಕೊಳ್ಳುತ್ತೀರಿ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರಬಹುದು. ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಜರಿ ನೋಡಿ ಅದು ಕಣ್ಮರೆಯಾದರೆ, ಅದೃಷ್ಟವು ನಿಮಗೆ ಅನುಕೂಲಕರವಾಗಲಿದೆ ಎಂದರ್ಥ
2. ಶೌಚಾಲಯದಲ್ಲಿ ಜರಿಯನ್ನು ನೋಡುವುದರ ಅರ್ಥವೇನು.?
ಆದರೆ, ನೀವು ಇದ್ದಕ್ಕಿದ್ದಂತೆ ಜರಿಯನ್ನು ಅಥವಾ ಲಕ್ಷ್ಮಿ ಚೇಳನ್ನು ಶೌಚಾಲಯದಲ್ಲಿ ಅಥವಾ ಸ್ನಾನ ಮಾಡುವ ಕೋಣೆಯಲ್ಲಿ ನೋಡಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಯಾವ ವ್ಯಕ್ತಿ ಈ ಸ್ಥಳದಲ್ಲಿ ಜರಿಯನ್ನು ನೋಡುತ್ತಾನೋ ಆ ವ್ಯಕ್ತಿಯ ಜಾತಕದಲ್ಲಿ ರಾಹು ಕೆಟ್ಟ ಫಲಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ರಾಹುವಿನ ಅಶುಭ ಫಲಗಳಿಂದ ವ್ಯಕ್ತಿಯು ಆರೋಗ್ಯದ ಸಮಸ್ಯೆಗಳನ್ನು, ಹಣಕಾಸಿನ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
3. ಕನಸಿನಲ್ಲಿ ಜರಿಯನ್ನು ನೋಡುವುದು:
ಇನ್ನು ನಾವು ಕನಸುಗಳ ಬಗ್ಗೆ ಹೇಳುವುದಾದರೆ, ಕನಸಿನಲ್ಲಿ ನಾವು ಜರಿಯನ್ನು ನೋಡುವುದು ಎಂದರೆ ಅದು ನಿಮ್ಮ ಜೀವನಕ್ಕೆ ಶುಭ ಸೂಚನೆಯಾಗಿದೆ. ಇಂತಹ ಕನಸುಗಳು ನಿಮಗೆ ಯಾವುದೋ ಒಂದು ಹಳೆಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವುದರ ಸೂಚನೆಯನ್ನು ನೀಡುತ್ತದೆ. ಆರೋಗ್ಯದ ಸಮಸ್ಯೆಗಳಿಂದ ಮುಕ್ತರಾಗುವುದರ ಬಗ್ಗೆ ಹೇಳುತ್ತದೆ. ಇದು ಕೆಲಸದಲ್ಲಿ ಬಡ್ತಿ ಪಡೆಯುವ ಅಥವಾ ದೊಡ್ಡ ಜವಾಬ್ದಾರಿಯನ್ನು ಪಡೆಯುವ ಸೂಚನೆಯಾಗಿದೆ.
ಕನಸಿನಲ್ಲಿ ಜರಿ ಕಾಣಿಸಿಕೊಳ್ಳುವುದು ಅಶುಭ ಸೂಚನೆಯನ್ನು ನೀಡುವುದು:
ನಿಮ್ಮ ಕನಸಿನಲ್ಲಿ ಸತ್ತು ಹೋಗಿರುವ ಜರಿಯು ಕಾಣಿಸಿಕೊಂಡರೆ ಅದು ದೊಡ್ಡ ಸಮಸ್ಯೆ ನಿಮ್ಮ ಮನೆ ಬಾಗಿಲನ್ನು ತಟ್ಟುತ್ತಿದೆ ಎಂಬುದನ್ನು ಹೇಳುತ್ತದೆ. ಮತ್ತೊಂದೆಡೆ, ನೀವು ಕನಸಿನಲ್ಲಿ ಜರಿ ಹುಳುವನ್ನು ಕೊಲ್ಲುತ್ತಿರುವುದನ್ನು ನೋಡಿದರೆ, ಅದು ನಿಮ್ಮ ಯಾವುದೋ ಸಮಸ್ಯೆಗೆ ಪರಿಹಾರದ ಸೂಚಕವಾಗಿದೆ. ನೀವು ಕನಸಿನಲ್ಲಿ ಜರಿಯು ಕಾಣಿಸಿಕೊಂಡು ತಕ್ಷಣ ಮರೆಯಾದರೆ ಅದು ನಿಮ್ಮ ಅದೃಷ್ಟದ ಬಾಗಿಲು ಬಹುಬೇಗ ತೆರೆಯಲಿದೆ ಎಂಬುದನ್ನು ಹೇಳುತ್ತದೆ
ಜರಿ ಅಥವಾ ಶತಪದಿ ಕನಸಿನಲ್ಲಿ ಕಾಣಿಸಿಕೊಳ್ಳುವುದು ಅಥವಾ ಇದ್ದಕ್ಕಿದ್ದಂತೆ ಮನೆಯಲ್ಲಿ ಕಾಣಿಸಿಕೊಳ್ಳುವುದು ಅನೇಕ ರೀತಿಯಾದ ಸೂಚನೆಯನ್ನು ನೀಡುತ್ತದೆ. ಅವುಗಳಲ್ಲಿ ಒಂದಿಷ್ಟು ಸೂಚನೆಗಳು ನಮಗೆ ಶುಭವೆಂದು ಗುರುತಿಸಲಾದರೆ, ಒಂದಿಷ್ಟು ಅಶುಭವೆಂದು ಗುರುತಿಸಲಾಗುತ್ತದೆ.