ಬೆಂಗಳೂರು: ಪಕ್ಷ ಏನೇ ಜವಾಬ್ದಾರಿ ಕೊಟ್ರೂ ಸಮರ್ಪಕವಾಗಿ ಕೆಲಸ ಮಾಡುತ್ತೇನೆ. ಹಿಂದೆಯೂ ಕೆಲಸ ಮಾಡಿದ್ದೇನೆ ಎಂದು ಶಾಸಕ ಡಿ.ಟಿ ರಾಜೇಗೌಡ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಮಾಡಬೇಕು,
ಆದ್ದರಿಂದ ಹೆಚ್ಚು ಒತ್ತು ನೀಡಿ ಸಿಎಂ ಸಿದ್ದರಾಮಯ್ಯ ಅವರಿಗೆ, ಜಾರ್ಜ್ ಹಾಗೂ ಡಿಕೆಶಿ ಅವರಿಗೆ ಗೌರವ ನೀಡುವ ಕೆಲಸ ಮಾಡುತ್ತೇನೆ ಎಂದರು. ಇನ್ನೂ ರಾಜ್ಯದಲ್ಲಿ ಬರದ ಚಾಯೆ ಇದೆ. ಇರೋ ಡ್ಯಾಮಲ್ಲಿ ನೀರಿಲ್ಲ. ಭೂ ಕುಸಿತದಿಂದ ಶಿಲ್ಟಿಂಗ್ ಆಗ್ತಿದೆ. ಇತ್ತೀಚೆಗೆ ನೀರಿನ ಶೇಕರಣೆ ಕಡಿಮೆ ಆಗ್ತಿದೆ. ರಿನೀವಬಲ್ ಎನರ್ಜಿ, ಸೋಲಾರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ರೆ ಮುಂದೆ ಸಮಸ್ಯೆ ಆಗಲಿದೆ.
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ಅದಲ್ಲದೆ ಡಿಕೆಶಿ ಅವರು ಹಿಂದೆ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆಯನ್ನೂ ನೀಗಿಸಿದ್ರು. ಇನ್ನೂ ಎರಡು ವರ್ಷಕ್ಕೆ ಸೀಮಿತ ಮಾಡಿರೋ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಅಂಬೇಡ್ಕರ್ ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡಲಿದೆ. ಬೇರೆ ಪಕ್ಷದ ರೀತಿ ಭಾವನಾತ್ಮಕ ರೀತಿ ಕೆಲಸ ಮಾಡಲ್ಲ. ಯಾವಗಲೂ ಅಭಿವೃದ್ಧಿ ಪೂರಕವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.