ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿಂದೂ ಅಸ್ತ್ರ ಪ್ರಯೋಗಿಸಿದ್ದಾರೆ. ಅಮೆರಿಕಾದ ಹಿಂದೂಗಳಿಗೆ ದೀಪಾವಳಿ ಶುಭಾಶಯ ತಿಳಿಸಿದ ಟ್ರಂಪ್, ಇತ್ತೀಚಿಗೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಕ್ರಿಶ್ಚಿಯನ್ನರು ಮತ್ತು ಇತರೆ ಅಲ್ಪಸಂಖ್ಯಾಕರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿದ್ದರು.
“ನಾನು ಅಧ್ಯಕ್ಷನಾಗಿರುತ್ತಿದ್ದರೆ ಇಂಥದ್ದು ನಡೆಯಲು ಬಿಡುತ್ತಿರಲಿಲ್ಲ. ಆದರೆ ಹಾಲಿ ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಮೆರಿಕದಲ್ಲಿರುವ ಮತ್ತು ಜಗತ್ತಿನಲ್ಲಿರುವ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ. ಕಟ್ಟರ್ ಎಡಪಂಥೀಯರ ಹಿಂದೂ ವಿರೋಧಿ ಅಜೆಂಡಾದಿಂದ ಹಿಂದೂ ಅಮೆರಿಕನ್ನರನ್ನು ನಾನು ರಕ್ಷಿಸುತ್ತೇನೆ.
Marigold: ಈ ವಿಧಾನ ಅನುಸರಿಸಿ ಚೆಂಡು ಹೂ ಬೆಳೆದರೆ 1 ಎಕರೆಯಲ್ಲಿ ಲಕ್ಷಗಟ್ಟಲೆ ಹಣ ಗಳಿಸಬಹುದು!
ನನ್ನ ಆಡಳಿತಾವಧಿಯಲ್ಲಿ ನಾನು ನನ್ನ ಸ್ನೇಹಿತ ಮೋದಿ ಹಾಗೂ ಭಾರತದೊಂದಿಗೆ ಉತ್ತಮ ಪಾಲುದಾರಿಕೆ ಹೊಂದುತ್ತೇನೆ ಎಂದು ಘೋಷಿಸಿದ್ದರು.ತಾನು ಅಧ್ಯಕ್ಷನಾದ್ರೆ ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಭರವಸೆ ನೀಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ಗೆ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ ಎಂದು ಟ್ರಂಪ್ ಟೀಕಿಸಿದ್ದಾರೆ. ಅಂದಹಾಗೇ, ಅಮೆರಿಕಾದಲ್ಲಿ ಈವರೆಗೂ 6.1 ಕೋಟಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.