ಬೆಂಗಳೂರು: ಸಿಎಂ ಸಿದ್ದರಾಮಯ್ಯದೇವರಾಜ್ ಅರಸು ದಾಖಲೆ ಮುರಿದು ಸಿಎಂ ಆಗಿ ಮುಂದುವರೆಯುತ್ತಾರೆ ಎಂಬ ಚರ್ಚೆಯ ವಿಚಾರಕ್ಕೆ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ತುಂಬಿದ ಕೊಡ ತುಳಕಿತಲೇ ಪರಾಕ್: ಹೊರಬಿತ್ತು ಮೈಲಾರಲಿಂಗೇಶ್ವರನ ಕಾರ್ಣಿಕ!
ದೇವರಾಜು ಅರಸು 7ವರ್ಷಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಇರ್ತಾರೆ
ಏಳು ವರ್ಷಗಳಲ್ಲ 10ವರ್ಷ ಇರ್ತಾರೆ. ಹೈಕಮಾಂಡ್ ಸಿದ್ದರಾಮಯ್ಯನವರನ್ನ ಸಿಎಂ ಮಾಡಿದ್ದಾರೆ, ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ. ಅಲ್ಲದೆ ಸಧ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ , ಈ ಅವಧಿ ಪೂರೈಸಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೇವೆ, ಮುಂದಿನ ಬಾರಿಯು ನಾವು ಅಧಿಕಾರಕ್ಕೆ ಬರ್ತೇವೆ ಎಂದು ತಿಳಿಸಿದರು.