ಬೆಂಗಳೂರು: ಖರ್ಗೆ ಅವರು ಹೇಳಿದ ಮೇಲೆ ಏನು ಮಾತಾಡೋದಕ್ಕೆ ಹೋಗೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಹೈಕಮಾಂಡ್ನಿಂದ ಸಿಎಂ ಆಯ್ಕೆ ಎಂಬ ವಿಚಾರವಾಗಿ ಮಾತನಾಡಿ, ಶಾಸಕರನ್ನು ಕೇಳಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ.
ಶಾಸಕರ ಅಭಿಪ್ರಾಯ ಏನೇ ಇದ್ರೂ 138 ಜನ ಒಂದೇ ಅಭಿಪ್ರಾಯ ಹೇಳಲ್ಲ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಖರ್ಗೆ ಅವರು ಹೇಳಿದ ಮೇಲೆ ಏನು ಮಾತಾಡೋದಕ್ಕೆ ಹೋಗೋದಿಲ್ಲ. ಪಕ್ಷ ನಾಯಕತ್ವದ ಬಗ್ಗೆ ಎಲ್ಲಾ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆನ ಎಂದರು.
Google Search: ಗೂಗಲ್ʼನಲ್ಲಿ ಅಪ್ಪಿತಪ್ಪಿಯೂ ಈ ವಿಷಯಗಳನ್ನು ಸರ್ಚ್ ಮಾಡಬೇಡಿ…! ಜೈಲಿಗೆ ಹೋಗೋದು ಗ್ಯಾರಂಟಿ
ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡೋ ರಾಜಣ್ಣ ಅವರಿಂದ ಡ್ಯಾಮೇಜ್ ಆಗ್ತಿದೆ ಎಂಬ ಕಡೂರು ಶಾಸಕ ಆನಂದ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯ ಹೇಳಲು ಸರ್ವರಿಗೂ ಸ್ವತಂತ್ರರಿದ್ದಾರೆ. ಅವರು ಹೇಳಿಕೊಂಡರೆ ನಮ್ಮ ಆಕ್ಷೇಪ ಇಲ್ಲ ಎಂದರು.
ಎಸ್ಸಿಎಸ್ಟಿ ಹಣವನ್ನ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ಆರ್. ಅಶೋಕ್ ಆರೋಪ ವಿಚಾರವಾಗಿ ಮಾತನಾಡಿ, ಅವರ ಕಾಲದಲ್ಲಿ ಎಷ್ಟು ಉಪಯೋಗಿಸಿಕೊಂಡಿದ್ದಾರೆ. ವಿಪಕ್ಷದಲ್ಲಿ ಇದ್ದಾರೆ ಅದಕ್ಕೆ ಆರೋಪ ಮಾಡುತ್ತಿದ್ದಾರೆ ಇದು ಅವರ ಚಾಳಿಯಾಗಿದೆ. ಎಸ್ಸಿಎಸ್ಟಿಗೆ ಏನು ಅನುದಾನ ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಉಳಿದಿದ್ದು ಮಾರ್ಚ್ 31ರ ಒಳಗಾಗಿ ಕೊಡುತ್ತೇವೆ ಎಂದು ಹೇಳಿದರು.