ಹಾಸನ: ಯಾರಿಗೂ ನಾನು ಕೇರ್ ಮಾಡಿ ರಾಜಕಾರಣ ಮಾಡಲ್ಲ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಚನ್ನರಾಯಪಟ್ಟಣದಲ್ಲಿ ನಡೆದ ಹಾಸನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಾನು ಯಾವುದೋ ಊರಿನಲ್ಲಿ ದನ ಕಾದುಕೊಂಡಿದ್ದೆ. ಈಗ ಈ ಹಂತಕ್ಕೆ ಬೆಳೆದಿದ್ದೇನೆ. ಅದು ನಮ್ಮ ಸ್ವಂತ ಶಕ್ತಿ, ಇದರ ಮೇಲೆ ನಾನು ಬೆಳೆದಿದ್ದೇನೆ.
Health Care: ಹೃದಯದ ಕಾಯಿಲೆ ಇದ್ದರೆ ತಣ್ಣೀರಿನ ಸ್ನಾನ ಒಳ್ಳೆಯದೇ..? ಇಲ್ಲಿದೆ ನೋಡಿ ಮಾಹಿತಿ
ಯಾರ ಆಶೀರ್ವಾದದಿಂದಲೂ ಬೆಳೆದಿಲ್ಲ. ಯಾರಿಗೂ ನಾನು ಕೇರ್ ಮಾಡಿ ರಾಜಕಾರಣ ಮಾಡಲ್ಲ. ತಮಟೆ ಹೊಡೆಯೋದು ನನಗೆ ಗೊತ್ತಿದೆ. ಈ ಜಿಲ್ಲೆಯಲ್ಲಿ ತಮಟೆ ಹೊಡೆಸೋದು ನನಗೆ ಗೊತ್ತಿದೆ. ಅವನು ಚೆನ್ನಾಗಿ ತಮಟೆ ಹೊಡೆಯುತ್ತೇನೆ ಅವನಿಗೆ ಮಂತ್ರಿ ಸ್ಥಾನ ಕೊಡಿ ಎಂದು ಗೋಪಾಲಸ್ವಾಮಿ ಹಾಗೂ ಪುಟ್ಟೇಗೌಡರು ಹೇಳಬೇಕು ಎಂದಿದ್ದಾರೆ.