ಹಾಸನ : ಅಂದು ಒಕ್ಕಲಿಗರಿಗೆ ಕೊಡಲಾಗಿದ್ದ ಮೀಸಲಾತಿ ಕೋಟಾದಲ್ಲಿ ಕಡಿಮೆ ಮಾಡಿ ಅದನ್ನ ಮುಸ್ಲಿಂರಿಗೆ ನೀಡಿದ್ದು ನಾನು. ಜನವರಿ ೨೨ಕ್ಕೆ ಆಯೋಧ್ಯೆಗೆ ಬರುವಂತೆ ಕರೆ ಬಂದಿದ್ದು, ನಾನು ಮತ್ತು ಕುಟುಂಬ ಸಮೇತವಾಗಿ ಅಯೋಧ್ಯೆಗೆ ಹೋಗುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು. ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿದೆ. ಅಂದು ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿ ಕೋಟಾ ಕಡಿಮೆಮಾಡಿ ಮುಸ್ಲಿಂರಿಗೆ ಕೊಟ್ಟಿದ್ದು ನಾನು. ಮಲ್ಲಿಕಾರ್ಜುನ ಖರ್ಗೆ ಅವರು ಸಂವಿದಾನ ಕೊಟ್ಟ ಮೀಸಲಾತಿ ಭರ್ತಿಮಾಡಲು ಆಗದಿದ್ದಾಗ ಉದ್ಯೋದದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದ್ರು. ಶೇಕಡಾ ೧೫ ಎಸ್.ಸಿ. ಗಳಿಗೆ, ಶೇಕಡಾ ೩ ಎಸ್ಟಿಗಳಿಗೆ ಮೀಸಲಾತಿ ಇತ್ತು.
ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಅದನ್ನ ಶೇಕಡಾ ೧೫ ರಿಂದ ೧೮ಕ್ಕೆ ಶೇಕಡಾ ೩ ರಿಂದ ೫ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಸಿಎಂ ಆಗಿದ್ದ ಅವದಿಯಲ್ಲಿ ಮಾಡಿರುವುದಾಗಿ ಮೀಸಲಾತಿ ಬಗ್ಗೆ ತಮ್ಮ ಅವದಿಯಲ್ಲಿ ಕೈಕೊಂಡ ತೀರ್ಮಾನಗಳ ಬಗ್ಗೆ ದೇವೇಗೌಡರು ಇದೆ ವೇಳೆ ಸ್ಮರಿಸಿದರು. ಅಂದು ಶೇಕಡ ೨೩ ತೀರ್ಮಾನ ಮಾಡಿದ್ದು ಈಗಲೂ ಜಾರಿಯಲ್ಲಿ ಇದೆ. ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಇಷ್ಟು ವರ್ಷ ನಾವು ಮಾಡಿರೊ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಈ ಮೀಸಲಾತಿಯ ಫಲ ಅನುಭವಿಸಿವೆ.
ನಮ್ಮ ಅವದಿಯಲ್ಲಿ ತಿಪ್ಪೇಸ್ವಾಮಿ ಅವರು ಒಳ ಮೀಸಲಾತಿ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿದ್ರು. ಆಗ ಖರ್ಗೆ ಅವರು ಆಗ ವಿಪಕ್ಷದ ನಾಯಕರಾಗಿದ್ದರು. ಅವರು ತಮ್ಮ ಸೀಟ್ ನಿಂದ ನೆಗೆದು ಬಂದು ಆ ನಿರ್ಣಯ ಪ್ರತಿಯನ್ನು ಹರಿದು ಅವರ ಮುಖಕ್ಕೆ ಎಸೆದರು. ಆದರೇ ಇವತ್ತು ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಮಾತನಾಡಿದರು. ದೇವೇಗೌಡರು ಮಾಡಿದ ಕೆಲಸವನ್ನು ಮರೆ ಮಾಚೊ ಕೆಲಸವನ್ನು ಇಷ್ಡು ದಿನ ಮಾಡಿದಿರಿ ಎಂದು ಕುಟುಕಿದರು.
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ಈ ಜಿಲ್ಲೆಯ ಉಸ್ತುವಾರಿ ಮಂತ್ರಿ ರಾಜಣ್ಣ ಅವರು ಚುನಾವಣೆ ಮುಗಿಯೋ ವೇಳೆಯಲ್ಲಿ ನನಗೆ ಜ್ವರ ಬಂದು ಮಲಗಿದ್ದೆ. ಆಗ ಅವರು ನೀವು ಬಂದರೆ ನಾನು ಗೆಲ್ತಿನಿ ಇಲ್ಲಾ ಗೆಲ್ಲಲ್ಲ ಎಂದರು. ಅವರು ಜನರಲ್ ಕ್ಷೇತ್ರದಲ್ಲಿ ಸ್ಪರ್ದೆ ಮಾಡಿದ್ದರು. ಆಗ ಅವರು ೭೦೦+ ಮತಗಳ ಅಂತರದಲ್ಲಿ ಗೆದ್ದರು. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ನಾನು ತುಮಕೂರಿನಿಂದ ಸ್ಪರ್ದೆ ಮಾಡಿದಾಗ ನೀವು ಮುದ್ದು ಹನುಮೇಗೌಡರ ಸ್ಥಾನ ಕಿತ್ತುಕೊಂಡ್ರಿ ಅಂತಾ ಬಹಿರಂಗ ಸಭೆಯಲ್ಲಿ ಹೇಳಿದ್ರು. ೨೦೧೯ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಣ್ಣ ಮಾತನಾಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ ದೇವೇಗೌಡರು,
ಮೀಸಲಾತಿ ಬಗ್ಗೆ ಏನಾಗಿದೆ ಎನ್ನೋ ಬಗ್ಗೆ ಚರ್ಚೆ ಆಗಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ನಾನು ಕೊಂಡೊಯ್ಯುತ್ತೇನೆ. ನನಗೆ ನಾಲ್ಕು ಸೀಟ್ ಕೊಡ್ತಾರೊ, ಮೂರು ಕೊಡ್ತಾರೊ ಗೊತ್ತಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು? ೧೩ ತಿಂಗಳಿಗೆ ನನ್ನ ಪ್ರದಾನ ಮಂತ್ರಿ ಸ್ಥಾನ ತೆಗೆದಿದ್ದು ಯಾರು? ನನ್ನ ರಾಜಕೀಯ ಜೀವನದಲ್ಲಿ ೬೦ ವರ್ಷ ದುಡಿದಿದ್ದೇನೆ. ಯಾವ ಯಾವ ಸಮುದಾಯಕ್ಕೆ ಮೀಸಲಾತಿ ಲಾಭ ಆಗಿದೆ? ಇದರ ಲಾಭವನ್ನು ಯಾರು ಪಡೆದಿದ್ದಾರೆ? ಚರ್ಚೆ ಆಗಬೇಕು ಎಂಬುದು ನನ್ನ ಒತ್ತಾಯ ಎಂದರು. ಒಳ ಮೀಸಲಾತಿ ವಿಚಾರವನ್ನು ಕೇಂದ್ರಕ್ಕೆ ಹೊತ್ತುಹಾಕೊ ಕೆಲಸ ಮಾಡಿದ್ದಾರೆ.
ಇದನ್ನೇ ಮುಂದಿಟ್ಟು ಈ ಚುನಾವಣೆಯಲ್ಲಿ ಹೋರಾಟ ಮಾಡಲಾಗುವುದು. ನಾನು ಚುನಾವಣೆಗೆ ಸ್ಪರ್ದೆ ಮಾಡೊ ಪ್ರಶ್ನೆ ಇಲ್ಲ ಎಂದು ಹೇಳೀಕೆ ನೀಡುವುದರ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಮತ್ತೊಮ್ಮೆ ದೇವೇಗೌಡರು ಸ್ಪಷ್ಟಪಡಿಸಿದರು. ಸಂಜೆ ಒಕ್ಕಲಿಗರ ಒಂದು ಸಮಾವೇಶ ಇದ್ದು, ಎಸ್ ಎಂ ಕೃಷ್ಣ, ಡಿ.ಕೆ. ಶಿವಕುಮಾರ್, ನಾನು ನಮ್ಮ ಸ್ವಾಮಿಜಿ ಎಲ್ಲರೂ ಭಾಗಿಯಾಗುವರು ಎಂದ ಹೇಳಿದರು. ನಾನು ಅಯೋಧೆ ಗೆ ಹೋಗ್ತೇನೆ. ನಾನು ನನ್ನ ಪತ್ನಿ, ಕುಮಾರಸ್ವಾಮಿ ಕುಮಾರಸ್ವಾಮಿ ಪತ್ನಿ ಹಾಗು ನಿಖಿಲ್ ಹೋಗ್ತೇವೆ. ಜನವರಿ ೨೨ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ ಅದರಲ್ಲೆ ಹೋಗ್ತೇವೆ. ಅಯೋದ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ದಲ್ಲಿ ಭಾಗಿಯಾಗೊದಾಗಿ ಮಾಜಿ ಪ್ರದಾನಿ ದೇವೇಗೌಡರು ತಿಳಿಸಿದರು.